ಆಧ್ಯಾತ್ಮದ ಕಡೆಗೆ ಬರಲು ಆತ್ಮಾವಲೋಕನ ಮಾಡಿಕೊಳ್ಳಬೇಕು

Must Read

ಸಂಚಾರಿ ವಿಜಯ್ ಬ್ರೇನ್ ಡೆಡ್ ; ನಾಳೆ “ನಿಧನ” ರಾಗಲಿರುವ ನಟ. ವಿಚಿತ್ರ ಪರಿಸ್ಥಿತಿ

ಬೆಂಗಳೂರು - ಯುವ ನಟ, ರಾಷ್ಟ್ರ ಪ್ರಶಸ್ತಿ ವಿಜೇತ ಕಲಾವಿದ ಸಂಚಾರಿ ವಿಜಯ್ ಅಪಘಾತದ ಕಾರಣದಿಂದಾಗಿ ಬ್ರೇನ್ ಡೆಡ್ ಆಗಿ ನಿಧನ ಹೊಂದಿದರೆಂದು ಹೇಳುವ ವಿಚಿತ್ರ...

ಜನ ಸಾಮಾನ್ಯರ ತುರ್ತು ಸೇವೆಗಾಗಿ ಅರಭಾವಿ ಕ್ಷೇತ್ರದ ಎಲ್ಲ ಪಿಎಚ್‍ಸಿಗಳಿಗೆ ರಕ್ಷಾ ಕವಚ ವಾಹನ ಸೌಲಭ್ಯ : ಶಾಸಕ ಬಾಲಚಂದ್ರ ಜಾರಕಿಹೊಳಿ

ಮೂಡಲಗಿಯಲ್ಲಿ ಟಾಸ್ಕ್ ಫೋರ್ಸ್ ಸಭೆ ಮೂಡಲಗಿ : ಕೋವಿಡ್ ಎರಡನೆಯ ಅಲೆಯ ವಿರುದ್ದ ಹೋರಾಟ ಮಾಡಿ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುತ್ತಿರುವ ಕೊರೋನಾ ವಾರಿಯರ್ಸ್‌ ಗಳ ಕಾರ್ಯ...

ಪುರಸಭೆಯ ಸಾಮಾನ್ಯ ಸಭೆ ಕರೆಯಲು ಮನವಿ

ಸಿಂದಗಿ: ಪಟ್ಟಣದ ಹಲವು ವಾರ್ಡುಗಳಲ್ಲಿ ನೀರಿನ ಸಮಸ್ಯೆ, ಗಟಾರಗಳ ಸಮಸ್ಯೆ ಸೇರಿದಂತೆ ಹಲವಾರು ಸಮಸ್ಯೆಗಳು ಉಲ್ಬಣ ಸೇರಿದಂತೆ ಹಲವಾರು ವಿಷಯಗಳ ಕುರಿತು ಚರ್ಚಿಸಲು ಸಾಮಾನ್ಯ ಸಭೆ...

ಭಾರತದ ಆಧ್ಯಾತ್ಮ ಚಿಂತಕರಿಗಾಗಿ, ವಿದೇಶಿಗಳಿಗೆ ದಾರಿದೀಪವಾಗಿದ್ದ ಭಾರತ ಇಂದು ತಾನೇ ಅವರ ಹಿಂದೆ ನಡೆದು ರೋಗ ಹೆಚ್ಚಿಸಿಕೊಂಡು ಅವರ ಔಷಧವನ್ನು ಖರೀದಿ ಮಾಡಿ ಜನರ ಆರೋಗ್ಯ ರಕ್ಷಣೆ ಮಾಡೋ ಪರಿಸ್ಥಿತಿಗೆ ಬಂದಿರೋದನ್ನು ನಾವು ಆತ್ಮನಿರ್ಭರ ಭಾರತ ಎನ್ನಬಹುದೆ?

ಆಧ್ಯಾತ್ಮದ ಪ್ರಕಾರ ರೋಗಕ್ಕೆ ಮೂಲ ಕಾರಣವೆ ಮಾನವನ ಅಜ್ಞಾನ. ಅಜ್ಞಾನದ ಮೂಲ ಶಿಕ್ಷಣ. ಶಿಕ್ಷಣ ನೀಡುವುದು ಧಾರ್ಮಿಕ ವರ್ಗದವರ ಧರ್ಮ ಕರ್ಮ . ಧಾರ್ಮಿಕ ವರ್ಗವೆ ದಿಕ್ಕುಕಾಣದೆ ಸರ್ಕಾರದ ಹಿಂದೆ ಇದ್ದರೆ ಸರ್ಕಾರವಾದರೂ ಏನು ಮಾಡಲು ಸಾಧ್ಯ?

