spot_img
spot_img

ಎನ್ ವಿ ರಮೇಶ ‘ಕುಟುಂಬ ಹಬ್ಬ’

Must Read

spot_img
- Advertisement -

ಮೈಸೂರು – ಮೈಸೂರಿನ ಅಭಿರುಚಿ  ಬಳಗ,ಆಸಕ್ತಿ ಪ್ರಕಾಶನ ಹಾಗೂ ಕರ್ನಾಟಕ ಚುಟುಕು ಸಾಹಿತ್ಯ ಪರಿಷತ್ ಮೈಸೂರು ವಿಭಾಗ  ವತಿಯಿಂದ ಕೃಷ್ಣಮೂರ್ತಿಪುರಂ ನಮನ ಕಲಾ ಮಂಟಪ ಎನ್ ವಿ ರಮೇಶ್ ಕುಟುಂಬ ಹಬ್ಬ ಅಂಗವಾಗಿ ಮೈಸೂರಿನ ‘ಮರೆಯಲಾರದ ಮಹನೀಯರು ಸಿ. ಶ್ರೀಕಂಠೇಶ್ವರ ಅಯ್ಯರ್ ಅವರ ಜೀವನ ದರ್ಶನ ‘ಕೃತಿಯನ್ನು ಬೆಂಗಳೂರಿನ ಸಂಸ್ಕೃತ ಚಿಂತಕ ಡಾ. ಗುರುರಾಜ ಪೋಶೆಟ್ಟಿಹಳ್ಳಿ ಲೋಕಾರ್ಪಣೆಗೊಳಿಸಿದರು.

ಈ ಸಂದರ್ಭದಲ್ಲಿ ಅವರು ಮಾತನಾಡುತ್ತಾ, ಸಾಮಾನ್ಯವಾಗಿ ಜನ ತಂದೆ ತಾಯಿ ಬಗ್ಗೆ ಅರಿತಿರುತ್ತಾರೆ ಆದರೆ ಅವರ ಹಿಂದಿನ ತಲೆಮಾರುಗಳ ಅಜ್ಜ ಅಜ್ಜಿ ಮುತ್ತಜ್ಜ ಮುತ್ತಜ್ಜಿ ಇವರ ಬಗ್ಗೆ ಹೆಚ್ಚಿನ ವಿವರಗಳು ತಿಳಿದಿರುವುದಿಲ್ಲ, ತಿಳಿಯುವ ಕುತೂಹಲವು ಇರುವುದಿಲ್ಲ , ಎನ್ ವಿ ರಮೇಶ್ ರವರು ತಮ್ಮ ತಂದೆ ಹಿರಿಯ ಆಕಾಶವಾಣಿ ಕಾರ್ಯಕ್ರಮ ನಿರ್ವಾಹಕ ಎನ್. ಎಸ್. ವಾಮನ್ ಪತ್ನಿ ಗಿರಿಜಾ ಅವರ ತಾತ ಸಿ. ಶ್ರೀಕಂಠೇಶ್ವರ ಅಯ್ಯರ್ ಬಗ್ಗೆ 40 ವರ್ಷಗಳಿಂದ ದಾಖಲೆ ಮಾಹಿತಿಯನ್ನು ಸಂಗ್ರಹಿಸಿ ಕೃತಿಯನ್ನು ಬರೆದಿದ್ದಾರೆ.

