ಶಿಂದೋಗಿ: ಶಿಂದೋಗಿ ಗ್ರಾಮದಲ್ಲಿ ಮಹಾತ್ಮಾ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ ಕಾಮಗಾರಿಯಡಿಯಲ್ಲಿ ರೈತರ ಜಮೀನುಗಳಿಗೆ ನೀರು ಒದಗಿಸುವ ನೀರಾವರಿ ಕಾಲುವೆಗಳ ಹೂಳು ತೆಗೆಯುವ ಕಾಮಗಾರಿಯನ್ನು ಸವದತ್ತಿ ಯಲ್ಲಮ್ಮ ಕ್ಷೇತ್ರದ ಶಾಸಕ ವಿಶ್ವಾಸ ವೈದ್ಯ ಖುದ್ದಾಗಿ ಭೇಟಿ ನೀಡಿ ವೀಕ್ಷಣೆ ಮಾಡಿದರು.
ಈ ಸಂದರ್ಭದಲ್ಲಿ ಯಶವಂತ ಕುಮಾರ್ ಕಾರ್ಯನಿರ್ವಾಹಕ ಅಧಿಕಾರಿಗಳು ತಾಲೂಕ ಪಂಚಾಯತಿ ಸವದತ್ತಿ, ಗ್ರಾಮ ಪಂಚಾಯತಿ ಅಧ್ಯಕ್ಷರಾದ ಶ್ರೀಮತಿ ಮಾಯವ್ವ .ವಾ.ಟೊಪೋಜಿ, ಉಪಾಧ್ಯಕ್ಷರಾದ ಬಸವರಾಜ ಮಾಯಪ್ಪನವರ, ಸದಸ್ಯರುಗಳಾದ ಡಿ.ಡಿ.ಟೋಪೋಜಿ, ಈಶ್ವರ ಯಕ್ಕೇರಿ, ಕಲ್ಲಪ್ಪ ಕುರಬಗಟ್ಟಿ, ಮಲ್ಲಿಕಾರ್ಜುನ ದಸ್ತಿ, ಮುಶೆಪ್ಪ ಮುಶೆನ್ನವರ, ಫಕೀರಪ್ಪ ಮಾದರ ಹಾಗೂ ಪಂಚಾಯತಿ ಅಭಿವೃದ್ಧಿ ಅಧಿಕಾರಿ ರಮೇಶ ಬೆಡಸೂರ, ರಾಜೇಶ್ವರಿ ಬೋವಿ, ತಾಂತ್ರಿಕ ಸಂಯೊಜಕರಾದ ಮಹಾದೇವ ಕಾಮನ್ನವರ ತಾಲೂಕಿನ ಎಮ್ ಆಯ್ ಎಸ್ ರಾದ ನಾಗರಾಜ್ ಬೆಹರೆ ಹಾಗೂ ಗ್ರಾಮ ಪಂಚಾಯತಿ ಎಲ್ಲಾ ಸಿಬ್ಬಂದಿಗಳು, ಗ್ರಾಮದ ಕೂಲಿ ಕಾರ್ಮಿಕರು ಹಾಗೂ ಸಾರ್ವಜನಿಕರು ಮಹಿಳಾ ಒಕ್ಕೂಟದ ಸದಸ್ಯರುಗಳು. ಬಿ.ಎಫ.ಟಿ ಮತ್ತು ಮೇಟಿಗಳು ಹಾಜರಿದ್ದರು.