spot_img
spot_img

ರಾಷ್ಟ್ರ ಪ್ರಶಸ್ತಿ ಪಡೆದ ಬೂದಿಹಾಳ ಸರಕಾರಿ ಪ್ರೌಢಶಾಲೆಗೆ ಅನಿವಾಸಿ ಭಾರತೀಯ ಭೇಟಿ

Must Read

spot_img

ಬೈಲಹೊಂಗಲ: ರಾಷ್ಟ್ರ ಪ್ರಶಸ್ತಿ ಪಡೆದ ತಾಲೂಕಿನ ಬೂದಿಹಾಳ ಸರಕಾರಿ ಪ್ರೌಢಶಾಲೆಗೆ ಅನಿವಾಸಿ ಭಾರತೀಯ ಅಣ್ಣಪ್ಪ ಮೆಟಗುಡ ಭೇಟಿ ನೀಡಿದರು. ಶಾಲೆಯ ಪರಿಸರ, ಸುಸಜ್ಜಿತ ಗ್ರಂಥಾಲಯ, ಕ್ರೀಡಾ ಕೊಠಡಿ ವೀಕ್ಷಿಸಿ ಪ್ರಶಂಸೆ ವ್ಯಕ್ತಪಡಿಸಿದರು. ನಂತರ ಅವರು ಶಾಲಾ ಸಂಸತ್ತಿನ ನೂತನ ಮಂತ್ರಿಗಳ ಪ್ರಮಾಣ ವಚನ ಸ್ವೀಕಾರ ಸಮಾರಂಭದಲ್ಲಿ ಭಾಗಿಯಾಗಿ ಮಾತನಾಡಿ ಸೋತರೂ ಎದೆಗುಂದದೆ ಸಾಧಿಸುವ ಛಲವನ್ನು ವಿದ್ಯಾರ್ಥಿಗಳು ಮೈಗೂಡಿಸಿಕೊಳ್ಳಬೇಕು ಎಂದು ಹೇಳಿದರು. ಶಿಸ್ತುಬದ್ಧ ಅಧ್ಯಯನವೇ ಉತ್ತಮ ಅಂಕಗಳನ್ನು ಪಡೆಯಲು ಏಕೈಕ ಮಾರ್ಗ, ಪಾಲಿಗೆ ಬಂದ ಜವಾಬ್ದಾರಿಗಳನ್ನು ಅರಿತುಕೊಂಡು ದೇಶದ ಉತ್ತಮ ಪ್ರಜೆಗಳಾಗಿ ಎಂದು ಅವರು ಮಕ್ಕಳಿಗೆ ಸಲಹೆ ನೀಡಿದರು.

ಮುಖ್ಯ ಶಿಕ್ಷಕರಾದ ಎನ್.ಆರ್.ಠಕ್ಕಾಯಿ ಮಾತನಾಡಿ ಮೂಲತಃ ಬೈಲಹೊಂಗಲದವರಾದ ಅಣ್ಣಪ್ಪ ಮೆಟಗುಡ ಸದ್ಯ ಅಮೇರಿಕಾದಲ್ಲಿ ವಾಸವಾಗಿದ್ದು ಶಿಕ್ಷಣದ ಬಗ್ಗೆ ಅಪಾರ ಕಾಳಜಿ ಹೊಂದಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಎಸ್.ಎಸ್.ಎಲ್.ಸಿಯಲ್ಲಿ‌ರ‍್ಯಾಂಕ್ ಬಂದ ವಿದ್ಯಾರ್ಥಿಗಳಿಗೆ‌ ಅನುಕೂಲವಾಗಲೆಂದು ಹತ್ತು ವರ್ಷಗಳ ಹಿಂದೆ ಒಂದು ಲಕ್ಷ ರೂಪಾಯಿ ನಿರಂತರ ಠೇವಣಿ ಇಟ್ಟಿದ್ದು ಅವರ ಶಿಕ್ಷಣ ಪ್ರೀತಿಯನ್ನು ಎತ್ತಿ ತೋರಿಸುತ್ತದೆ ಎಂದರು. ಅದಲ್ಲದೇ ಶಾಲಾ ಗ್ರಂಥಾಲಯಕ್ಕೂ ದೇಣಿಗೆ ನೀಡುವುದರ ಮೂಲಕ ತಮ್ಮ ಉದಾರತೆ ತೋರಿದ್ದಾರೆ ಎಂದು ಪ್ರಶಂಸೆ ವ್ಯಕ್ತಪಡಿಸಿದರು.

