- Advertisement -
ಸಾಯಿ ಆರ್ಟ್ಸ್ ಇಂಟರ್ ನ್ಯಾಷನಲ್ ವತಿಯಿಂದ ಶ್ರೀಮತಿ ಶ್ರೀದೇವಿ ಜಗದೀಶ ಹಾಗೂ ವೈ.ಎಂ.ಜಗದೀಶ ಅವರ ಪುತ್ರಿ ಮತ್ತು ಗುರು ಶ್ರೀಮತಿ ಶ್ವೇತ ವೆಂಕಟೇಶ ರವರ ಶಿಷ್ಯೆ ಕು. ಮೋನಿಷಾ ಐಸಿರಿ ಗೌಡ ರವರ ಕಥಕ್ ರಂಗಮಂಚ ಪ್ರವೇಶವು ಮೇ 3 ,ಸಂಜೆ 6.00 ಗಂಟೆಗೆ ನಗರದ ವೈಯಾಲಿಕಾವಲ್ ನ ಚೌಡಯ್ಯ ಮೆಮೋರಿಯಲ್ ಹಾಲ್ ನಲ್ಲಿ ನಡೆಯಲಿದೆ.
ಉಪಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವಥ್ ನಾರಾಯಣರವರ ಘನ ಉಪಸ್ಥಿತಿಯಲ್ಲಿ ಕರ್ನಾಟಕ ಕಲಾಶ್ರೀ ಸತ್ಯನಾರಾಯಣರಾಜು ಹಾಗು ನಂದಿನಿ ಕೆ ಮೆಹ್ತ ರವರು ಮುಖ್ಯ ಅತಿಥಿಗಳಾಗಿ ಆಗಮಿಸುವರು.
- Advertisement -
ಬಾಲ್ಯದಿಂದಲೇ ನೃತ್ಯಾಭಾಸ ಆರಂಭಿಸಿದ ಕು. ಮೋನಿಷಾ ಕಥಕ್ ನೃತ್ಯ ಪ್ರಕಾರದಲ್ಲಿ ಡಾ.ಮಾಯಾರಾವ್ ರವರ ಬಳಿ ಪ್ರಾರಂಭಿಕ ಅಭ್ಯಾಸ ಮಾಡಿ ಭರತನಾಟ್ಯದಲ್ಲಿ ಡಾ.ಸುಪರ್ಣ ವೆಂಕಟೇಶ್ ರವರಿಂದ ಕಲಿತು ಇದೀಗ ಗುರು ಶ್ರೀಮತಿ ಶ್ವೇತ ವೆಂಕಟೇಶ ರವರಲ್ಲಿ ಕಥಕ್ ತರಬೇತಿ ಪಡೆಯುತ್ತಿದ್ದಾರೆ. ಬೆಂಗಳೂರು ವಿಶ್ವವಿದ್ಯಾಲಯದಿಂದ ಭರತನಾಟ್ಯದಲ್ಲಿ ಸ್ನಾತಕೋತ್ತರ ಪದವಿ ಓದುತ್ತಿದ್ದಾರೆ.