ಮೂಡಲಗಿ: ತಾಲೂಕಿನ ಹುಣಶ್ಯಾಳ ಪಿ.ಜಿ ಹತ್ತಿರದ ಸತೀಶ ಶುಗರ‍್ಸ ಕಾರ್ಖಾನೆಯ ದಾಖಲೆ ಅವಧಿಯಲ್ಲಿ ನಿರ್ಮಾಣವಾದ ಕೇನ್ ಸಿರಪ್ ಮತ್ತು ಗ್ರೇನ್ ಆಧಾರಿತ ಎಥೆನಾಲ್ ಘಟಕ ಉದ್ಘಾಟನಾ ಸಮಾರಂಭ ಜ.೨೫ ರಂದು ಮುಂಜಾನೆ ೧೦ ಗಂಟೆಗೆ ಜರುಗಲಿದೆ ಎಂದು ಕಾರ್ಖಾನೆಯ ಕಾರ್ಖಾನೆಯ ಚೇರಮನ್ನರು ಮತ್ತು ಸಿ.ಎಪ್.ಓ ಪ್ರದೀಪಕುಮಾರ ಎಂ.ಡಿ ಅವರು ಪತ್ರಿಕಾ ಪ್ರಕಟನೆಯ ಮೂಲಕ ತಿಳಿಸಿದ್ದಾರೆ.
ದೇಶದ ಪರ್ಯಾಯ ಇಂಧನದ ತುರ್ತು ಅಗತ್ಯತೆಗೆ ಅನುಸಾರವಾಗಿ ಸತೀಶ ಶುರ‍್ಸ ಕಾರ್ಖಾನೆಯ ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷರು ಮತ್ತು ಶಾಸಕರಾದ ಸತೀಶ ಜಾರಕಿಹೊಳಿ ರವರ ಸಮರ್ಥ ನೇತೃತ್ವ ಮತ್ತು ಮಾರ್ಗದರ್ಶನದಲ್ಲಿ ಸಂಬಂಧಿತ ಎಲ್ಲ ಕೆಲಸಗಳನ್ನು ನಿಗದಿತ ಅವಧಿಯಲ್ಲಿ ವ್ಯವಸ್ಥಿತವಾಗಿ ಪರಿಪೂರ್ಣಗೊಳಿಸುವ ಮೂಲಕ ಕೇವಲ ಐದೂವರೆ ತಿಂಗಳುಗಳಲ್ಲಿ ಪ್ರತಿದಿನ ೨೧೦ ಕೆ.ಎಲ್.ಪಿ.ಡಿ ಉತ್ಪಾದನಾ ಸಾಮರ್ಥ್ಯವುಳ್ಳ ನೂತನ ಕೇನ್ ಸಿರಪ್ ಮತ್ತು ಗ್ರೇನ್ ಆಧಾರಿತ ಎಥೆನಾಲ್ ಘಟಕದ ಉತ್ಪಾದನಾ ಚಟುವಟಿಕೆಗಳು ಮಂಗಳವಾರ ಜ೨೫ ರಂದು ವಿಧ್ಯುಕ್ತವಾಗಿ ಕಾರ್ಯಾರಂಭಗೊಳ್ಳಲಿದೆ.
ಸತೀಶ ಶುಗರ‍್ಸ ಸಮೂಹ ಸಂಸ್ಥೆಯು ರೈತ ಸಮುದಾಯದ ಅಭಿವೃದ್ಧಿ ಹಾಗೂ ಉದ್ಯೋಗ ಸೃಷ್ಟಿಯ ಧ್ಯೇಯವನ್ನು ಹೊಂದಿದ್ದು, ಈ ನಿಟ್ಟಿನಲ್ಲಿ ಈ ನೂತನ ಘಟಕವು ಗ್ರಾಮೀಣ ಪ್ರದೇಶದಲ್ಲಿ ಸಮಾರು ೨೦೦ ನೇರ ಮತ್ತು ಪರೋಕ್ಷ ಉದ್ಯೋಗಗಳನ್ನು ಸೃಷ್ಟಿಸಿರುವುದಲ್ಲದೇ, ರೈತರಿಗೆ ಸೂಕ್ತ ಕಬ್ಬಿನ ದರ ನೀಡಲು ಮತ್ತು ಸಾಗಾಣಿಕೆದಾರರಿಗೆ ನೆರವಾಗಲಿದೆ ಎಂದು ಹೇಳಿದರು.
ಇಂತಹ ಒಂದು ಬೃಹತ್ ಘಟಕದ ಸ್ಥಾಪನೆಯನ್ನು ಕೇವಲ ಐದೂವರೆ ತಿಂಗಳುಗಳಲ್ಲಿ ಪೂರ್ಣಗೊಳಿಸಿರುವುದು ದೇಶದ ಇತಿಹಾಸದಲ್ಲಿ ಪ್ರಥಮ ಎಂದು ಹೇಳಬಹುದು. ರಿಗ್ರೀನ್ ಎಕ್ಸೆಲ್ ಇಪಿಸಿ ಇಂಡಿಯಾ ಪ್ರೈವೇಟ್ ಲಿಮಿಟೆಡ್, ಪುಣೆ ರವರ ಸಹಯೋಗದೊಂದಿಗೆ ಕೇವಲ ಐದೂವರೆ ತಿಂಗಳುಗಳಲ್ಲಿ ನಿರ್ಮಾಣಗೊಂಡು ತನ್ನ ಕಾರ್ಯಚಟುವಟಿಕೆಗಳನ್ನು ಪ್ರಾರಂಭಿಸುತ್ತಿರುವ ಈ ಘಟಕದ ನಿರ್ಮಾಣ ಕಾರ್ಯದಲ್ಲಿ ಸಂಸ್ಥೆಯ ಹಿರಿಯ ಉಪಾಧ್ಯಕ್ಷರುಗಳಾದ ಪಿ.ಡಿ.ಹಿರೇಮಠ, ಎಲ್.ಆರ್.ಕಾರಗಿ, ವಿ.ಎಮ್.ತಳವಾರ, ಡಿ.ಆರ್.ಪವಾರ, ಎ.ಎಸ್.ರಾಣಾ ಮತ್ತು ಮದ್ಯಸಾರ ಘಟಕದ ಸಹಾಯಕ ಪ್ರಧಾನ ವ್ಯವಸ್ಥಾಪಕ ಮಹೇಶ ಜಿ.ಆರ್. ಹಾಗೂ ಕಾರ್ಖಾನೆಯ ಅಧಿಕಾರಿ ವರ್ಗದವರು ಮತ್ತು ಕಾರ್ಮಿಕ ಸಿಬ್ಬಂದಿಯವರ ಅವಿರತ ಶ್ರಮ ಶ್ಲಾಘನೀಯವಾಗಿದೆ ಎಂದು ಸತೀಶ ಶುಗರ‍್ಸ ಚೇರಮನ್ ಮತ್ತು ಸಿ.ಎಪ್.ಓ ಪ್ರದೀಪಕುಮಾರ ಇಚಡಿ ಅವರು ತಿಳಿಸಿದಾರೆ.