spot_img
spot_img

ಚಿಟಿಗಿನಕೊಪ್ಪ ದತ್ತು ಗ್ರಾಮದಲ್ಲಿ ಎನ್.ಎಸ್.ಎಸ್ ಶಿಬಿರ ‌ ‌ ‌

Must Read

spot_img
- Advertisement -

‌ ‌  ಬೇವೂರ : ಬೇವೂರಿನ ಪಿ ಎಸ್ ಸಜ್ಜನ ಕಲಾ ಮಹಾವಿದ್ಯಾಲಯದ ವತಿಯಿಂದ ರಾಷ್ಟ್ರೀಯ ಸೇವಾ ಯೋಜನೆ ಘಟಕದ ವಾರ್ಷಿಕ ವಿಶೇಷ ಶಿಬಿರವನ್ನು ಸಮೀಪದ ಚಿಟಗಿನಕೊಪ್ಪ ಗ್ರಾಮದಲ್ಲಿ ಹಮ್ಮಿಕೊಳ್ಳಲಾಗಿದ್ದು ದಿನಾಂಕ 22-7-24 ರ ಸೋಮವಾರದಂದು ಉದ್ಘಾಟನಾ ಸಮಾರಂಭ ಜರುಗಲಿದೆ.

ಈ ಉದ್ಘಾಟನಾ ಸಮಾರಂಭದ ದಿವ್ಯ ಸಾನ್ನಿಧ್ಯವನ್ನು ಶ್ರೀ ವಶಿಷ್ಠ ಮಹಾಮುನಿಗಳು ಶ್ರದ್ಧಾನಂದ ಮಠ ಸುಕ್ಷೇತ್ರ ಸೀತಿಮನಿ ಇವರು ವಹಿಸಿಕೊಳ್ಳಲಿದ್ದಾರೆ. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಆದರ್ಶ ವಿದ್ಯಾವರ್ಧಕ ಸಂಘದ ಸದಸ್ಯರಾದ ಡಿ.ಜಿ ಶಿರೂರ ವಹಿಸಿಕೊಳ್ಳಲಿದ್ದಾರೆ.

ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಬಾಗಲಕೋಟೆಯ ಎಸ್.ಆರ್. ನರಸಾಪೂರ, ಕಲಾ ಹಾಗೂ ಎಂ.ಬಿ ಶಿರೂರು ವಾಣಿಜ್ಯ ಮಹಾವಿದ್ಯಾಲಯದ ಡಾ.ಎಸ್.ಎಸ್. ಹಂಗರಗಿ ಸಹ ಪ್ರಾಧ್ಯಾಪಕರು ಭಾಗಿಯಾಗಲಿದ್ದಾರೆ. ಎಸ್. ಡಿ ಎಂ.ಸಿ ಅಧ್ಯಕ್ಷರಾದ ವಾಯ್. ಎಚ್. ಬೆನಕನವಾರಿ ಗ್ರಾಮ ಪಂಚಾಯತಿ ಸದಸ್ಯರಾದ ಎನ್. ಬಿ ಪಾಟೀಲ, ಶ್ರೀಮತಿ ಜಿ.ವಾಯ್ ಮಾದರ, ಶಿಕ್ಷಣ ಪ್ರೇಮಿಗಳಾದ ಶ್ರೀಕರ ದೇಸಾಯಿ, ಎಸ್.ಡಿ.ಎಂ.ಸಿ ಉಪಾಧ್ಯಕ್ಷರಾದ ಶ್ರೀಮತಿ ಎಸ್.ಎಂ. ಚಲವಾದಿ ಸೇರಿದಂತೆ ಎಸ್‌.ಡಿ.ಎಂ.ಸಿ.ಯ ಎಲ್ಲಾ ಸದಸ್ಯರು ಹಾಗೂ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಚಿಟಿಗಿನಕೊಪ್ಪದ ಪ್ರಭಾರಿ ಮುಖ್ಯ ಗುರುಗಳಾದ ಸುನಿಲ. ಆರ್. ಪಾಟೀಲ ಇವರು ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆಂದು ಪ್ರಾಚಾರ್ಯರಾದ ಡಾ. ಜ.ಗು ಬೈರಮಟ್ಟಿ ಹಾಗೂ ಯೋಜನಾಧಿಕಾರಿಗಳಾದ ಜಿ.ಎಸ್ ಗೌಡರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

- Advertisement -

ಒಂದು ವಾರದ ವಿಶೇಷ ಶಿಬಿರದಲ್ಲಿ ಶ್ರಮದಾನದ ಕಾರ್ಯಗಳು, ಸಾಂಸ್ಕೃತಿಕ ಕಾರ್ಯಕ್ರಮಗಳು, ಉಚಿತ ಆಯುಷ್ಯ ಆರೋಗ್ಯ ಚಿಕಿತ್ಸ ಶಿಬಿರ ಜರುಗಲಿವೆ. ಶಿಬಿರದಲ್ಲಿ ಶ್ರೀ ಪರಪ್ಪ ಸಂಗಪ್ಪ ಸಜ್ಜನ ಕಲಾ ಮಹಾವಿದ್ಯಾಲಯದ 50 ವಿದ್ಯಾರ್ಥಿಗಳು ಶಿಬಿರಾರ್ಥಿಗಳಾಗಿ ಭಾಗವಹಿಸುತ್ತಾರೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

- Advertisement -
- Advertisement -

Latest News

ಫೆ. 8ರಂದು ಸಿಲಿಕಾನ್ ಸಿಟಿಯಲ್ಲಿ ಕುಂದಾಪುರದ ಯಶಸ್ವಿ ಕಲಾ ವೃಂದ (ಕೊಮೆ, ತೆಕ್ಕಟ್ಟೆ) ಸಂಸ್ಥೆ ಗೆ 25 ರ ಸಂಭ್ರಮ !

ಫೆಬ್ರವರಿ, 8 ರಂದು ರಾಜ್ಯ ರಾಜಧಾನಿಯಲ್ಲಿ ಯಶಸ್ವೀ ಕಲೋಲ್ಲಾಸ  ಕರಾವಳಿ ಭಾಗದ ಪ್ರತಿಷ್ಠಿತ ಸಂಸ್ಥೆ ಬೆಳ್ಳಿ ಹಬ್ಬದ ಸಡಗರವನ್ನು ೧೦೮ನೇ ಕಾರ್ಯಕ್ರಮವನ್ನು ರಾಜಧಾನಿಯ ರವೀಂದ್ರ ಕಲಾಕ್ಷೇತ್ರದಲ್ಲಿ ಫೆಬ್ರವರಿ...
- Advertisement -

More Articles Like This

- Advertisement -
close
error: Content is protected !!
Join WhatsApp Group