ತುಕ್ಕಾನಟ್ಟಿ ಬರ್ಡ್ಸ್ ಕೃಷಿ ವಿಜ್ಞಾನ ಕೇಂದ್ರದಲ್ಲಿ ಪೌಷ್ಠಿಕ ಅಭಿಯಾನ ಆಮ್ಲಜನಕ ವ್ಯಾಪಾರದ ಸರಕಲ್ಲ, ವಿಷಮುಕ್ತ ಆಹಾರ ಸೇವನೆ ಅಗತ್ಯ -ಕಡಾಡಿ

Must Read

ಚಿಕ್ಕಸಿಂದಗಿ ಗ್ರಾಮದಲ್ಲಿ ಹೊರ್ತಿ ರೇವಣಸಿದ್ದೇಶ್ವರ ಪುರಾಣ ಪ್ರವಚನ

ಸಿಂದಗಿ: ತಾಲೂಕಿನ ಚಿಕ್ಕಸಿಂದಗಿ ಗ್ರಾಮದಲ್ಲಿ ಶ್ರೀ ಸದ್ಗುರು ವೀರೇಶ್ವರ ಶಿವಯೋಗಿಗಳ 81 ನೇ ಪುಣ್ಯಸ್ಮರಣೋತ್ಸವದ ಅಂಗವಾಗಿ ಶ್ರೀ ಹೊರ್ತಿ ರೇವಣಸಿದ್ದೇಶ್ವರರ ಪುರಾಣ ಪ್ರವಚನದಲ್ಲಿ ಜೇರಟಗಿ ವಿರಕ್ತಮಠದ...

ಗಾಣಿಗ ಸಮಾಜ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ

ಸವದತ್ತಿ: ತಾಲೂಕಿನ ಗಾಣಿಗ ಸಮಾಜದ ಎಸ್..ಎಸ್.ಎಲ್.ಸಿ.ಹಾಗೂ ಪಿ.ಯು.ಸಿ .ಯಲ್ಲಿ ಪಾಸಾದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಮಾಡಲಾಗುವುದು ಎಂದು ಸವದತ್ತಿ ತಾಲೂಕಿನ ಗಾಣಿಗ ಸಮಾಜದ ತಾಲೂಕು ಘಟಕದ ಪ್ರಧಾನ...

ಕಾರಂಜಿಮಠದ ೨೧ನೇ ವಾರ್ಷಿಕೋತ್ಸವ ಸಮಾರಂಭ

ಬೆಳಗಾವಿ ಶಿವಬಸವನಗರದ ಶ್ರೀ ಕಾರಂಜಿಮಠದ ೨೧ನೇ ವಾರ್ಷಿಕೋತ್ಸವ ಮತ್ತು ಕನ್ನಡ ರಾಜ್ಯೋತ್ಸವ ಕಾರ್ಯಕ್ರಮವು ದಿ. ೨೫ ರಿಂದ ೨೯ ಅಕ್ಟೋಬರ್ ೨೦೨೧ ರವರೆಗೆ ಐದು ದಿನಗಳ...

ಮೂಡಲಗಿ– ವಿಶ್ವ ಮಾನ್ಯ ನಾಯಕ ನರೇಂದ್ರ ಮೋದಿಯವರು 71ನೇ ವಸಂತಕ್ಕೆ ಕಾಲಿಡುವ ಈ ಸಂದರ್ಭದಲ್ಲಿ ವಿಷ ಮುಕ್ತ ಆಹಾರ ಸೇವನೆ ಮಾಡುವ ಸಂಕಲ್ಪ ಮಾಡಬೇಕಾಗಿದೆ, ಕುಡಿಯುವ ನೀರು,ಸೇವಿಸುವ ಗಾಳಿಯುನ್ನು ನಾವು ಮಾಡಿದ ತಪ್ಪಿನಿಂದ ಕಲುಷಿತಗೊಳಿಸಿದ್ದೇವೆ ತಪ್ಪು ತಿದ್ದಿಕೊಳ್ಳಲು ಸಮಯ ಬಂದಿದೆ ಎಂದು ರಾಜ್ಯಸಭಾ ಸದಸ್ಯ ಈರಣ್ಣಾ ಕಡಾಡಿ ಹೇಳಿದರು,

ಅವರು ಶುಕ್ರವಾರ ಸಮೀಪದ ತುಕ್ಕಾನಟ್ಟಿಯ ಐ.ಸಿ.ಎ.ಆರ್. ಬರ್ಡ್ಸ ಕೃಷಿ ವಿಜ್ಞಾನ ಕೇಂದ್ರದಲ್ಲಿ ಇಪ್ಕೋ, ಐ.ಸಿ.ಐ.ಸಿ.ಐ, ಫೌಂಡೆಷನ್ ಸಹಯೋಗದಲ್ಲಿ ಅಂತಾರಾಷ್ರ್ಟೀಯ ಪೌಷ್ಠಿಕ ಧಾನ್ಯಗಳ ವರ್ಷ 2023ರ ದೃಷ್ಟಿಕೋನದಡಿ ಪೌಷ್ಠಿಕ ಕೈತೊಟದ ಮಹಾಭಿಯಾನ ಮತ್ತು ವೃಕ್ಷಾರೋಪಣೆ, ಸ್ವಚ್ಚ ಪರಿಸರ ಹಾಗೂ ಮಾಲಿನ್ಯ ಮುಕ್ತ ವಾತಾವರಣ ಸಮಾರಂಭದಲ್ಲಿ ಮಾತನಾಡಿದರು,

