ಬೈಲಹೊಂಗಲ: ಬೂದಿಹಾಳ ಗ್ರಾಮದ ಸರಕಾರಿ ಪ್ರೌಢಶಾಲೆಯಲ್ಲಿ ಶಾಲಾ ಸಂಸತ್‌ಗೆ ಆಯ್ಕೆಯಾದ ನೂತನ ಮಂತ್ರಿಗಳ ಪ್ರಮಾಣ ವಚನ ಸಮಾರಂಭ ಜರುಗಿತು.
ದೈಹಿಕ ಶಿಕ್ಷಣ ಶಿಕ್ಷಕರಾದ ಪ್ರವೀಣ ಗುರುನಗೌಡರ ಪ್ರಮಾಣ ವಚನ ಬೋಧಿಸಿದರು. ಸಂಸತ್ತಿನ ಮಂತ್ರಿಗಳಾಗಿ ಪ್ರೀತಂ ವಾರಿ (ಪ್ರಧಾನ ಮಂತ್ರಿ), ಸುನಿತಾ ಚಿಲಮೂರ (ಉಪ ಪ್ರಧಾನಮಂತ್ರಿ), ಆದರ್ಶ ಸೂರ್ಯವಂಶಿ (ಪ್ರವಾಸ ಮಂತ್ರಿ), ಸಂಜು ಸೊಗಲದ (ಹಣಕಾಸು ಮಂತ್ರಿ), ಶ್ರದ್ಧಾ ಹೊಂಗಲ (ಶಿಕ್ಷಣ ಮಂತ್ರಿ), ಪಲ್ಲವಿ ಸೂರ್ಯವಂಶಿ (ಆರೋಗ್ಯ ಮತ್ತು ಸ್ವಚ್ಛತಾ ಮಂತ್ರಿ), ಕಾವೇರಿ ಸೊಗಲದ (ಕ್ರೀಡಾ ಮಂತ್ರಿ), ಬಸವೇಶ ಹೂಲಿ (ಗ್ರಂಥಾಲಯ ಮಂತ್ರಿ), ಸಾನಿಕಾ ಕುಲಕರ್ಣಿ (ಸಾಂಸ್ಕೃತಿಕ ಮಂತ್ರಿ) ಗಣೇಶ ಅಂಗಡಿ (ವಿಜ್ಞಾನ ಮತ್ತು ತಂತ್ರಜ್ಞಾನ ಮಂತ್ರಿ), ಸುಪ್ರಿಯಾ ಕುಲಕರ್ಣಿ(ವಿರೋಧ ಪಕ್ಷದ ನಾಯಕಿ) ಸಂವಿಧಾನದ ಹೆಸರಿನಲ್ಲಿ ಪ್ರಮಾಣ ವಚನ ಸ್ವೀಕರಿಸಿದರು.
ಮುಖ್ಯಶಿಕ್ಷಕ ಎನ್.ಆರ್.ಠಕ್ಕಾಯಿ ಮಾತನಾಡಿ, ಜವಾಬ್ದಾರಿಗಳನ್ನು ಅರಿತುಕೊಂಡು ಉತ್ತಮ ಕೆಲಸಗಳನ್ನು ಮಾಡುವಂತೆ ಸಲಹೆ ನೀಡಿದರು. ಮಂತ್ರಿಗಳಿಗೆ ದೈನಂದಿನ ಕಾರ್ಯಹಂಚಿಕೆ ಮಾಡಲಾಯಿತು. ಶಿಕ್ಷಕರಾದ ಜಗದೀಶ ನರಿ, ಶಿವಾನಂದ ಬಳಿಗಾರ, ರೇಖಾ ಸೊರಟೂರ, ಹೇಮಲತಾ ಪುರಾಣಿಕ, ಕುಮಾರ ಯರಗಂಬಳಿಮಠ, ಮಂಜುಳಾ ಕಾಳಿ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಪೃಥ್ವಿ ವಾರಿ ಸ್ವಾಗತಿಸಿ ನಿರೂಪಿಸಿದರು. ಚೇತನಾ ಗಡಾದ ವಂದಿಸಿದರು. ಸುಶ್ಮಿತಾ ಸೊಗಲದ ನಿರ್ವಹಿಸಿದರು.