spot_img
spot_img

ಫೆ.11 ರಂದು ಸಿಂದಗಿಗೆ ಮಾಜಿ ಮು.ಮಂ. ಸಿದ್ಧರಾಮಯ್ಯ

Must Read

ಸಿಂದಗಿ: 2023 ರ ವಿಧಾನಸಭಾ ಚುನಾವಣೆಯಲ್ಲಿ ಹಮ್ಮಿಕೊಂಡ ಪ್ರಣಾಳಿಕೆಗಳನ್ನು ಜನರ ಬಾಗಿಲಿಗೆ ಮುಟ್ಟಿಸಲು ಪ್ರಜಾಧ್ವನಿ ಬಸ್ ಯಾತ್ರೆಯು ಫೆ. 11 ರಂದು ಬೆಳಿಗ್ಗೆ 11.00 ಗಂಟೆಗೆ ಪಟ್ಟಣದ ಅಂಜುಮನ್ ಶಾಲಾ ಮೈದಾನದಲ್ಲಿ ನಡೆಯಲಿರುವ ಬೃಹತ್ ಸಮಾವೇಶಕ್ಕೆ ಮಾಜಿ ಮುಖ್ಯಮಂತ್ರಿಗಳು ಹಾಗೂ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಜಿ ಅವರ ನೇತೃತ್ವದಲ್ಲಿ ಕಾಂಗ್ರೆಸ್ ಪಕ್ಷದ ಮುಖಂಡರು ಸಿಂದಗಿ ನಗರಕ್ಕೆ ಆಗಮಿಸಲಿದ್ದಾರೆ ಎಂದು ಮಾಜಿ ಶಾಸಕ ಶರಣಪ್ಪ ಸುಣಗಾರ ಹೇಳಿದರು.

ಪಟ್ಟಣದ ಮಾಜಿ ಶಾಸಕ ಶರಣಪ್ಪ ಸುಣಗಾರ ಅವರ ಮನೆಯಲ್ಲಿ ಕಾಂಗ್ರೆಸ್ ಪಕ್ಷದ ವತಿಯಿಂದ ಹಮ್ಮಿಕೊಂಡ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಕಾಂಗ್ರೆಸ್ ಪಕ್ಷ ಅಧಿಕಾರದಲ್ಲಿದ್ದ ಸಂದರ್ಭದಲ್ಲಿ ಅನೇಕ ಯೋಜನೆಗಳನ್ನು ಈ ನಾಡಿಗೆ ಕೊಡುಗೆಯಾಗಿ ಅನೇಕ ಯೋಜನೆಗಳನ್ನು ನೀಡಿದ್ದಾರೆ.

ಆದರೆ ಈಗಿನ ಭ್ರಷ್ಟ ಬಿಜೆಪಿ ಕೇಂದ್ರ ಹಾಗೂ ರಾಜ್ಯ ಸರಕಾರಗಳು ಬಡವರಿಗೆ ನೀಡುತ್ತಿರುವ ಎಲ್ಲ ಸೌಲಭ್ಯಗಳನ್ನು ಕಸಿದುಕೊಂಡು ಕೂಲಿ ಕಾರ್ಮಿಕರಿಗೆ ಕೈಗೆಟಕದಷ್ಟು ಬೆಲೆ ಏರಿಕೆ ಮಾಡಿ ದುಬಾರಿ ಜೀವನ ನಡೆಸುವಂತೆ ಮಾಡಿದೆ ಅದರ ವಿರುದ್ದ ಬೆಲೆ ಏರಿಕೆ, ಭ್ರಷ್ಟಾಚಾರ, 40% ಕಮಿಷನ್, ಜನ ವಿರೋಧ, ಹೀಗೆ ಹತ್ತು ಹಲವಾರು ವೈಫಲ್ಯಗಳನ್ನು  ಮಾಡಿ ಜನರನ್ನು ಮೂಲೆಗೆ ಅಟ್ಟಿದ್ದಾರೆ ಈ ಎಲ್ಲಾ ವಿಷಯಗಳನ್ನು ಗಮನದಲ್ಲಿ ಇಟ್ಟುಕೊಂಡು ವಿರೋದ ಪಕ್ಷದ ನಾಯಕ ಸಿದ್ದರಾಮಯ್ಯನವರು ಸಿಂದಗಿಗೆ ಆಗಮಿಸಲಿರುವ ಬೃಹತ್ ಪ್ರಜಾಧ್ವನಿ ಕಾರ್ಯಕರ್ತರ ಸಮಾವೇಶಕ್ಕೆ ರಾಜ್ಯ ಪ್ರಚಾರ ಸಮಿತಿ ಅಧ್ಯಕ್ಷ ಡಾ. ಎಂ.ಬಿ.ಪಾಟೀಲ, ವಿಧಾನ ಪರಿಷತ್ತಿನ ವಿರೋಧ ಪಕ್ಷದ ನಾಯಕ ಡಿ.ಕೆ ಹರಿಪ್ರಸಾದ, ಉಪನಾಯಕ ಡಾ. ಅಜಯಸಿಂಗ್, ಕಾರ್ಯಾಧ್ಯಕ್ಷರಾದ ಈಶ್ವರ ಖಂಡ್ರೆ, ಸತೀಶ ಜಾರಕಿಹೋಳಿ, ಚಾಮರಾಜ ಪೇಟೆ ಶಾಸಕ ಜಮ್ಮೀರಹ್ಮದ, ಡಾ. ಈ.ಪರಮೇಶ್ವರ, ಎಸ್.ಸಿ.ಮಹಾದೇವಪ್ಪ ಸೇರಿದಂತೆ ಅನೇಕ ನಾಯಕರು ಆಗಮಿಸುವ ಈ ಕಾರ್ಯಕ್ರಮಕ್ಕೆ  ಸುಮಾರು 35ರಿಂದ 40 ಸಾವಿರ ಜನಸಂಖ್ಯೆಯಲ್ಲಿ ಅಭಿಮಾನಿಗಳು ಸೆರುವ ಸಾಧ್ಯತೆಗಳು ಹೆಚ್ಚಿವೆ ಕಳೆದ ಉಪ ಚುನಾವಣೆಯಲ್ಲಿ ನೀಡಿದ ಭರವಸೆಗಳು ಪೊಳ್ಳು ಭರವಸೆಗಳಾಗಿವೆ ಇವೆಲ್ಲವುಗಳನ್ನು ಜನರಲ್ಲಿ ಮನವರಿಕೆ ಮಾಡಲು ಕಾಂಗ್ರೆಸ್ ಪಕ್ಷದ ಇಡೀ ಟೀಮ್ ಆಗಮಿಸಲಿದ್ದಾರೆ ಕಾರಣ ಕಾಂಗ್ರೆಸ್ ಪಕ್ಷದ ಅಭಿಮಾನಿಗಳು, ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಲು ಎಲ್ಲ ಭೂತ್ ಮಟ್ಟದ ಅಧ್ಯಕ್ಷರು ಪ್ರಚಾರ ನಡೆಸಿ ಮನವರಿಕೆ ಮಾಡುವಂತೆ ಸೂಚಿಸಿದರು.

