ಮುನವಳ್ಳಿ: ಕನ್ನಡ ಸಾಹಿತ್ಯ ಪರಿಷತ್ತಿನ ಮುನವಳ್ಳಿ ಹೋಬಳಿ ಘಟಕದ ನೂತನ ಪದಾಧಿಕಾರಿಗಳ ಅಧಿಕಾರ ಸ್ವೀಕಾರ ಹಾಗೂ ಪರಿಷತ್ತಿನ ಚಟುವಟಿಕೆಗಳ ಉದ್ಘಾಟನಾ ಸಮಾರಂಭ ಶನಿವಾರ ಜೂ. ೧೮ ರಂದು ಮುಂಜಾನೆ ೧೦.೩೦ ಗಂಟೆಗೆ ಶ್ರೀ ಪಂಚಲಿಂಗೇಶ್ವರ ದೇವಸ್ಥಾನದ ಸಭಾಭವನದಲ್ಲಿ ಶ್ರೀ ಸೋಮಶೇಖರ ಮಠದ ಶ್ರೀ ಮುರುಘೇಂದ್ರ ಮಹಾಸ್ವಾಮಿಗಳು, ಶ್ರೀ ನಿತ್ಯಾನಂದ ಸತ್ಸಂಗ ಆಶ್ರಮ ಶ್ರೀ ಮುಕ್ತಾನಂದ ಮಹಾಸ್ವಾಮಿಗಳ ಸಾನಿಧ್ಯದಲ್ಲಿ ಜರುಗಲಿದೆ.
ಉದ್ಘಾಟಕರಾಗಿ ವಿಧಾನ ಸಭೆ ಉಪಸಭಾಧ್ಯಕ್ಷ ಆನಂದ ಮಾಮನಿ ಆಗಮಿಸುವರು. ಬಸವರಾಜ ನಾವಲಗಟ್ಟಿ ಅಧ್ಯಕ್ಷತೆ ವಹಿಸುವರು.ಮುಖ್ಯ ಅತಿಥಿಗಳಾಗಿ ಡಾ. ವೈ.ಎಂ.ಯಾಕೊಳ್ಳಿ, ಟಿ.ಎಂ.ಕಾಮಣ್ಣವರ, ಮುಖಂಡರಾದ ರಮೇಶ ಗೋಮಾಡಿ, ರವೀಂದ್ರ ಯಲಿಗಾರ, ಉಮೇಶ ಬಾಳಿ, ಪಂಚನಗೌಡ ದ್ಯಾಮನಗೌಡರ, ಪುರಸಭೆ ಮುಖ್ಯಾಧಿಕಾರಿ ರಮೇಶ ಹಿಟ್ಟಣಗಿ, ಸಿ.ಡಿ.ಪಿ.ಓ. ಕಾಂಚನಾ ಅಮಠೆ, ಅನ್ನಪೂರ್ಣ ಲಂಬೂನವರ ಆಗಮಿಸುವರು.
ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಬಸು ಬೇವಿನಗಿಡದ, ಡಾ. ಎ.ಎಸ್.ಅಮೋಘಿಮಠ, ಡಾ. ಎಚ್.ಎಸ್.ಗೋಟಿ, ಬಿ.ಬಿ.ಹುಲಿಗೊಪ್ಪ, ಸುಧೀರ ವಾಘೇರಿ, ಅಶ್ವಿನಿ ಪಾತಾಳಿ, ಸಹನಾ ರಾಯರ ಅವರಿಗೆ ಸನ್ಮಾನ ಜರುಗಲಿದೆ.ಇದೇ ಸಂದರ್ಭದಲ್ಲಿ ಎಸ್.ಎಸ್.ಎಲ್.ಸಿ.ಯಲ್ಲಿ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಜರುಗಲಿದೆ.ಎಂದು ಸಾಹಿತ್ಯ ಪರಿಷತ್ತಿನ ಪ್ರಕಟಣೆಯಲ್ಲಿ ತಿಳಿಸಲಾಗಿದೆ