ಮೈಸೂರು ರಾಜಮನೆತನದ ನಿಕಟವರ್ತಿಗಳಾಗಿ, ಅರಮನೆಯ ಸಹಾಯಕ ಕಾರ್ಯದರ್ಶಿಯಾಗಿ, ಹಿಂದಿನ ಮೈಸೂರು ಜಿಲ್ಲೆಯ ಜಿಲ್ಲಾಧಿಕಾರಿಯಾಗಿ, ಮೈಸೂರಿನ ಐಜಿಪಿಯಾಗಿ ಕಾರ್ಯನಿರ್ವಹಿಸಿದ ಶ್ರೀಕಂಠೇಶ್ವರ ಅಯ್ಯರ್ ಅವರ ಜನಾನುರಾಗಿ ವ್ಯಕ್ತಿತ್ವ ದಿಂದ ಇಂದಿಗೂ ಮಾದರಿ ಎನಿಸಿದ್ದಾರೆ .ಅನೇಕ ಸಾಮಾಜಿಕ ಶೈಕ್ಷಣಿಕ ಕಾರ್ಯ ಕೈಗೊಂಡ ಶ್ರೀಯುತರ ಜೀವನ ದರ್ಶನದಲ್ಲಿ ಪಾರಂಪರಿಕ ಸಾಂಸ್ಕೃತಿಕ ಚಿತ್ರಣವನ್ನು ಮಾಡಿಸುತ್ತಾರೆ ಎಂದು ಅಭಿಪ್ರಾಯ ಪಟ್ಟರು.

- Advertisement -

ಎಸ್ ಬಿ ಐ ಹಿರಿಯ ವ್ಯವಸ್ಥಾಪಕ ಅಶ್ವತ್ಥ ಕುಲಕರ್ಣಿ ಕಾರ್ಯಕ್ರಮ ಉದ್ಘಾಟಿಸಿದರು. ಬೆಂಗಳೂರು ಆಕಾಶವಾಣಿಯ ಕಾರ್ಯಕ್ರಮ ನಿರ್ವಾಹಕಿ ಕಾನ್ಸೆಪ್ಟ ಫರ್ನಾಂಡಿಸ್, ನಿವೃತ್ತ ಪ್ರಾಂಶುಪಾಲ ಕೆಂಪರಾಜು ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.

ಸ್ನೇಹ ಸಿಂಚನ ಸಂಸ್ಥೆಯ ಅಧ್ಯಕ್ಷ ಲತಾ ಮೋಹನ್ ಅಧ್ಯಕ್ಷತೆ ವಹಿಸಿದ್ದ ಸಮಾರಂಭದಲ್ಲಿ ಎನ್ ಎಸ್ ವಾಮನ್ ಬಗ್ಗೆ ಸ್ಮರಣೆಯನ್ನು ಹಿರಿಯ ಕಲಾವಿದೆ ಶ್ರೀಮತಿ ಹರಿ ಪ್ರಸಾದ್, ಕವಿ ಡಾ ಜಯಪ್ಪ ಹೊನ್ನಾಳಿ ,ಎನ್ ವಿ ಬಾಲರಾಜ್, ಆಕಾಶವಾಣಿ ಹಿರಿಯ ಉದ್ಘೋಷಕಿ ಬಿ.ಕೆ ಸುಮತಿ ನಡೆಸಿಕೊಟ್ಟರು.

- Advertisement -
- Advertisement -

Latest News

ಯೋಗ ಸ್ಪರ್ಧಾ ವಿಜೇತರಿಗೆ ಕಡಾಡಿ ಸನ್ಮಾನ

ಮೂಡಲಗಿ: ಗ್ರಾಮೀಣ ಪ್ರದೇಶದ ಪ್ರಾಥಮಿಕ ಶಾಲೆ ವಿದ್ಯಾರ್ಥಿಗಳು ಯೋಗದಲ್ಲಿ ಅತ್ಯುತ್ತಮ ಸಾಧನೆ ಮಾಡುವ ಮೂಲಕ ತಮ್ಮ ಪ್ರತಿಭೆಯನ್ನು ಪ್ರದರ್ಶಿಸಿದ್ದಾರೆ ಇಂತಹ ಪ್ರತಿಭೆಗಳು ಬೆಳಕಿಗೆ ಬಂದು ನಾಡಿನ...
- Advertisement -

More Articles Like This

- Advertisement -
close
error: Content is protected !!
Join WhatsApp Group