ಬ್ಲಾಕ್ ಕಾಂಗ್ರೆಸ್ ಸಮಿತಿ ಅಧ್ಯಕ್ಷ ವಿಠ್ಠಲ ಜಿ. ಕೊಳ್ಳೂರ, ಮುಖಂಡ ಅಶೋಕ ಮನಗೂಳಿ ಮಾತನಾಡಿ, ತಳವಾರ ಸಮುದಾಯಕ್ಕೆ ಎಸ್‍ಟಿ ಸರ್ಟೀಫಿಕೇಟ ನೀಡಿದ್ದೇನೆ ಎಂದು ಶಾಸಕ ರಮೇಶ ಭೂಸನೂರ ಬಿಂಬಿಸಿಕೊಳ್ಳುತ್ತಿದ್ದು ಅದು ಕಾರ್ಯಾರಂಭವಾಗಿದ್ದು ಹಿಂದೆ ಸಿದ್ದರಾಮಯ್ಯನವರು ಇದ್ದ ಅಧಿಕಾರದಲ್ಲಿ ಎನ್ನುವುದನ್ನು ಮರೆತು ಸಭೆ ಸಮಾರಂಭಗಳನ್ನು ಹೇಳಿಕೊಳ್ಳುತ್ತಿರುವುದನ್ನು ಕೈಬಿಡಬೇಕು ಎಂದು ಚಾಟಿ ಬೀಸಿದರು.

ಟಿಕೆಟ್ ಆಕಾಂಕ್ಷಿ ರಾಕೇಶ ಕಲ್ಲೂರ್ ರವರು ಮಾತನಾಡಿದರು.

ಈ ಸಂದರ್ಭದಲ್ಲಿ ಭೀಮರಾಯ ಅಮರಗೋಳ, ಅಮಿತ ಚವ್ಹಾಣ ಸೇರಿದಂತೆ ಪದಾಧಿಕಾರಿಗಳು ಮತ್ತು ಕಾರ್ಯಕರ್ತರು ಉಪಸ್ಥಿತರಿದ್ದರು.

- Advertisement -
- Advertisement -

Latest News

ಸುಣಧೋಳಿ ಮಹಿಳಾ ಕ್ರೆಡಿಟ್ ಸೌಹಾರ್ದಗೆ ೭೬.೦೭ ಲಕ್ಷ ರೂ ಲಾಭ

ಮೂಡಲಗಿ: ಸುಣಧೋಳಿ ಮಹಿಳಾ ಕ್ರೆಡಿಟ್ ಸೌಹಾರ್ದ ಸಹಕಾರಿ ಸಂಘ ೨೦೨೩ರ ಮಾರ್ಚ ಅಂತ್ಯಕ್ಕೆ ರೂ.೭೬.೦೭ ಲಕ್ಷ ಲಾಭವನ್ನು ಗಳಿಸಿ ಪ್ರಗತಿಯಲ್ಲಿ  ಸಾಗುತ್ತಿದೆ ಎಂದು ಸಹಕಾರಿಯ ಅಧ್ಯಕ್ಷೆ...
- Advertisement -

More Articles Like This

- Advertisement -
close
error: Content is protected !!