spot_img
spot_img

ಹಿಡಕಲ್ ಜಲಾಶಯ ತುಂಬಿದೆ, ಈ ಸಲ ನೀರಿನ ಸಮಸ್ಯೆಯಾಗದು – ಬಾಲಚಂದ್ರ ಜಾರಕಿಹೊಳಿ

Must Read

spot_img
- Advertisement -

ಮೂಡಲಗಿ- ದೇವರ ಆಶೀರ್ವಾದದಿಂದ ಉತ್ತಮ ಮಳೆಯಾಗಿ ಈ ಬಾರಿ ಹಿಡಕಲ್ ಜಲಾಶಯವು ಭರ್ತಿಯಾಗಿದೆ. ೪೮ ಟಿಎಂಸಿ ನೀರು ಸಂಗ್ರಹವಾಗಿದೆ. ಇದರಿಂದ ನಮ್ಮ ರೈತರಿಗೆ ಕುಡಿಯುವ ನೀರಿನ ಸಮಸ್ಯೆಯಾಗುವುದಿಲ್ಲ. ಕಿನಾಲ, ಹಳ್ಳಗಳಿಗೆ ನೀರಿನ ಸಮಸ್ಯೆಯಿಲ್ಲ. ರೈತರು ಖುಷಿಯಿಂದ ಇರಬೇಕು ಎಂದು  ಬೆಮ್ಯೂಲ್ ಅಧ್ಯಕ್ಷ ಹಾಗೂ ಶಾಸಕ ಬಾಲಚಂದ್ರ ಜಾರಕಿಹೊಳಿ ಹೇಳಿದರು,

ರವಿವಾರ ಸಂಜೆ ತಾಲ್ಲೂಕಿನ ಹಳ್ಳೂರ ಗ್ರಾಮದ ಮಹಾಲಕ್ಷ್ಮಿ
ದೇವರ ದರ್ಶನ ಪಡೆದು ಮಾತನಾಡಿದ ಅವರು, ದಸರಾ ಮುಗಿದು ದೀಪಾವಳಿ ಹಬ್ಬಕ್ಕೆ ಅಣಿಯಾಗುತ್ತಿರುವ ಈ ಸಂದರ್ಭದಲ್ಲಿ ದೇವರು ಎಲ್ಲರಿಗೂ ಒಳ್ಳೆಯದು ಮಾಡುತ್ತಾನೆ ಎಂದರು

ಹಳ್ಳೂರ ಗ್ರಾಮದಲ್ಲಿಂದು ವಿವಿಧ ಕಾಮಗಾರಿಗಳಿಗೆ ಚಾಲನೆ ನೀಡಲಾಗಿದೆ. ಕೆಲ ಕಾರಣಗಳಿಂದ ಮಧ್ಯಾಹ್ನ ನಡೆದ ಕಾರ್ಯಕ್ರಮಗಳಲ್ಲಿ ಭಾಗಿಯಾಗಲು ಸಾಧ್ಯವಾಗಲಿಲ್ಲ. ಸರ್ವೋತ್ತಮ ಅವರು ಈ ಕಾರ್ಯಕ್ರಮಗಳನ್ನು ನೆರವೇರಿಸಿದ್ದಾರೆ. ಗ್ರಾಮದ ಮುಖಂಡರುಗಳು ಪದೇ ಪದೇ ಒತ್ತಾಯಿಸಿದ್ದರಿಂದ ನಾನು ಬರಬೇಕಾಯಿತು. ನಿಮ್ಮಲ್ಲಿನ ಮನಸ್ತಾಪಗಳನ್ನು ಪಕ್ಕಕ್ಕಿಟ್ಟು ಗ್ರಾಮದ ಸುಧಾರಣೆಗಾಗಿ ಒಗ್ಗಟ್ಟಿನಿಂದ ಶ್ರಮಿಸುವಂತೆ ಅವರು ಹೇಳಿದರು.

- Advertisement -

ಅರಭಾವಿ ಕ್ಷೇತ್ರದಲ್ಲಿ ಹದಗೆಟ್ಟಿರುವ ರಸ್ತೆಗಳನ್ನು ಅಭಿವೃದ್ಧಿಗೊಳಿಸಲು ಪ್ರಾಮಾಣಿವಾಗಿ ಶ್ರಮಿಸುತ್ತಿದ್ದೇನೆ. ಸರ್ಕಾರದ ಅನುದಾನದ ಕೊರತೆಯಿಂದ ಅಭಿವೃದ್ಧಿ ಕಾರ್ಯಗಳಿಗೆ ವಿಳಂಬವಾಗುತ್ತಿರುವುದು ಸತ್ಯ. ಇಷ್ಟಾಗಿಯೂ ನಾಗರಿಕರ ಮೂಲಭೂತ ಸೌಲಭ್ಯಗಳನ್ನು ನೀಗಿಸಲು ನಮ್ಮದೇ ಹಂತದಲ್ಲಿ ಯತ್ನಿಸುತ್ತಿದ್ದೇನೆ. ಅದರಲ್ಲೂ ತೋಟದ ರಸ್ತೆಗಳಿಗೆ ಮೊದಲ ಆಧ್ಯತೆ ನೀಡುತ್ತಿದ್ದೇನೆ. ಸ್ಥಳೀಯ ಮಟ್ಟದ ಮುಖಂಡರು ಹೇಳುವ ರೈತರ ತೋಟಪಟ್ಟಿ ರಸ್ತೆಗಳನ್ನು ಅಭಿವೃದ್ಧಿಪಡಿಸುತ್ತಿದ್ದೇನೆ.ನವ್ಹೆಂಬರ್ ೧೫ ರಿಂದ ಸಕ್ಕರೆ ಕಾರ್ಖಾನೆಗಳು ಆರಂಭವಾಗುವುದರಿಂದ ರೈತರ ಅನುಕೂಲಕ್ಕಾಗಿ ರಸ್ತೆಗಳನ್ನು ಸುಧಾರಣೆ ಮಾಡಲಾಗುತ್ತಿದೆ. ನಂತರ ಬಾಕಿ ಉಳಿದಿರುವ ರಸ್ತೆಗಳನ್ನು ಅಭಿವೃದ್ಧಿಪಡಿಸಲಾಗುವುದೆಂದು ಅವರು ತಿಳಿಸಿದರು.

