ಮೂಡಲಗಿ: ಇಂದಿನ ಯುವ ಪೀಳಿಗೆಗೆ ಸಮಾಜದ ಬಗ್ಗೆ ಕಳಕಳಿ ಹುಟ್ಟಿಸಲು ಎನ್.ಎಸ್.ಎಸ್ ಶಿಬಿರ ಸಹಾಯಕಾರಿಯಾಗಿದೆ ಎಂದು ಕಲ್ಲೋಳಿಯ ಬಸವೇಶ್ವರ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ಡಾ.ಬೋಜರಾಜ ಬೆಳಕೂಡ ಹೇಳಿದರು.
ಅವರು ತಾಲೂಕಿನ ತುಕ್ಕಾನಟ್ಟಿಯ ಬಾವಿ ಕೋಡಿ ತೋಟದ ಶಾಲೆಯಲ್ಲಿ ಕಲ್ಲೋಳಿಯ ಬಸವೇಶ್ವರ ಕಲಾ ಮಹಾ ವಿದ್ಯಾಲಯದ ಎನ್.ಎಸ್.ಎಸ್ ಘಟಕ ಹಮ್ಮಿಕೊಂಡ ಏಳು ದಿನಗಳ ಕಾಲದ ರಾಷ್ಟ್ರೀಯ ಸೇವಾ ಯೋಜನೆಯ ವಾರ್ಷಿಕ ಶಿಬಿರದ ಉದ್ಘಾಟನಾ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಶಿಬಿರವನ್ನು ತುಕ್ಕಾನಟ್ಟಿಯ ಗ್ರಾಮ ಪಂಚಾಯಿತಿ ಅಧ್ಯಕ್ಷ ಎಸ್.ಕೆ.ಹುಲಕುಂದ್ ಸಸಿಗೆ ನೀರು ಹಾಕುವುದರ ಮೂಲಕ ಉದ್ಘಾಟಿಸಿದರು ಮಾತನಾಡಿದರು.
ಸಂಸ್ಥೆಯ ಆಡಳಿತಾಧಿಕಾರಿ ಪ್ರಕಾಶ್ ಗರಗಟ್ಟಿ ಮಾತನಾಡಿ, ಶಿಬಿರದ ಧ್ಯೇಯೋದ್ದೇಶಗಳನ್ನು ವಿವರಿಸಿದರು.
ಸಮಾರಂಭದಲ್ಲಿ ಶಾಲೆಯ ಪ್ರಧಾನ ಗುರು ಸಿದ್ಧಾರೂಢ ಹಮ್ಮನವರ್, ಸತೀಶ್ ಕೌಜಲಗಿ ಮರೇಶಿ ವಿದ್ಯಾ ಬಡಿಗೇರ್, ಅನಿತಾ ಅರಮನೆ, ಶಾಯಿಲ್ ಲಂಗೋಟಿ , ಕೀರ್ತಿ ನುಗ್ಗಾನಟ್ಟಿ, ಲಕ್ಷ್ಮಿ ಕವಡಪ್ಪಗೋಳ ಉಪಸ್ಥಿತರಿದ್ದರು
ಕಾಲೇಜಿನ ಪ್ರಾಚಾರ್ಯ ಡಾ. ಸಂಗಮೇಶ್ ಹೂಗಾರ್ ಸ್ವಾಗತಿಸಿದರು, ಗುರುರಾಜ್ ಕಡಕಬಾವಿ ನಿರೂಪಿಸಿದರು, ಜ್ಯೋತಿ ಮುತ್ನಾಳ ವಂದಿಸಿದರು .