ಬೆಂಗಳೂರು: ಪಾದಚಾರಿ ರಸ್ತೆ ಮೇಲೆ ದಾರಿಯುದ್ದಕ್ಕೂ ದ್ವಿಚಕ್ರ ವಾಹನ ಸವಾರರು ವಾಹನ ನಿಲುಗಡೆ ಮಾಡುತ್ತಾರೆ, ಮತ್ತೊಂದೆಡೆ ನಾಲ್ಕು ಚಕ್ರ ವಾಹನಗಳ ಪಾರ್ಕಿಂಗ್ ! ಇನ್ನೊಂದು ಕಡೆ ಪಾದಚಾರಿ ಮಾರ್ಗದಲ್ಲಿ ಕಸದ ರಾಶಿ!
ಬನಶಂಕರಿ 3ನೇ ಹಂತದ ಜನತಾ ಬಜಾರ್‌ನಲ್ಲಿ ಪಾದಚಾರಿಗಳ ಮಾರ್ಗಕ್ಕೆ ನುಗ್ಗುವ ದ್ವಿಚಕ್ರ ವಾಹನ ಚಾಲಕರು ಹಾಗು ನಾಲ್ಕು ಚಕ್ರ ಗಳ ವಾಹನಗಳ ಚಾಲಕರು ಪುಟ್ ಪಾತ್ ಮೇಲೆ ಪಾರ್ಕಿಂಗ್ ಮಾಡುತ್ತಾರೆ. ಪಾದಚಾರಿಗಳ ಸುರಕ್ಷತೆಗೆ ಧಕ್ಕೆಯುಂಟುಮಾಡುವ ದ್ವಿಚಕ್ರ ವಾಹನಗಳ ಪಾರ್ಕಿಂಗ್ ಹಾಗೂ ನಾಲ್ಕು ಚಕ್ರ ವಾಹನಗಳ ಪಾರ್ಕಿಂಗ್ ಮಾಡಿದರೂ ಯಾರೂ ಕೇಳುವವರಿಲ್ಲ.
ಈ ಹಿಂದೆ ಫುಟ್‌ಪಾತ್‌ಗೆ ನುಗ್ಗುವ ಬೈಕ್ ಸವಾರರು ಪಾದಚಾರಿಗಳಿಗೆ ಅನಗತ್ಯ ಕಿರಿ ಕಿರಿ ಮತ್ತು ಅಪಾಯ ತಂದೊಡ್ಡುತ್ತಾರೆ ಎಂದು ಪ್ರತಿಭಟನೆ ಮಾಡಲಾಗಿತ್ತು. ಸಾವಿರಾರು ರೂಪಾಯಿ ಖರ್ಚು ಮಾಡಿ ಮಹಾನಗರ ಪಾಲಿಕೆಯವರು ನಿರ್ಮಿಸುವ ಪುಟ್ ಪಾತ್ ಇಂದು ಅಕ್ಷರಶಃ ಕಸದ ರಾಶಿ ರಾಶಿ ಹಾಕುವ ತಾಣವಾಗಿದೆ ಹಾಗೂ ದ್ವಿಚಕ್ರ ವಾಹನ ನಿಲ್ಲಿಸುವ, ಮರಳು – ಜಲ್ಲಿ ಪುಡಿ ಹಾಕುವ ತಾಣ !, ಲಾರಿ ನಿಲ್ಲಿಸಿ ಸಾಮಾನುಗಳನ್ನು ಇಳಿಸುವ ತಾಣವಾಗಿದೆ!
ಅಯೋಧ್ಯಾ ಉಪಾಚಾರ್ ಹೋಟೆಲ್ ನಿಂದ ಹಿಡಿದು ಮೈಸೂರು ರಸ್ತೆ ಕಡೆ ಸಾಗುವ ರಸ್ತೆ ಉದ್ದಕ್ಕೂ ಸಿಗುವ ಪುಟ್ ಪಾತ್ ಸಮಸ್ಯೆಯ ಚಿತ್ರಣ ಇದು.