ಮಕ್ಕಳು ತಂದೆ- ತಾಯಿಯ ಋಣ ತೀರಿಸಬೇಕು. ಕಷ್ಟಪಟ್ಟು ಮಕ್ಕಳನ್ನು ಸಮಾಜದ ಮುಖ್ಯ ವಾಹಿನಿಗೆ ತರಲು ಪ್ರಯತ್ನಿಸುತ್ತಿರುವ ಹೆತ್ತವರನ್ನು ಸರಿಯಾಗಿ ಉಪಚರಿಸಬೇಕು. ಡಂಬಾಚಾರಗಳಿಗೆ ಜೋತು ಬೀಳದೇ ಅನವಶ್ಯಕ ಖರ್ಚುಗಳಿಗೆ ಕಡಿವಾಣ ಹಾಕಬೇಕು ಎಂದು ಯುವಕರಿಗೆ ಕರೆ ನೀಡಿದರು.

ಶಾಸಕ ಬಾಲಚಂದ್ರ ಜಾರಕಿಹೊಳಿ ಅವರನ್ನು ವಿವಿಧ ಸಮಾಜಗಳ ಮುಖಂಡರು ಸತ್ಕರಿಸಿದರು.
ಈ ಸಂದರ್ಭದಲ್ಲಿ ಗ್ರಾಮ ಪಂಚಾಯತಿ ಅಧ್ಯೆಕ್ಷೆ ನೀಲವ್ವ ಹೊಸಟ್ಟಿ, ಉಪಾಧ್ಯೆಕ್ಷೆ ಜಯಶ್ರೀ ಮಿರ್ಜಿ, ಮುಖಂಡರಾದ ದೊಡ್ಡ ಬಸಪ್ಪ ಸಂತಿ, ಲಕ್ಷ್ಮಣ ಕತ್ತಿ, ಭೀಮಶಿ ಮಗದುಮ್ಮ, ಬಿ.ಜಿ. ಸಂತಿ, ಹಣಮಂತ ತೇರದಾಳ, ಕುಮಾರ ಲೋಕನ್ನವರ, ಸುರೇಶ ಕತ್ತಿ, ಅಡಿವೆಪ್ಪ ಪಾಲಭಾವಿ, ಶಂಕ್ರಯ್ಯ ಹಿರೇಮಠ, ಶ್ರೀಕಾಂತ ದುರದುಂಡಿ, ನಾರಾಯಣ ಪುಜೇರಿ, ಬಸವಣ್ಣೆಪ್ಪ ಡಬ್ಬನ್ನವರ, ಶ್ರೀಶೈಲ ಭಾಗೋಡಿ, ಮಲ್ಲಪ್ಪ ಛಬ್ಬಿ, ಶಿವದುಂಡ ಕೊಂಗಾಲಿ, ಮಹಾದೇವ ಹೊಸಟ್ಟಿ, ಅಫ್ತಾಬ ಮುಜಾವರ, ಶಿವಪ್ಪ ಅಟಮಟ್ಟಿ, ರಾಮನಗೌಡ ಪಾಟೀಲ, ಗೋವಿಂದ ಮಾದರ, ಶಂಕರ ಬೋಳನ್ನವರ, ಶ್ರೀಶೈಲ ಅಂಗಡಿ,ಗುರು ಹಿಪ್ಪರಗಿ, ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

- Advertisement -
- Advertisement -

Latest News

ಶ್ರೀನಿವಾಸ ಶಾಲೆಯ ಆಡಳಿತ ಮಂಡಳಿ ಬದಲಾಗುವುದಿಲ್ಲ – ಅಧ್ಯಕ್ಷ ರಂಗಣ್ಣ ಸೋನವಾಲಕರ

ಮೂಡಲಗಿ - ಶ್ರೀನಿವಾಸ ಶಾಲೆಯನ್ನು ಬೇರೆಯವರಿಗೆ ಮಾರುತ್ತಿದ್ದಾರೆ, ಆಡಳಿತ ಮಂಡಳಿ ಬದಲಾಗುತ್ತದೆ ಎಂಬ ವದಂತಿ ಹರಡಿದ್ದು ಅದು ಸಂಪೂರ್ಣ ಸುಳ್ಳು ಎಂದು ಸ್ಥಳೀಯ ಶ್ರೀನಿವಾಸ ಸ್ಕೂಲ್ಸ್...
- Advertisement -

More Articles Like This

- Advertisement -
close
error: Content is protected !!
Join WhatsApp Group