- Advertisement -
ದೇಹ ಇಹದಲ್ಲಿ ಮನ ಪರದಲ್ಲಿದ್ದರೆ ಏನು ಫಲವಯ್ಯಾ?
ತನು ಮನ ಒಂದಾದಲ್ಲಿ ಕೈಲಾಸವೆ ಇಹುದಲ್ಲಿ
ಕೈಯಲಿ ಮೊಬೈಲ್ ಹಿಡಿದು
ರಸ್ತೆಯಲಿ ಓಡಾಡುತಿರುವ ಜನರಿಂದ ಏನು ಫಲವಯ್ಯಾ ?
- Advertisement -
ತೋರಿಕೆಗೆ ಅಂಗೈಯಲ್ಲಿ ಪುಸ್ತಕ ಹಿಡಿದು
ಓದುವ ನಾಟಕ ಮಾಡುವವರಿಂದ ಏನು ಫಲವಯ್ಯಾ ?
ತರಗತಿಗೆ ಹೋಗುವೆನೆಂದು ಹೇಳಿ ಬೀದಿ ಬೀದಿಯಲಿ ತಿರುಗುವವರಿಂದ ಏನು ಫಲವಯ್ಯಾ ?
ಪರರ ಹೆಣ್ಣು ಮಕ್ಕಳನ್ನು ಸಹೋದರಿ ಎನ್ನದ ಮನುಜನಿಂದ
ಏನು ಫಲವಯ್ಯಾ ?
- Advertisement -
ಒಡವೆ,ವಸ್ತ್ರ,ಕಾಮಿನಿ,ಕಾಂಚಣ ಇವು ನನ್ನದೆಂದು ಬದುಕಿದರೆ ಏನು ಫಲವಯ್ಯಾ ?
ಮನದಲ್ಲಿ ಭಗವಂತನ ನಿಶ್ಚಲ ಮಾಡದೆ ಡಾಂಭಿಕ ಭಕ್ತನಾಗಿ
ಬದುಕಿದ್ದು ಫಲವೇನಯ್ಯಾ?
ಶ್ರೀ ಶಿವಬೋಧರಂಗನ ನಿತ್ಯ
ನೆನೆಯುವ ಜೀವವೇ ಪಾವನವಯ್ಯಾ
ಶಿವಕುಮಾರ ಕೋಡಿಹಾಳ ಮೂಡಲಗಿ