ಒಂದು ಸಂಸಾರ ಆರೋಗ್ಯದಿಂದ ಜೀವನ ನಡೆಸಬೇಕಾದರೆ ಅದರಲ್ಲಿ ಜ್ಞಾನವಿರುವ ಸದಸ್ಯರಿರಬೇಕು. ಜ್ಞಾನದಲ್ಲಿಯೂ ಆಧ್ಯಾತ್ಮ ಮತ್ತು ಭೌತಿಕ ಜ್ಞಾನವನ್ನು ಸರಿಸಮನಾಗಿ ಅರ್ಥ ಮಾಡಿಕೊಳ್ಳಲು ‘ಜೀವನ’ ಪದಕ್ಕೆ ‘ಆಧ್ಯಾತ್ಮ’ ಪದಕ್ಕೆ ಸ್ಪಷ್ಟವಾದ ಅರ್ಥ ಸಾಮಾನ್ಯಜ್ಞಾನದಿಂದ ತಿಳಿಯುತ್ತಾ ತಮ್ಮ ಸಂಸಾರದ ಜೊತೆಗೆ ಸಮಾಜದ ಹಿತವನ್ನು ಬಯಸುವ ಗುಣವನ್ನು ಸದಸ್ಯರುಗಳು ಬೆಳೆಸಿಕೊಳ್ಳುವುದು ಅಗತ್ಯ. ಇಲ್ಲಿ ಜೀವನ ಎಂದರೆ ಜೀವಿಗಳ ವನ.ಎಲ್ಲರೂ ಸಮಾನ.

- Advertisement -

ಜೀವ ಇದ್ದರೆ ಜೀವನ. ಆಧ್ಯಾತ್ಮ ಎಂದರೆ ಆದಿ ಆತ್ಮ.ಆದಿ ಆತ್ಮ ಒಂದೆ. ನಮ್ಮೊಳಗೆ ಇರುವ ಸಣ್ಣ ಜೀವಾತ್ಮನಂತೆ ಪರರಲ್ಲಿಯೂ ಇದ್ದಾಗ ಇಲ್ಲಿ ನಾನು ಮಾತ್ರ ಜೀವನ ನಡೆಸಿ ಪರರನ್ನು ದ್ವೇಷಿಸಿದರೆ ಪರಮಾತ್ಮನ ಶಕ್ತಿ ನಮ್ಮೊಳಗೇ ಕುಸಿದು ಭೂಮಿಯ ಆರೋಗ್ಯ ಹಾಳಾಗುತ್ತದೆ. ಸ್ವಾರ್ಥ, ಅಹಂಕಾರ ನಮ್ಮೊಳಗಿದೆ.

ಇದು ಧಾರ್ಮಿಕವಾಗಿ ಅರ್ಥ ಮಾಡಿಕೊಳ್ಳಲು ಶಿಕ್ಷಣದಲ್ಲಿ ಧರ್ಮವಿರಬೇಕಿದೆ. ಇಲ್ಲಿ ಭಾರತೀಯರಾಗಿ ನಾವು ನಮ್ಮ ಮಕ್ಕಳಿಗೆ ಭಾರತೀಯ ಶಿಕ್ಷಣ ನೀಡೋ ಬದಲಿಗೆ ವಿದೇಶಿ ವಿಜ್ಞಾನವನ್ನು ನೇರವಾಗಿ ತುಂಬಿ ಆರೋಗ್ಯ ಹಾಳಾದರೆ ಇದಕ್ಕೆ ಸರ್ಕಾರ ವಿದೇಶಿಗಳ ಔಷಧ ಬೇಡೋ ಪರಿಸ್ಥಿತಿಗೆ ಬರುತ್ತದೆ.