ಪರಿಸರವನ್ನು ಸ್ವಚ್ಚವಾಗಿ ಇಟ್ಟುಕೊಳ್ಳದ ಕಾರಣ ಮತ್ತು ರಾಸಾಯನಿಕ ಅಧಿಕ ಬಳಕೆಯಿಂದ ನೈಸರ್ಗಿಕವಾಗಿ ಸಿಗುವಂತಹ ಶುದ್ದ ನೀರನ್ನು ಕಲುಷಿತಗೊಳಿಸಿ ಇಂದು ಶುದ್ದ ನೀರಿಗಾಗಿ ಬಾಟಲಿ ನೀರಿನತ್ತ ಕೈಚಾಚುವಂಥ ಪರಿಸ್ಥಿತಿ ನಿರ್ಮಾಣವಾಗಿದೆ,ನಿಸರ್ಗವನ್ನು ಹಾಳು ಮಾಡಿದ ಪರಿಣಾಮ ನೈಜವಾಗಿ ಸಿಗುವಂಥ ಆಮ್ಲಜನಕವನ್ನು ಸಹ ಹಣ ನೀಡಿ ಕೊಳ್ಳಬೇಕಾದ ಅನಿವಾರ್ಯತೆ ಕೊರೋನಾ ಸಮಯದಲ್ಲಿ ಕಾಣುವಂತಾಯಿತು.

- Advertisement -

ಆಮ್ಲಜನಕ ವ್ಯಾಪಾರದ ಸರಕಲ್ಲ,ಇದೆ ದಿನಮಾನಗಳು ಮುಂದುವರೆದರೆ ದೇಶದಲ್ಲಿ ಉಸಿರಾಡುವದು ಕಷ್ಟವಾಗುತ್ತದೆ ಆದರಿಂದ ಕೈತೋಟದಲ್ಲಿ ವಿಷ ಮುಕ್ತ ಆಹಾರ ಉತ್ಪಾದನೆ, ಸ್ವಚ್ಚ ಪರಿಸರ, ರಾಸಾಯನಿಕ ಮುಕ್ತ ಕೃಷಿಗೆ ಹಾಗೂ ಮಾಲಿನ್ಯ ಮುಕ್ತ ವಾತಾವರಣವನ್ನು ನಾವು ನಿರ್ಮಾಣ ಮಾಡೋಣ ಎಂದರು.

ಜಗತ್ತು ವಿಷಯುಕ್ತ ಆಹಾರ ಸೇವನೆಯಿಂದ ಸಾಕಷ್ಟು ತೊಂದರೆ ಅನುಭವಿಸಿದೆ. ನಾವು ಭಾರತೀಯರು ಪರಂಪರಾಗತ ಕೃಷಿಯನ್ನು ಮತ್ತೊಮ್ಮೆ ಜಾರಿಗೆ ತರಬೇಕಾದ ಅಗತ್ಯ ಇದ್ದು ಆ ಮೂಲಕ ವಿಷಮುಕ್ತ ಆಹಾರ ಪರಿಚಯವನ್ನು ಪ್ರಪಂಚಕ್ಕೆ ತಿಳಿಸುವ ಜವಾಬ್ದಾರಿ ದೇಶದ ಜನರ ಕೈಯಲ್ಲಿದೆ ಎಂದರು.

ಬೆಳಗಾವಿಯ ಇಪ್ಕೋ ಸಂಸ್ಥೆಯ ಮನೋಜ ಕೆ.ಎಸ್. ಇವರು ಮಾತನಾಡುತ್ತಾ, ಶುದ್ದವಾದ ಪರಿಸರ ಉಳಿಸುವುದರಿಂದ ಮುಂದಿನ ಪೀಳಿಗೆಗೆ ಅನುಕೂಲವಾಗುತ್ತದೆ. ಪ್ರಪಂಚದ ಶೇಕಡಾ 25 ರಷ್ಟು ಮಕ್ಕಳು ಭಾರತದಲ್ಲಿ ಕುಪೋಷಣೆ (ದೈಹಿಕ ಬಲಹೀನ) ರಾಗಿದ್ದಾರೆ ಎಂದರು.

