ಎನ್ಎಸ್ಎಸ್ ಮಕ್ಕಳಲ್ಲಿ ಶಿಸ್ತು ಮೂಡಿಸುತ್ತದೆ

Must Read

ಸಿಂದಗಿ: ವಿದ್ಯಾರ್ಥಿಗಳಲ್ಲಿ ರಾಷ್ಟ್ರೀಯ ಸೇವಾ ಯೋಜನೆಯ ಮಹತ್ವ, ವಿದ್ಯಾರ್ಥಿಗಳಲ್ಲಿ ಶಿಸ್ತು ಸಂಯಮ ಕಾಲನಿಷ್ಠೆ ಪರಸ್ಪರ ಅರಿವು ಮೂಡಿಸುತ್ತದೆ ಎಂದು ಜಿ.ಪಿ.ಪೋರವಾಲ್ ಮಹಾವಿದ್ಯಾಲಯದ ಪ್ರಾಧ್ಯಾಪಕ ಡಾ. ಟಿ ಬಿ ದೊಡಮನಿ ಹೇಳಿದರು.

ಪಟ್ಟಣದ ಸಿಎಂ ಮನಗೂಳಿ ಕಲಾ ವಿಜ್ಞಾನ ಹಾಗೂ ವಾಣಿಜ್ಯ ಮಹಾವಿದ್ಯಾಲಯದಲ್ಲಿ ಎನ್‍ಎಸ್‍ಎಸ್ ದಿನಾಚರಣೆ ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಮಾತನಾಡಿ, ಸೇವಾಮನೋಭಾವ ವಿದ್ಯಾರ್ಥಿಗಳನ್ನು ವಿಕಾಸದತ್ತ ಕರೆದುಕೊಂಡು ಹೋಗಿ ದೇಶಕ್ಕೆ ಸಮರ್ಪಣಾ ಭಾವದಿಂದ ಶ್ರಮ ವಹಿಸಬೇಕಾಗಿದೆ. ನಮಗೆಲ್ಲಾ ಸಾಮಾಜಿಕ ಜವಾಬ್ದಾರಿಯನ್ನು ತಿಳಿಸಿಕೊಡುತ್ತದೆ. ಯೋಜನೆಯು ಮುಂದಿನ ಯುವ ಪೀಳಿಗೆಗೆ ಪ್ರೇರಣೆಯಾಗಬೇಕು ಎಂದರು.

ಇದೇ ಸಂದರ್ಭದಲ್ಲಿ ಮಹಾವಿದ್ಯಾಲಯದ ಪ್ರಾಚಾರ್ಯ ಡಾ. ಎ ಬಿ ಸಿಂದಗಿ, ಎನ್‍ಎಸ್‍ಎಸ್ 1 ಘಟಕದ ಯೋಜನಾಧಿಕಾರಿ ಬಸವರಾಜ ಗುರುಶೆಟ್ಟಿ, ಎರಡರ ಯೋಜನಾಧಿಕಾರಿ ಬಿ ಜಿ ಮಠ, ಪ್ರಾಧ್ಯಾಪಕರಾದ ಪ್ರದೀಪ್ ಕತ್ತಿ, ಜಿ ಜಿ ಕಾಂಬಳೆ, ಎಸ್ ಕೆ ಹೂಗಾರ್, ಮಂಜುನಾಥ್ ಪರಮಾನಂದ, ಎಸ್.ಎಸ್.ಪಾಟೀಲ್, ಎಸ್ ಎಂ ಬಿರಾದಾರ, ಡಾ. ಬಿ.ಜಿ.ಪಾಟೀಲ್, ವಿ.ಬಿ.ಪಾಟೀಲ್, ರಮೇಶ್ ಯಂಕಂಚಿಕರ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

Latest News

ಕರವೇ ಎಂಬುದು ಕನ್ನಡಿಗರ ಆತ್ಮಶಕ್ತಿ

ಕರ್ನಾಟಕ ರಕ್ಷಣಾ ವೇದಿಕೆ (ಕರವೇ) ಹುಟ್ಟಿದ್ದು ಕನ್ನಡ ಭಾಷೆಗೆ, ಕನ್ನಡಿಗರಿಗೆ ಆಗುತ್ತಿದ್ದ ಅನ್ಯಾಯದ ವಿರುದ್ಧ ಯುವ ಸಮೂಹದ ಪ್ರತಿಭಟನೆಯಿಂದ. ಅನೇಕ ಸಂಘಟನೆಗಳ ಮುಖಂಡರೊಂದಿಗೆ ಸೇರಿ ಕರವೇ...

More Articles Like This

error: Content is protected !!
Join WhatsApp Group