ಒಟ್ಟಿನಲ್ಲಿ ದೇಶದೊಳಗೆ ಇದ್ದು ನಮ್ಮ ಸ್ವಾರ್ಥ ದ ರಾಜಕೀಯಕ್ಕೆ ಧರ್ಮ, ಸತ್ಯ, ನ್ಯಾಯ ನೀತಿ,ಸಂಸ್ಕೃತಿ, ಶಿಕ್ಷಣ ಹಾಗು ಭಾಷೆಗಳನ್ನು ಸಂಘಗಳಿಂದ ಬೆಳೆಸಿಕೊಳ್ಳುತ್ತಾ ಈಗ ಭಾರತ ರೋಗಕ್ಕೆ ತುತ್ತಾಗಿದೆ.ಅದೂ ವಿದೇಶಿಗಳ ರೋಗ. ಇದಕ್ಕೆ ಪೂರಕವಾಗಿ ಆಯುರ್ವೇದ ಔಷಧವನ್ನು ಭಾರತೀಯರು ಕಂಡು ಹಿಡಿದರೂ ಈವರೆಗೆ ಇದನ್ನು ಜನಸಾಮಾನ್ಯರವರೆಗೆ ತಲುಪಿಸಲು ಸರ್ಕಾರಗಳು ಯೋಚಿಸಿಲ್ಲ. ಪ್ರತಿಯೊಂದು ವಿದೇಶದಿಂದಲೇ ಆಗೋದಾದರೆ ಇದು ಆತ್ಮನಿರ್ಭರ ಭಾರತವಾಗುವುದೆ?

ಇಲ್ಲಿ ನಾವು ನಮ್ಮವರ ಸತ್ಯಕ್ಕೆ ಬೆಲೆಕೊಡದೆ ತಂತ್ರಜ್ಞಾನದಲ್ಲಿ ಮುಳುಗಿ ತತ್ವಜ್ಞಾನವನ್ನು ಕೇವಲ ಪ್ರಚಾರಕ್ಕೆ ಸೀಮಿತಮಾಡಿ ವ್ಯವಹಾರ ನಡೆಸಿದರೆ ಹಣ,ಅಧಿಕಾರ,ಸ್ಥಾನಮಾನವೇನೋ ಪಡೆಯಬಹುದು. ಆದರೆ ದೇಶದೊಳಗೆ ಇದ್ದು ದೇಶದ ವಿರುದ್ದ ತಮ್ಮ ಸ್ವಾರ್ಥ ಅಹಂಕಾರ ನಮ್ಮಲ್ಲೇ ಬೆಳೆಯುತ್ತಿದ್ದರೆ ನಾವು ಭಾರತೀಯರಾಗೋದಿಲ್ಲ.

ಸಾಮಾನ್ಯಜ್ಞಾನದಿಂದಲೇ ಆತ್ಮಜ್ಞಾನವನ್ನು ಹೆಚ್ಚಿಸಿಕೊಂಡು ಮುನ್ನೆಡೆದ ಹಿಂದಿನ ಮಹಾತ್ಮರುಗಳೆಲ್ಲಿ? ಸಾಮಾನ್ಯಜ್ಞಾನ ಬಿಟ್ಟು ವಿದೇಶಿ ವಿಜ್ಞಾನವನ್ನು ಬೆಳೆಸುತ್ತಿರುವ ನಾವೆಲ್ಲಿ? ರೋಗಕ್ಕೆ ಔಷಧವನ್ನು ಹುಡುಕಲು ವಿದೇಶದವರೆಗೆ ಹೋಗಿರುವ ಭಾರತವನ್ನು ನಾವೀಗ ಆತ್ಮನಿರ್ಭರ ಭಾರತವೆನ್ನುವುದರಲ್ಲಿ ಅರ್ಥವಿಲ್ಲ.

ಜೀವ ಉಳಿಸಲು ಪರಮಾತ್ಮನ ಮೊರೆ ಹೋಗಬೇಕು ಎನ್ನುವ ಆಧ್ಯಾತ್ಮದ ಪ್ರಕಾರ ನಮಗೆ ವಿದೇಶ ಪರಮಾತ್ಮ ಆಗಿದೆ. ಸ್ವದೇಶದ ಶಿಕ್ಷಣದಲ್ಲಿ ಆರೋಗ್ಯ ಹೆಚ್ಚಿಸಿ ಮಕ್ಕಳು ಮಹಿಳೆಯರಲ್ಲಿ ಜ್ಞಾನವನ್ನು ತುಂಬಿಸಿ, ಸ್ವಾಭಿಮಾನ ಸ್ವಾವಲಂಬನೆ, ಸ್ವಾತಂತ್ರ್ಯವನ್ನು ಹೆಚ್ಚಿಸುತ್ತಿದ್ದ ಗುರುಕುಲಗಳು ಈಗಲೂ ಇದ್ದರೂ, ಅವುಗಳನ್ನು ತಿರಸ್ಕರಿಸಿ ನೋಡುವ ವೈಜ್ಞಾನಿಕ ಯುಗ ಜನರಿಗೆ ಹಣದಿಂದಲೇ ರೋಗ ಹೆಚ್ಚುತ್ತಿದೆ.