ಹಿರಿಯ ಸಹಾಯಕ ತೋಟಗಾರಿಕಾ ನಿರ್ದೇಶಕ ಮಲ್ಲಿಕಾರ್ಜುನ ಜಾನಮಟ್ಟಿ ಇವರು ಮಾತನಾಡುತ್ತಾ, ಗ್ರಾಮೀಣ ಮಟ್ಟದಲ್ಲಿ ಒಂದು ಸರ್ವೆ ಪ್ರಕಾರ ಮಹಿಳೆ ಮತ್ತು ಮಕ್ಕಳಲ್ಲಿ ಅಪೌಷ್ಟಿಕತೆ ಅಧಿಕವಾಗಿರುವುದು ಕಂಡು ಬಂದಿದೆ. ಆದ್ದರಿಂದ ಪೋಷಕಾಂಶ ಭರಿತ ಎಲ್ಲ ಧಾನ್ಯ ಮತ್ತು ತರಕಾರಿಗಳನ್ನು ಸಾವಯವಯುತವಾಗಿ ಬೆಳೆದು ಸೇವಿಸಬೇಕೆಂದರು.

ಧಾರವಾಡದ ಕೃಷಿ ವಿಶ್ವವಿದ್ಯಾಲಯ ವ್ಯಾಪ್ತಿಯಲ್ಲಿ ಬರುವ ಕೆ.ವಿ.ಕೆ.ಗಳ ನೋಡಲ್ ಅಧಿಕಾರಿ ಪ್ರಾಧ್ಯಾಪಕ ಡಾ. ಶ್ರೀಪಾದ ಕುಲಕರ್ಣಿ ಇವರು ಮಾತನಾಡುತ್ತಾ,ಆರೋಗ್ಯದ ದೃಷ್ಟಿಯಿಂದ ತೃಣಧಾನ್ಯಗಳ ಬಗ್ಗೆ ಹೆಚ್ಚು ಮಹತ್ವಕೊಡಬೇಕು. ತೃಣಧಾನ್ಯಗಳಾದಂತಹ ನವಣೆ, ರಾಗಿ, ಬರಗು, ಊದಲು, ಸಾವೆ, ಅರಕ, ಕೊರಲು, ಸಜ್ಜೆ, ಹಾಗೂ ಜೋಳ, ಇವುಗಳನ್ನು ಬೆಳೆದು ದಿನ ನಿತ್ಯ ಆಹಾರದಲ್ಲಿ ಉಪಯೋಗಿಸಬೇಕೆಂದರು.

ಐ.ಸಿ.ಎ.ಆರ್. ಬರ್ಡ್ಸ್ ಕೃಷಿ ವಿಜ್ಞಾನ ಕೇಂದ್ರದ ಚೇರಮನ್ ಆರ್ ಎಮ್ ಪಾಟೀಲ್ ಅಧ್ಯಕ್ಷತೆ ವಹಿಸಿ ಮಾತನಾಡಿ, ಗ್ರಾಮೀಣ ಮಹಿಳೆ ಮತ್ತು ಮಕ್ಕಳು ಸಮತೋಲನ ಆಹಾರ ಸೇವಿಸುವುದರಿಂದ ಆರೋಗ್ಯ ಸದೃಢವಾಗಿರುತ್ತದೆ ಎಂದರು, ಕೃಷಿ ವಿಜ್ಞಾನ ಕೇಂದ್ರದ ಮುಖ್ಯಸ್ಥ ಡಿ ಸಿ ಚೌಗಲಾ ಪ್ರಾಸ್ತಾವಿಕವಾಗಿ ಮಾತನಾಡಿದರು, ಇದೆ ಸಮಯದಲ್ಲಿ ವಿಧ್ಯಾರ್ಥಿಗಳಿಗೆ ಮಹಿಳೆಯರಿಗೆ ಸಸಿ ವಿತರಿಸಿದರು.

ಕೆ.ವಿ.ಕೆ ಗೃಹ ವಿಜ್ಞಾನಿಗಳಾದ ರೇಖಾ ಕಾರಭಾರಿ ಸ್ವಾಗತಿಸಿದರು, ಪರಶುರಾಮ ಪಿ. ಪಾಟೀಲ್ ನಿರೂಪಿಸಿದದರು.ಎಮ್. ಎನ್. ಮಲಾವಡಿ ವಂದಿಸಿದರು.

- Advertisement -
- Advertisement -

Latest News

ಚಿಕ್ಕಸಿಂದಗಿ ಗ್ರಾಮದಲ್ಲಿ ಹೊರ್ತಿ ರೇವಣಸಿದ್ದೇಶ್ವರ ಪುರಾಣ ಪ್ರವಚನ

ಸಿಂದಗಿ: ತಾಲೂಕಿನ ಚಿಕ್ಕಸಿಂದಗಿ ಗ್ರಾಮದಲ್ಲಿ ಶ್ರೀ ಸದ್ಗುರು ವೀರೇಶ್ವರ ಶಿವಯೋಗಿಗಳ 81 ನೇ ಪುಣ್ಯಸ್ಮರಣೋತ್ಸವದ ಅಂಗವಾಗಿ ಶ್ರೀ ಹೊರ್ತಿ ರೇವಣಸಿದ್ದೇಶ್ವರರ ಪುರಾಣ ಪ್ರವಚನದಲ್ಲಿ ಜೇರಟಗಿ ವಿರಕ್ತಮಠದ...
- Advertisement -

More Articles Like This

- Advertisement -
close
error: Content is protected !!