spot_img
spot_img

ಕಥನ ಕಲೆಯಿದ್ದರೆ ಮಾತ್ರ ಕಾದಂಬರಿ ಬರವಣಿಗೆ ಸರಳವಾಗುತ್ತದೆ – ಸಂಗಮೇಶ ಗುಜಗೊಂಡ

Must Read

spot_img

ಮೂಡಲಗಿ – ಯಾರಿಗೆ ಕಥನ ಕಲೆ ಗೊತ್ತಿದೆಯೋ ಅವರು ಮಾತ್ರ ಕಾದಂಬರಿ ಬರೆಯಲು ಸಾಧ್ಯ ಅದನ್ನು ಭಾಸ್ಕರ ಸಣ್ಣಕ್ಕಿಯವರು ಸಾಧಿಸಿದ್ದಾರೆ. ಗೊಲ್ಲ ಭಾಮೆ ಎಂಬ ಕಾದಂಬರಿಯಲ್ಲಿ ಕೊನೆಯವರೆಗೂ ಕುತೂಹಲವನ್ನು ಉಳಿಸಿಕೊಂಡು ಬಂದಿದ್ದಾರೆ ಎಂದು ಮಕ್ಕಳ ಸಾಹಿತಿ ಸಂಗಮೇಶ ಗುಜಗೊಂಡ ಹೇಳಿದರು.

ಮೂಡಲಗಿಯ ಹಿರಿಯರಾದ ರೇ.ಭಾಸ್ಕರ ಸಣ್ಣಕ್ಕಿಯವರ ಗೊಲ್ಲ ಭಾಮೆ ಎಂಬ ಕಾದಂಬರಿ ಬಿಡುಗಡೆ ಮಾಡಿ ಅವರು ಮಾತನಾಡಿದರು.

ಸಣ್ಣಕ್ಕಿಯವರು ಪ್ರಚಾರಪ್ರಿಯರಲ್ಲ. ಸುಮಾರು ಹನ್ನೆರಡು ಕೃತಿಗಳನ್ನು ರಚಿಸಿದ್ದರೂ ಯಾರಿಗೂ ಹೇಳಿಕೊಂಡಿಲ್ಲ ಅವರ ಕಾದಂಬರಿಗಳಲ್ಲಿ ಮಾನವೀಯತೆ ಮತ್ತು ಜೀವನ ಪ್ರೀತಿ ಪ್ರಕಟಗೊಂಡಿದೆ. ಪ್ರಚಾರ ಪ್ರಿಯರಲ್ಲದ ಸಣ್ಣಕ್ಕಿಯವರನ್ನು ನಾವೆಲ್ಲ ಸೇರಿ ಬೆಳಕಿಗೆ ತರಬೇಕಾಗಿದೆ ಎಂದು ಅವರು ನುಡಿದರು.

ಮೂಡಲಗಿ ಕಸಾಪ ಅಧ್ಯಕ್ಷರಾದ ಡಾ. ಸಿಂಧಿಹಟ್ಟಿಯವರು ಮಾತನಾಡಿ, ಮಾನವ ನಿರ್ಮಿತ ಬಹು ಗಮನಾರ್ಹ ಸೃಷ್ಟಿ ಎಂದರೆ ಅದು ಪುಸ್ತಕ‌ ಎಲ್ಲದಕ್ಕೂ ಅಳಿವಿದೆ ಆದರೆ ಪುಸ್ತಕಕ್ಕೆ ಅಳಿವಿಲ್ಲ. ನಾವು ಮಕ್ಕಳಿಗೆ ಬಿಟ್ಟು ಹೋಗಬೇಕಾದ ಅಮೂಲ್ಯ ಆಸ್ತಿ ಪುಸ್ತಕಗಳು ಎಂದರು.

ಮೂಡಲಗಿ ವಲಯ ಬಿಇಓ ಅಜಿತ ಮನ್ನಿಕೇರಿ ಮಾತನಾಡಿ, ೯೨ ರ ಇಳಿ ವಯಸ್ಸಿನಲ್ಲಿಯೂ ಕಾದಂಬರಿ ಬರೆಯಬೇಕು ಎಂಬ ಸಣ್ಣಕ್ಕಿಯವರ ಉತ್ಸಾಹ ತಂಬಾ ಗಮನಾರ್ಹವಾದದ್ದು. ಅವರ ಗ್ರಂಥಗಳನ್ನು ಎಲ್ಲಾ ಶಾಲಾ ಗ್ರಂಥಾಲಯಗಳಿಗೆ ಸೇರ್ಪಡೆಗೊಳಿಸಲಾಗಿದೆ ಎಂದರು.

ಕಾದಂಬರಿಯ ಕರ್ತೃ ಭಾಸ್ಕರ ಸಣ್ಣಕ್ಕಿ ಮಾತನಾಡಿ, ಸಮಾಜದಲ್ಲಿ ನಡೆದ ಕೆಲ ಘಟನೆಗಳನ್ನು ಆಧರಿಸಿಯೇ ಈ ಕಾದಂಬರಿ ರಚಿಸಲಾಗಿದೆ. ನನಗೆ ಮರೆಯಲಾಗದ ಕೆಲವು ಘಟನೆಗಳು ಇಲ್ಲಿ ಇವೆ. ಅವನ್ನು ಆಡುಭಾಷೆಯಲ್ಲಿ ಕೊಟ್ಟಿದ್ದೇನೆ ಎಂದು ಹೇಳಿ, ತಮ್ಮ ಪುಸ್ತಕಗಳನ್ನು ಗ್ರಂಥಾಲಯಕ್ಕೆ ನೀಡಿದ ಬಿಇಒ ಮನ್ನಿಕೇರಿಯವರ ಸಹಾಯವನ್ನು ಸ್ಮರಿಸಿಕೊಂಡರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ರೇ. ಡೇನಿಯಲ್ ಬಾಬು ವಹಿಸಿ ಪ್ರಾರ್ಥನೆ ನೆರವೇರಿಸಿದರು.

ಚಿದಾನಂದ ಹೂಗಾರ ನಿರೂಪಣೆ ಮಾಡಿ ವಂದಿಸಿದರು

- Advertisement -
- Advertisement -

Latest News

ಪಂಚಮಸಾಲಿ ಸಮಾಜದ ಹೋರಾಟಕ್ಕೆ ಬೆಂಬಲ ಘೋಷಿಸಿದ ಶಾಸಕ ಹಾಗೂ ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ

ಕೂಡಲ ಸಂಗಮ ಜಯ ಮೃತ್ಯುಂಜಯ ಸ್ವಾಮಿಗಳ ಜೊತೆ ದೂರವಾಣಿ ಮೂಲಕ ಮಾತನಾಡಿ ಹೋರಾಟಕ್ಕೆ ಸಹಕಾರ ಘೋಷಣೆ ಮೂಡಲಗಿ: ಕೂಡಲಸಂಗಮ ಜಯ ಮೃತ್ಯುಂಜಯ ಸ್ವಾಮಿಗಳ ನೇತೃತ್ವದಲ್ಲಿ ಪಂಚಮಸಾಲಿ ಸಮಾಜಕ್ಕೆ...
- Advertisement -

More Articles Like This

- Advertisement -
close
error: Content is protected !!