ಅದರಿಂದಲೇ ಚಿಕಿತ್ಸೆ ದೊರೆಯುತ್ತಿದೆ. ಅದೂ ಉಚಿತವಾಗಿ ಸರ್ಕಾರ ನೀಡುತ್ತಿರುವುದೂ ಒಂದು ಋಣವೆ. ಸಾಲ ಎಲ್ಲಿಯವರೆಗೆ ಬೆಳೆದಿದೆಯೆಂದರೆ ದೇಶದ ರೋಗಕ್ಕೆ ಮದ್ದು ಕೂಡ ವಿದೇಶಿಗಳಿಂದ ತರಿಸಿಕೊಂಡು ದೇಹಕ್ಕೆ ಸೇರಿಸಿಕೊಳ್ಳುವಂತಾಗಿದೆ. ಸೂಕ್ಷ್ಮ ವಾಗಿರುವ ಸತ್ಯ ಆಧ್ಯಾತ್ಮ ವರ್ಗದವರು ಅರ್ಥ ಮಾಡಿಕೊಳ್ಳುವುದು ಅಗತ್ಯ.

ಇಲ್ಲಿ ಇದೇ ಸತ್ಯವೆಂದು ಓದಿ ತಿಳಿದು ಪ್ರಚಾರ ಮಾಡಿ ಶಿಕ್ಷಣ ನೀಡಿರುವವರು ಮಧ್ಯವರ್ತಿಗಳು. ಮಧ್ಯವರ್ತಿಗಳ ಜೀವನ ಅರ್ಧಸತ್ಯದಲ್ಲಿರುತ್ತದೆ. ದೇಶವೂ ಈಗ ಅರ್ಧಸತ್ಯದಲ್ಲಿದೆ. ಆಧ್ಯಾತ್ಮದ ಕಡೆ ಬರಬೇಕಾದರೆ ಪ್ರಜೆಗಳೇ ಆತ್ಮಾವಲೋಕನಮಾಡಿಕೊಳ್ಳಬೇಕು.

ವಿದೇಶದೆಡೆಗೆ ಹೋಗಬೇಕಾದರೆ ಮುಂದೆ ಬೇಡಬೇಕು. ಅತಿಯಾದರೆ ಗತಿಗೇಡು. ಹಾಗೆಯೇ ಭಾರತೀಯರ ಅತಿಯಾದ ಆತ್ಮವಿಶ್ವಾಸವಾಗಲಿ, ಅಹಂಕಾರ ಆಗಲಿ ಸತ್ಯದಿಂದ ದೂರ ಮಾಡುತ್ತಾ ರಾಜಕೀಯಕ್ಕೆ ಸಹಕಾರ ನೀಡುತ್ತಾ ಇಂದು ನಮ್ಮವರನ್ನು ತಿರಸ್ಕರಿಸಿ ಹೊರನಡೆದವರಿಗೆ ಮರಳಿ ಗೂಡಿಗೆ ತಂದಿರುವ ಕೊರೊನವನ್ನು ರಾಜಕೀಯವಾಗಿ ಬಳಸಿಕೊಂಡವರು ಹೆಚ್ಚಾಗಿದ್ದಾರೆಂದರೆ ಇದರಿಂದಾಗಿ ಆತ್ಮಜ್ಞಾನ ಸಿಗುವುದೆ?

ಈವರೆಗೆ ಎಷ್ಟೋ ಸತ್ಯ ಜನಸಾಮಾನ್ಯರವರೆಗೆ ತಲುಪಿದೆ. ಆದರೂ ಸರ್ಕಾರಗಳು ತಮ್ಮದೇ ಆದ ರಾಜಕೀಯದಿಂದ ಹೊರಬರಲಾಗದೆ ಜನರ ಹಣವನ್ನು ದುರ್ಭಳಕೆ ಮಾಡಿಕೊಂಡು ಜನರ ಜೀವದ ಜೊತೆ ಆಟವಾಡುತ್ತಿರುವುದು ಪ್ರಜಾಪ್ರಭುತ್ವಕ್ಕೆ ಆದ ನಷ್ಟ. ಔಷಧವೇನೂ  ಕೊಡಬಹುದು.

