ಎನ್ಎಸ್ಎಸ್ ವಾರ್ಷಿಕ ಶಿಬಿರ ಉದ್ಘಾಟನೆ

Must Read

ಮೂಡಲಗಿ -ತಾಲೂಕಿನ ಕಮಲದಿನ್ನಿ ಗ್ರಾಮದಲ್ಲಿ ಮೂಡಲಗಿ ಶಿಕ್ಷಣ ಸಂಸ್ಥೆಯ ಶ್ರೀ ಶಿವಬೋಧರಂಗ ಸಂಯುಕ್ತ ಪದವಿ ಪೂರ್ವ ಕಾಲೇಜಿನ ಎನ್ ಎಸ್ ಎಸ್ ಘಟಕದಿಂದ, ದತ್ತು ಗ್ರಾಮ ಕಮಲದಿನ್ನಿಯಲ್ಲಿ 2025-26ನೇ ಸಾಲಿನ ಎನ್ ಎಸ್ ಎಸ್ ವಿಶೇಷ ವಾರ್ಷಿಕ ಶಿಬಿರ ಉದ್ಘಾಟನೆಯಾಯಿತು.

ಬಸಪ್ಪ ಸಂಕನ್ನವರ ಅಧ್ಯಕ್ಷತೆ ವಹಿಸಿದ್ದರು, ಮೂಡಲಗಿ ಶಿಕ್ಷಣ ಸಂಸ್ಥೆಯ ಉಪಾಧ್ಯಕ್ಷರಾದ ಆರ್. ಪಿ. ಸೋನವಾಲ್ಕರ ಅವರು ಕಾರ್ಯಕ್ರಮ ಉದ್ಘಾಟಿಸಿದರು. ಮುಖ್ಯ ಅತಿಥಿಗಳಾಗಿ ಆಗಮುಸಿದ ಎಂ ಇ ಎಸ್ ಮಹಾವಿದ್ಯಾಲಯದ ನಿವೃತ್ತ ಪ್ರಾದ್ಯಾಪಕರಾದ ಎಸ್. ಜಿ.ನಾಯಿಕರವರು ಎನ್ ಎಸ್ ಎಸ್ ಮಹಾತ್ಮ ಗಾಂಧೀಜಿಯವರ ಗ್ರಾಮ ಸ್ವರಾಜ್ಯ ಕಲ್ಪನೆಯ ಕಾರ್ಯಕ್ರಮ ಆಗಿದ್ದು ಶಿಬಿರಾರ್ಥಿಗಳು ಇದರ ಸದುಪಯೋಗ ಪಡೆದುಕೊಂಡು ತಮ್ಮ ವ್ಯಕ್ತಿತ್ವ ವಿಕಸನ ಮಾಡಿಕೊಳ್ಳಬೇಕೆಂದು ಸೂಚಿಸಿದರು.

ಕಾರ್ಯಕ್ರಮದಲ್ಲಿ ಗ್ರಾಮದ ಹಿರಿಯರು ಕಾಲೇಜಿನ ಪ್ರಾಚಾರ್ಯರಾದ ಎಂ. ಎಸ್.ಪಾಟೀಲ. ಉಪನ್ಯಾಸಕರಾದ ಬಿ. ಜಿ. ಗಡಾದ, ಎಚ್ ಡಿ ಚಂದರಗಿ, ಎಲ್. ಆರ್. ಧರ್ಮಟ್ಟಿ, ಎಂ. ಜಿ. ಹೆಬ್ಬಳ್ಳಿ, ಎಸ್. ಪಿ. ಸಣ್ಣಮೇತ್ರಿ, ಉಪನ್ಯಾಸಕಿಯರಾದ ಡಾ ಆರ್ ಪಿ ಬಿರಾದಾರ, ಎಸ್. ಎಸ್. ಹಿರೇಮಠ, ಎಸ್ ಡಿ ಎ. ಎಸ್. ವಾಯ್. ಖಾನಪ್ಪಗೊಳ ಹಾಗೂ ಏನ್ ಎಸ್ ಎಸ್ ಸ್ವಯಂ ಸೇವಕರು ಉಪಸ್ಥಿತರಿದ್ದರು.

ಎಚ್. ಎಂ.ಹತ್ತರಕಿ ಸ್ವಾಗತಿಸಿದರು ಮತ್ತು ಎನ್ ಎಸ್ ಎಸ್ ಕಾರ್ಯಕ್ರಮ ಅಧಿಕಾರಿಗಳಾದ ಎಸ್. ಕೆ. ಹಿರೇಮಠ ನಿರೂಪಿಸಿದರು.

Latest News

ಶರಣರ ಪೂಜೆ ಮಾಡುವುದಕ್ಕಿಂತ ತತ್ವ ಅಳವಡಿಸಿಕೊಳ್ಳಬೇಕು

ಸಿಂದಗಿ; ೧೨ನೇ ಶತಮಾನದಲ್ಲಿ ಸಮ ಸಮಾಜದ ನಿರ್ಮಾಣ ಮಾಡಿದ ಶರಣರ ಜಯಂತಿಗಳ ಮೂಲಕ ಭಾವ ಚಿತ್ರಗಳನ್ನು ಪೂಜೆ ಮಾಡುವುದಕ್ಕಿಂತಲೂ ಶರಣರ ತತ್ವ ಸಿದಾಂತಗಳನ್ನು ನಾವೆಲ್ಲರು ಮೈಗೂಡಿಸಿಕೊಂಡು...

More Articles Like This

error: Content is protected !!
Join WhatsApp Group