ಹೊಸಕೇರಿಹಳ್ಳಿಯ ಪೋಸ್ಟ್ ಆಫೀಸ್ ಕಛೇರಿ ಮುಂಭಾಗದಲ್ಲಿ ಇರುವ ಪಾದಾಚಾರಿ ಮಾರ್ಗದಲ್ಲಿ ವರ್ಷಗಳಿಂದ ನಿರ್ಮಾಣ ಆಗುತ್ತಿರುವ ಮೇಲು ಸೇತುವೆ ಕಾಮಗಾರಿ ಪೂರ್ಣ ಆಗಿಲ್ಲ ಆದರೆ ಅದಕ್ಕೆ ತಂದ ಸಾಮಾಗ್ರಿಗಳನ್ನು, ಕಬ್ಬಿಣದ ತುಂಡು ಗಳನ್ನು ಪಾದಾಚಾರಿ ಮಾರ್ಗದ ಮೇಲೆ ಹಾಕಿದ್ದು ಪಾದಚಾರಿ ಗಳು ರಸ್ತೆಯ ಮೇಲೆ ಅಪಾಯಕಾರಿ ಹಾದಿಯಲ್ಲಿ ನಡೆದುಕೊಂಡು ಹೋಗಬೇಕು ಏಕೆಂದರೆ ಮೈಸೂರು ರಸ್ತೆಯಿಂದ ಬನಶಂಕರಿ ಕಡೆ ಸಾಗುವ ವಾಹನಗಳ ದಟ್ಟಣೆ ಹೆಚ್ಚು
ಅಂಚೆ ಕಚೇರಿ ದಾಟಿ ಮುಂದೆ ಹೋದರೆ ಪೆಟ್ರೋಲ್ ಬಂಕ್ ಅದರ ಮುಂಭಾಗದಲ್ಲಿ ಇರುವ ಪುಟ್ ಪಾತ್ ಮೇಲೆ ಬೋರ್ಡ್ ಇಟ್ಟು ಪಾದಾಚಾರಿ ಮಾರ್ಗವೇ ಇಲ್ಲದಂತೆ ಆಗಿದೆ. ಎಂತಹ ವಿಪರ್ಯಾಸ ನೋಡಿ.
ಕ್ಷೇತ್ರದ ಶಾಸಕ ರವಿ ಸುಬ್ರಹ್ಮಣ್ಯ ಅವರೇ, ಇತ್ತ ನೋಡಿ ನಿಮ್ಮ ಕ್ಷೇತ್ರದ ಪಾದಚಾರಿ ಮಾರ್ಗದ ಅವ್ಯವಸ್ಥೆ ಯನ್ನು ಸರಿ ಪಡಿಸಿ ಅಥವಾ ಸಂಬಂಧ ಪಟ್ಟ ಅಧಿಕಾರಿಗಳು ಹಾಗೂ ಬಿ.ಬಿ.ಎಂ.ಪಿ ಯವರಾದರೂ ಇತ್ತ ನೋಡಿ
ಆದರೆ ಕಾಂಗ್ರೆಸ್ ಸರ್ಕಾರ ನೀಡಿರುವ 5 ಗ್ಯಾರಂಟಿ ಬಗ್ಗೆ ಸ್ವಲ್ಪ ಬ್ಯುಸಿಯಾಗಿದೆ.
ಈಗಾಗಲೆ ವಿದ್ಯುತ್ ನ ಯೂನಿಟ್ ದರ ಹೆಚ್ಚಳ ಮಾಡಲಾಗಿದೆ ಎಂಬ ಸುದ್ಧಿ ಹರಿದಾಡುತ್ತಿದೆ. ಕಾಂಗ್ರೇಸ್ ಸರಕಾರ ಜನ ಸಾಮಾನ್ಯರ ಪಾಲಿಗೆ ಹೊರೆ ಆಗಲಿದೆಯೇ ಎಂಬುದು ಜನಸಾಮಾನ್ಯರ ಕೂಗು ಎದ್ದಿದೆ.
ಜನರ ಸಾಮಾಜಿಕ ಸಮಸ್ಯೆಗೆ ಪರಿಹಾರ ನೀಡಿ ಕಾಂಗ್ರೆಸ್ ಸರ್ಕಾರ ಲೋಕಸಭೆ ಚುನಾವಣೆಯಲ್ಲಿ ಗೆದ್ದು ಬರಲು ಲೆಕ್ಕಾಚಾರ ಹಾಕುತ್ತ ಇದೆಯೇ ಎಂಬ ಮಿಲಿಯನ್ ಡಾಲರ್ ಪ್ರಶ್ನೆ .??!!
ಒಟ್ಟಿನಲ್ಲಿ ಕ್ಷೇತ್ರದ ಶಾಸಕ ರವಿ ಸುಬ್ರಹ್ಮಣ್ಯ ಅಥವಾ ಬಿ.ಬಿ.ಎಂ.ಪಿ ಅಥವಾ ಸರ್ಕಾರ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಪ್ರಯತ್ನ ಮಾಡಲಿ ಎಂದು ಆಶಿಸುತ್ತೇನೆ!!
ಚಿತ್ರ: ಬರಹ:
ತೀರ್ಥಹಳ್ಳಿ ಅನಂತ ಕಲ್ಲಾಪುರ