ಆದರೆ, ಒಳಗಿರುವ ದುಷ್ಟ ರಾಜಕೀಯ ಸ್ವಭಾವವನ್ನು ಅಳಿಸಬಹುದೆ? ರೋಗಕ್ಕೆ ಕಾರಣ ಅನಾರೋಗ್ಯಕರವಾದ ವಿಚಾರಗಳನ್ನು ಕೇಳುತ್ತಾ ಹೇಳುತ್ತಾ, ನೋಡುತ್ತಾ ನಡೆಯುತ್ತಿರುವ ಸಮಾಜ.ಇದನ್ನು ಸರಿದಾರಿಗೆ ತರುವುದು ಸರ್ಕಾರದ ಕೈಯಲ್ಲಿಲ್ಲ. ಪ್ರಜೆಗಳ ಆರೋಗ್ಯ ಅವರವರ ಮೂಲ ಧರ್ಮ ಕರ್ಮದಲ್ಲಿದೆ.

ಇದನ್ನು ಆಧ್ಯಾತ್ಮದ ಪ್ರಕಾರ ತಿಳಿದು ತಿರುಗಿ ಬರುವುದರಿಂದ ಮುಂದಿನ ಜನಾಂಗವಾದರೂ ಶುದ್ದವಾದ ಸ್ವಚ್ಚ ಜೀವನ ನಡೆಸಬಹುದು. ಆದರೆ ಇದನ್ನು ಗುರು ಹಿರಿಯರಾದವರು ಮನೆಮನೆಯೊಳಗಿದ್ದೇ ಮಾಡಲು ಈಗ ಎಷ್ಟೋ ಕಾರ್ಯಕ್ರಮ ನಡೆಸಿರೋದು ಆ ಮೇಲಿನ ಶಕ್ತಿಯ ಪ್ರೇರಣೆಯಾಗಿದೆ.

ಇದರಿಂದಾಗಿ ಕೊರೊನ ವನ್ನು ನಾವು ಭಯ ಭಕ್ತಿಯಿಂದ ಗೌರವಿಸಬೇಕೇ ಹೊರತು ಅದರಲ್ಲಿಯೂ ರಾಜಕೀಯತೆ ಬೆಳೆಸಿದರೆ ಮುಂದೆ ಇನ್ನೊಂದು ರೂಪದಲ್ಲಿ ಪ್ರಕೃತಿ ತನ್ನ ವಿಕೋಪವನ್ನು ತೋರಿಸಿ ಜೀವ ಹೋಗುತ್ತದೆ. ಇಲ್ಲಿ ಯಾರನ್ನೂ ಭಯಪಡಿಸಿ ದೈವಶಕ್ತಿ ಬೆಳೆಸಲಾಗೋದಿಲ್ಲ. ಅವರವರ ಒಳಗಿರುವ ಸಾಮಾನ್ಯಜ್ಞಾನ ಬಳಸಿಕೊಂಡರೆ ನಾವು ಈ ಜನ್ಮದಲ್ಲಿ ಏನು ಸಾಧನೆ ಮಾಡಿ ಲೋಕಕಲ್ಯಾಣವಾಗಿದೆ,ಲೋಕ ಹಾಳಾಗಿದೆ ಎನ್ನುವ ಸತ್ಯ ತಿಳಿದಾಗಲೆ ನಮ್ಮ ಜೀವನ ಎತ್ತ ಸಾಗಿದೆ ತಿಳಿಯಬಹುದು.

ನಮ್ಮ ಮನಸ್ಸು ಸತ್ಯದ ಪರವಾಗಿದ್ದರೂ ಸಹಕಾರ ಅಸತ್ಯದ ಪರವಿದ್ದರೆ ಜೀವನ ಅತಂತ್ರವೆ. ಸತ್ಯಕ್ಕೆ ಸತ್ಯವೇ ಸಾಕ್ಷಿ. ಹಾಗೆ ಮಿಥ್ಯಕ್ಕೆ ಮಿಥ್ಯ. ಅರ್ಧಸತ್ಯದ ರಾಜಕೀಯದಿಂದ ರಾಜಯೋಗ ಸಿದ್ದಿಸಲಾಗದು.ಹಾಗೆ ಸ್ವದೇಶದ ಔಷಧದಿಂದ ಆರೋಗ್ಯವೃದ್ದಿಯಾಗುವಾಗ ಅದನ್ನು ಜನಸಾಮಾನ್ಯರಿಗೆ ಎಟುಕುವ ಬೆಲೆಗೆ ಸಿಗುವಂತೆ ಮಾಡುವುದು ಸರ್ಕಾರದ ಕೆಲಸ.

