Homeಸುದ್ದಿಗಳುನುಡಿ ತೋರಣ-  ತ್ರೈವಾರ್ಷಿಕ ಸಾಹಿತ್ಯ ಸಮಾವೇಶ 

ನುಡಿ ತೋರಣ-  ತ್ರೈವಾರ್ಷಿಕ ಸಾಹಿತ್ಯ ಸಮಾವೇಶ 

     ನುಡಿ ತೋರಣ ಸಾಹಿತ್ಯ ಮತ್ತು ಸಾಂಸ್ಕೃತಿಕ ವೇದಿಕೆ, ಬೆಂಗಳೂರು, ತನ್ನ ತ್ರೈವಾರ್ಷಿಕ ಸಾಹಿತ್ಯ ಸಮಾವೇಶವನ್ನು ದಿನಾಂಕ 29-06-2025, ಭಾನುವಾರದಂದು ಅಕ್ಕಮಹಾದೇವಿ ಸಭಾಂಗಣ, ಕನ್ನಡ ಸಾಹಿತ್ಯ ಪರಿಷತ್ತು, ಚಾಮರಾಜಪೇಟೆ, ಬೆಂಗಳೂರು, ಇಲ್ಲಿ ಬೆಳಗ್ಗೆ 9-30 ರಿಂದ ಸಂಜೆ 5-00 ಗಂಟೆಯವರೆಗೆ ಆಯೋಜಿಸಿದೆ.
ಸಮಾವೇಶವನ್ನು ಕರ್ನಾಟಕದ ಹೆಸರಾಂತ ಸಾಹಿತಿ, ಅಷ್ಟಾವಧಾನಿ,  ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾದ  ಕಬ್ಬಿನಾಲೆ ವಸಂತ ಭಾರದ್ವಾಜ್ ರವರು ಉದ್ಘಾಟಿಸಲಿದ್ದಾರೆ.
   ಕನ್ನಡ ಸಾಹಿತ್ಯದ ಸಮಕಾಲೀನ ಚಿಂತಕರು, ಬರಹಗಾರರು, ವಿಮರ್ಶಕರಾದ ಜಿ. ಬಿ. ಹರೀಶ್ ರೊಡನೆ ‘ಬರಹಗಾರ ಮತ್ತು ಓದುಗನ ನಡುವಿನ ಅನುಸಂಧಾನ’ ಕುರಿತು ಸಂವಾದ ಏರ್ಪಡಿಸಲಾಗಿದೆ. ವೇದಿಕೆಯು ಪ್ರತಿವರ್ಷ ಕೊಡಮಾಡುವ ‘ನುಡಿ ಭೂಷಣ’ ಪ್ರಶಸ್ತಿಯನ್ನು ಮಂಡ್ಯ ಖ್ಯಾತ ಸಾಹಿತಿ ತ.ನಾ.ಶಿವಕುಮಾರ್ (ತನಾಶಿ), ಕಲುಬುರ್ಗಿಯ ಖ್ಯಾತ ನೇತ್ರತಜ್ಞ ಡಾ. ಉದಯ ಪಾಟೀಲ ಹಾಗು ಬೆಂಗಳೂರಿನ ಖ್ಯಾತ ಸಾಹಿತಿ ಅನುಸೂಯ ಸಿದ್ಧರಾಮ ಅವರಿಗೆ ಪ್ರದಾನ ಮಾಡಲಾಗುವುದು.
ಅಲ್ಲದೆ ಬಳಗದ ಸದಸ್ಯರಿಂದ ‘ಜಾನಪದ ಸಾಂಸ್ಕೃತಿಕ ವೈಭವ’, ‘ಆಶು ಕವಿಗೋಷ್ಠಿ’ ಇನ್ನಿತರ ಕಾರ್ಯಕ್ರಮಗಳನ್ನು ಸಮಾವೇಶದ ಭಾಗವಾಗಿ ಹಮ್ಮಿಕೊಳ್ಳಲಾಗಿದೆ.
RELATED ARTICLES

LEAVE A REPLY

Please enter your comment!
Please enter your name here

Most Popular

error: Content is protected !!
Join WhatsApp Group