ದೈಹಿಕ ಶಿಕ್ಷಣ ಶಿಕ್ಷಕರಾದ ಪ್ರವೀಣ ಗುರುನಗೌಡರ ನೂತನ ಮಂತ್ರಿಗಳ ಜವಾಬ್ದಾರಿಗಳನ್ನು ತಿಳಿಸಿಕೊಡುತ್ತ ಶಾಲಾ ಸಂಸತ್ತು ಉತ್ತಮವಾಗಿ ಕಾರ್ಯ ನಿರ್ವಹಿಸಲಿ ಎಂದು ಶುಭ ಕೋರಿದರು. ಮಲ್ಲಿಕಾರ್ಜುನ ತಡಸಲೂರ (ಪ್ರಧಾನಿ), ಸಾಕ್ಷಿ ನಾಗಣ್ಣವರ (ಉಪಪ್ರಧಾನಿ), ಅಮೂಲ್ಯ ಸೂರ್ಯವಂಶಿ ( ಹಣಕಾಸು ಮಂತ್ರಿ), ರಾಜೇಶ್ವರಿ ಸೊಗಲದ (ವಿಜ್ಞಾನ ಮತ್ತು ತಂತ್ರಜ್ಞಾನ ಮಂತ್ರಿ), ಅಭಿಷೇಕ ಹೊಂಗಲ (ಆರೋಗ್ಯ ಮತ್ತು ಸ್ವಚ್ಛತಾ ಮಂತ್ರಿ), ಅಭಿಲಾಷ ಹೊಂಗಲ (ಕ್ರೀಡಾ ಮಂತ್ರಿ), ಐಶ್ವರ್ಯ ಕುಲಕರ್ಣಿ (ಗ್ರಂಥಾಲಯ ಮಂತ್ರಿ), ಸಿದ್ಧನಗೌಡ ಪಾಟೀಲ (ಪ್ರವಾಸ ಮಂತ್ರಿ), ಅಕ್ಷಯ ನರೇಂದ್ರಮಠ (ಸಾಂಸ್ಕೃತಿಕ ಮಂತ್ರಿ), ಅಮೃತಾ ಜೋಗಿಗುಡ್ಡ (ಶಿಕ್ಷಣ ಮಂತ್ರಿ) ದೇವರ ಹೆಸರಿನಲ್ಲಿ ಪ್ರಮಾಣ ವಚನ ಸ್ವೀಕರಿಸಿದರು.

ಕಾರ್ಯಕ್ರಮದಲ್ಲಿ ಎಸ್.ಡಿ.ಎಂ.ಸಿ ಸದಸ್ಯರಾದ ರಮೇಶ ಸೂರ್ಯವಂಶಿ, ಪ್ರಾಥಮಿಕ ಶಾಲೆಯ ಪ್ರಧಾನ ಗುರುಗಳಾದ ಎಂ.ಜಿ.ಚರಂತಿಮಠ, ಶಿಕ್ಷಕರಾದ ಶಿವಾನಂದ ಬಳಿಗಾರ, ಶ್ರೀಪಾಲ ಚೌಗಲಾ, ರೇಖಾ ಸೊರಟೂರ, ಹೇಮಲತಾ ಪುರಾಣಿಕ, ವೀರೇಂದ್ರ ಪಾಟೀಲ ಉಪಸ್ಥಿತರಿದ್ದರು. ಚುನಾವಣಾ ಸಾಕ್ಷರತಾ ಕ್ಲಬ್ ನೋಡಲ್ ಶಿಕ್ಷಕರಾದ ಸುನೀಲ ಭಜಂತ್ರಿ ಪ್ರಮಾಣ ವಚನ ಬೋಧಿಸಿ ಕಾರ್ಯಕ್ರಮ ನಿರ್ವಹಿಸಿದರು. ತನುಜಾ ಬಡಿಗೇರ ಪ್ರಾರ್ಥಿಸಿದರು. ಸಹನಾ ಶೀಗಿಹಳ್ಳಿಮಠ ಸ್ವಾಗತಿಸಿದರು.

- Advertisement -
- Advertisement -

Latest News

ಸಾಹಿತ್ಯ ಕ್ಷೇತ್ರದಲ್ಲಿ ರಶ್ಮಿಯಾಗಿ ಹೊಳೆದ ವಿ.ಕೃ.ಗೋಕಾಕ್!

ಬೇರೆಯವರ ಮೇಲೆ ಅವಲಂಬಿತವಾದ ಬದುಕು, ಸಾಧನೆ “ಮರವನ್ನು ಆಶ್ರಯಿಸಿ ಬೆಳೆದ ಬಳ್ಳಿಯಂತೆ” ಆಶ್ರಯ ತಪ್ಪಿದಾಗ ಅದು ನೆಲಕಚ್ಚುವುದು ಎಂದವರು ವಿನಾಯಕ ಕೃಷ್ಣ ಗೋಕಾಕ್ (ವಿ.ಕೃ.ಗೋಕಾಕ್). ಕನ್ನಡಕ್ಕೆ...
- Advertisement -

More Articles Like This

- Advertisement -
close
error: Content is protected !!