ಅದನ್ನು ಬಿಟ್ಟು ವಿದೇಶದ ಔಷಧ ಕೊಟ್ಟು ಇನ್ನಷ್ಟು ಸಾಲದ ದವಡೆಗೆ ಜೀವ ಸಿಲುಕಿಸಿದರೆ ಆರೋಗ್ಯ ರಕ್ಷಣೆ ಕಷ್ಟ. ಯಾರ ಜೀವ ಉಳಿಸುವುದು ಯಾರ ಕೈಯಲ್ಲಿಲ್ಲ. ಆದರೆ ಜೀವ ಇದ್ದರೆ ಜೀವನ.ಜೀವನದಲ್ಲಿ ಸತ್ಯ ಧರ್ಮವೇ ಇಲ್ಲದೆ ನಡೆದರೆ ಭೂಮಿಗೆ ಭಾರ.ಹೀಗಾಗಿ ಹೆಚ್ಚು ಪ್ರಕೃತಿ ವಿಕೋಪಕ್ಕೆ ಜೀವ ಹೋಗುತ್ತದೆ.

ಅದಕ್ಕೂ ಸರ್ಕಾರದ ಪರಿಹಾರ ಧನ ಪಡೆಯುವವರೊಮ್ಮೆ ಆತ್ಮಾವಲೋಕನ ನಡೆಸಿಕೊಂಡರೆ ಉತ್ತಮ. ಬೌತಿಕ ಸತ್ಯದ ಪ್ರಕಾರ ಇದು ಸಂಸಾರ ನಡೆಸಲು ಅಗತ್ಯವಿದ್ದರೆ ಉತ್ತಮ. ನಮ್ಮ ಸ್ವಂತಹಣ ಬೇಕಾದಷ್ಟಿದ್ದರೆ ಹೋದ ಜೀವಾತ್ಮನಿಗೆ ಉತ್ತಮ ಸಂಸ್ಕಾರ ಕ್ರಿಯೆ ಮಾಡಿಸಿ ಮುಕ್ತಿ ಮಾರ್ಗ ತೋರಿಸಬಹುದು. ಸರ್ಕಾರದ ಹಣ ಜನರ ಋಣ. ಇದೊಂದು ಆಧ್ಯಾತ್ಮದ ಸತ್ಯ.

ಧಾರ್ಮಿಕ ವರ್ಗದವರು ಈ ವಿಚಾರವನ್ನು ಜನರಿಗೆ ತಿಳಿಸಿದರೆ ಆತ್ಮಕ್ಕೆ ತೃಪ್ತಿ, ಶಾಂತಿ,ಮುಕ್ತಿ. ತಿಳಿದವರು ಬಹಳ ಮಂದಿ ಭಾರತೀಯರಾಗಿದ್ದಾರೆ. ಆದರೆ ಹೇಳೋವವರು ಕಡಿಮೆ.ಕಾರಣವಿಷ್ಟೆ ವಿರೋಧಿಗಳು ಹೆಚ್ಚಾಗಿದ್ದಾರೆ.

ಯಾವುದೇ ಸತ್ಯವಾಗಲಿ ಅರ್ಥ ಆಗೋದಿಲ್ಲವೆಂದು ತಿಳಿಸದೆ ಹಿಂದುಳಿದಾಗಲೇ ಅಸತ್ಯ,ಅಧರ್ಮ,ಅನ್ಯಾಯಗಳು ಸ್ವತಂತ್ರ
ಪಡೆದು ಆಳೋದಲ್ಲವೆ? ಮಕ್ಕಳನ್ನು ಬೆಳೆಸುವಾಗಲೂ ಪೋಷಕರು ಸತ್ಯ ತಿಳಿಸದೆ ಮಿಥ್ಯಜ್ಞಾನ ನೀಡಿ ಕೊನೆಯಲ್ಲಿ ಸತ್ಯ ಅರ್ಥ ವಾಗದೆ ಮಕ್ಕಳು ಪೋಷಕರ ವಿರುದ್ದ ನಿಲ್ಲುತ್ತಾರೆ.

