ಬೀದರ – ಸಿದ್ರಾಮಯ್ಯನವರು ಕೇವಲ ಐದಾರು ಮಂತ್ರಿಗಳನ್ನು ಖುಷಿ ಪಡಿಸೋಕೆ ಮಾತ್ರ ಬಜೆಟ್ ಮಂಡಿಸಿದ್ದಾರೆ ಎಂದು ಬೀದರ ದಕ್ಷಿಣ ಕ್ಷೇತ್ರದ ಶಾಸಕ ಶೈಲೇಂದ್ರ ಬೆಲ್ದಾಳೆ ಹೇಳಿದರು.
ಗುಲಬರ್ಗಾ, ಮೈಸೂರು, ಬೆಳಗಾವಿ, ವಿಜಯಪುರ, ಬೆಂಗಳೂರು ಜಿಲ್ಲೆಗಳಿಗೆ ಮಾತ್ರ ಭರಪೂರ ದುಡ್ಡು ಕೊಟ್ಟಿದ್ದಾರೆ. ಕಲಬುರ್ಗಿಗೆ ಯಾಕೆ ಹೆಚ್ಚು ಕೊಟ್ಟಿದ್ದಾರೆ ಅಂತ ನಿಮಗೆ ಗೊತ್ತಿದೆ ಅದು ಎಐಸಿಸಿ ಅಧ್ಯಕ್ಷರ ತವರೂರು.ಆದರೆ ಜಿಲ್ಲೆಯಲ್ಲಿ ಯಾವುದೇ ಅಭಿವೃದ್ಧಿ ಕಾರ್ಯ ಆಗುತ್ತಿಲ್ಲ ಜಿಲ್ಲಾ ಸಂಕೀರ್ಣ ಕೇವಲ ಘೋಷಣೆಗೆ ಸೀಮಿತವಾಗಿದೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.
ನಗರದಲ್ಲಿ ಪತ್ರಕರ್ತರೊಡನೆ ಅವರು ಮಾತನಾಡಿದರು.
ಈ ಜಿಲ್ಲೆಯಲ್ಲಿ ಈಶ್ವರ ಖಂಡ್ರೆ ಹಾಗೂ ರಹೀಂ ಖಾನ್ ಎಂಬ ಇಬ್ಬರು ಸಚಿವರಿದ್ದರೂ ವೇಸ್ಟ್ ಎಂದ ಬೆಲ್ದಾಳೆ, ಬೀದರ ಜಿಲ್ಲೆಗೆ ಯಾವುದೇ ಹೊಸ ಯೋಜನೆ ನೀಡಿಲ್ಲ. ಬೀದರ ಜನರ ಹಿತ ಕಾಪಾಡುವುದರಲ್ಲಿ ಅವರು ವಿಫಲರಾಗಿದ್ದಾರೆ ಎಂದರು.
ಎಲ್ಲಾ ಸಮುದಾಯದವರಲ್ಲಿ ಬಡವರಿದ್ದಾರೆ. ಆದರೆ ಸಿದ್ರಾಮಯ್ಯಗೆ ಕೇವಲ ಮುಸ್ಲಿಮ್ ಬಡವರಷ್ಟೇ ಕಾಣಿಸುತ್ತಾರೆ ಬಸವಣ್ಣನವರ ಹೆಸರು ಹೇಳುವ ಮುಖ್ಯಮಂತ್ರಿ ಕೇವಲ ಮುಸ್ಲಿಮರ ತುಷ್ಟೀಕರಣ ಮಾಡುತ್ತಾರೆ ಎಂದರು.
ವರದಿ : ನಂದಕುಮಾರ ಕರಂಜೆ, ಬೀದರ