ಇದರಲ್ಲಿ ತಪ್ಪು ಪೋಷಕರದ್ದಾಗಿದೆ.ಹಾಗೆಯೇ ದೇಶದ ಪ್ರಜೆಗಳಿಗೆ ಸತ್ಯಜ್ಞಾನದ ಶಿಕ್ಷಣ ನೀಡದೆ ಆರೋಗ್ಯ ಹಾಳಾಗಿರುವಾಗ ಈಗಲೂ ಸತ್ಯ ತಿಳಿಸದಿದ್ದರೆ ಮುಂದಿನ ಪ್ರಜೆಗಳಿಗೂ ಇದೇ ಗತಿ. ಒಟ್ಟಿನಲ್ಲಿ ದೇಶ ಒಂದೇ. ಅದರೊಳಗೆ ಆರೋಗ್ಯವಂತ ಪ್ರಜೆಗಳಿದ್ದರೆ ದೇಶ ಸುರಕ್ಷಿತ ರೋಗಿಷ್ಠರಿದ್ದರೆ ರೋಗಗ್ರಸ್ತ ಸಮಾಜ.

ನಮ್ಮ ಆಯ್ಕೆ ನಮ್ಮಆಂತರಿಕ ಶುದ್ದತೆಯ ಶಿಕ್ಷಣದ ಮೇಲಿದೆ. ಆಗೋದನ್ನು ತಡೆಯಲು ಕಷ್ಟ.ಯಾಕೆ ಆಗಿದೆ ತಿಳಿದು ಸರಿಪಡಿಸಿಕೊಳ್ಳಲು ಭಾರತದ ಪ್ರಜಾಪ್ರಭುತ್ವದಲ್ಲಿ ಸ್ವಾತಂತ್ರ್ಯ ವಿದೆ. ಇದಕ್ಕೆ ಒಗ್ಗಟ್ಟು ಬೇಕಷ್ಟೆ. ಎಲ್ಲಾ ಧರ್ಮ, ಪಕ್ಷ,ಜಾತಿ, ದೇವರು ದೇಶದ ಒಳಗಿದ್ದರೂ ಆರೋಗ್ಯವಿಲ್ಲವಾದರೆ ಪ್ರಯೋಜನವಿಲ್ಲ. ಮುಖ್ಯವಾಗಿ ಸತ್ಯಜ್ಞಾನ ತಿಳಿಯೋ ಸಾಮಾನ್ಯಜ್ಞಾನ ಬಳಸದೆ ಇದ್ದರೆ ಮನುಕುಲಕ್ಕೆ ಅಪಾಯ ಕಟ್ಟಿಟ್ಟ ಬುತ್ತಿ.ಇದೊಂದು ಸಾಮಾನ್ಯಜ್ಞಾನದ ಸಾಮಾನ್ಯ ಪ್ರಜೆಯ ಸತ್ಯವಾಗಿದೆ.ತಪ್ಪು ಎನಿಸಿದರೆ ತಿಳಿಸಬಹುದು.

ಶ್ರೀಮತಿ ಅರುಣ ಉದಯಭಾಸ್ಕರ, ಬೆಂಗಳೂರು

- Advertisement -

LEAVE A REPLY

Please enter your comment!
Please enter your name here

- Advertisement -

Latest News

ಸಂಚಾರಿ ವಿಜಯ್ ಬ್ರೇನ್ ಡೆಡ್ ; ನಾಳೆ “ನಿಧನ” ರಾಗಲಿರುವ ನಟ. ವಿಚಿತ್ರ ಪರಿಸ್ಥಿತಿ

ಬೆಂಗಳೂರು - ಯುವ ನಟ, ರಾಷ್ಟ್ರ ಪ್ರಶಸ್ತಿ ವಿಜೇತ ಕಲಾವಿದ ಸಂಚಾರಿ ವಿಜಯ್ ಅಪಘಾತದ ಕಾರಣದಿಂದಾಗಿ ಬ್ರೇನ್ ಡೆಡ್ ಆಗಿ ನಿಧನ ಹೊಂದಿದರೆಂದು ಹೇಳುವ ವಿಚಿತ್ರ...
- Advertisement -

More Articles Like This

- Advertisement -
close
error: Content is protected !!