ಯಾದವಾಡದಲ್ಲಿ ಒಂದು ನಿಮಿಷದ ಬಂಡಿ ಸ್ಫರ್ಧೆ; ಹಲಗಲಿ ಬಂಡಿ ಪ್ರಥಮ

Must Read

ಮೂಡಲಗಿ: ತಾಲೂಕಿನ ಯಾದವಾಡ ಗ್ರಾಮದ ಶ್ರೀ ಚೌಕೇಶ್ವರ ಹಾಗೂ ಘಟ್ಟಗಿ ಬಸವೇಶ್ವರ ಜಾತ್ರೆಯ ನಿಮಿತ್ತವಾಗಿ ರವಿವಾರದಂದು ಜರುಗಿದ ಜೋಡೆತ್ತಿನ ಒಂದು ನಿಮಿಷ ಗಾಡಿ ಓಟದ ಸ್ಪರ್ಧೆಯಲ್ಲಿ ಜೋಡೆತ್ತುಗಳು ಚಿನ್ನಾಟವಾಡುತ್ತಾ ಮಿಂಚಿನತೆ ಓಡಿದ್ದೇ ಓಡಿದ್ದು ಕಂಡ ಜನರ ಹರ್ಷೋದ್ಗಾರದೊಂದಿಗೆ ಮನ ರಂಜಿಸಿತು.

ಒಂದು ನಿಮಿಷ ಗಾಡಿ ಓಟದ ಸ್ಪರ್ಧೆಯಲ್ಲಿ ಸುಮಾರು ೨೬ ಬಂಡಿಗಳು ಭಾಗಹಿಸಿದವು. ಸ್ಪರ್ಧೆಯಲ್ಲಿ ಹಲಗಲಿಯ ನಾಗಲಿಂಗೇಶ್ವರ ಪ್ರಸನ್ನ ಎತ್ತುಗಳು ಪ್ರಥಮ ಸ್ಥಾನ, ಮರಿಕಟ್ಟಿಯ ಜೈ ಹನುಮಾನ ಪ್ರಸನ್ನ ಎತ್ತುಗಳು ದ್ವಿತೀಯ ಸ್ಥಾನ, ನಾಗರಾಳದ ಜೈ ಹನುಮಾನ ಪ್ರಸನ್ನ ಎತ್ತುಗಳು ತೃತೀಯ ಸ್ಥಾನ,  ಗೋರಬಾಳದ ಗ್ರಾಮದೇವಿ ಪ್ರಸನ್ನ ಎತ್ತುಗಳು ಚತುರ್ಥಸ್ಥಾನ, ಇಟ್ಟಾಳದ ಬೀರೇಶ್ವರ ಎತ್ತುಗಳು ಐದನೇ ಸ್ಥಾನ, ಉದಗಟ್ಟಿಯ ರಾಜು ಪೂಜೇರಿ ಎತ್ತುಗಳು ಆರನೇ ಸ್ಥಾನ ಮತ್ತು ಲಕ್ಷ್ಮೀ ದೇವಿ ಪ್ರಸನ್ನ  ಎತ್ತುಗಳು ಏಳನೇ ಸ್ಥಾನ, ಹೂಲಿಕಟ್ಟಿಯ ಮಾರುತೇಶ್ವರ ಪ್ರಸನ್ನ ಎತ್ತುಗಳು ಎಂಟನೇ ಸ್ಥಾನ, ತೇರದಾಳದ ಪ್ರಭುಲಿಂಗೇಶ್ವರ ಪ್ರಸನ್ನ ಎತ್ತುಗಳು ಒಂಬತ್ತನೇ ಸ್ಥಾನ, ನೇಗಿನಹಾಳದ ಮಹಾಲಿಂಗೇಶ್ವರ ಪ್ರಸನ್ನ ಎತ್ತುಗಳು ಹತ್ತನೇ ಸ್ಥಾನ ಪಡೆದುಕೊಂಡವು.

ಭಾರಿ ಬಿಸಿಲಿನಲ್ಲಿ ಜೋಡೆತ್ತಿನ ಒಂದು ನಿಮಿಷ ಗಾಡಿ ಓಟದ ಸ್ಪರ್ಧೆಯನ್ನು ವೀಕ್ಷಿಸಲು ಆಗಮಿಸಿ ಜನರಿಗೆ ಯಾದವಾಡ ಗ್ರಾಮದ ಶ್ರೀ ಶ್ರೀಶೈಲ ಮಲ್ಲಿಕಾರ್ಜುನ ಪಾದಾಯಾತ್ರಾ ಸೇವಾ ಸಮಿತಿಯವರು ಸಾವಿರಾರು ಜನರಿಗೆ  ತಂಪಾದ ಮೊಸರು-ಅವಲಕ್ಕಿ ವಿತರಿಸಿದರು.

ಜಾತ್ರಾ ಕಮೀಟಿಯ ಪದಾಧಿಕಾರಿಗಳು ಮತ್ತು ಬಹುಮಾನ ನೀಡಿದವರು ಸ್ಪರ್ಧೆಗೆ ಚಾಲನೆ ನೀಡಿದರು.

Latest News

ಶರಣರ ಪೂಜೆ ಮಾಡುವುದಕ್ಕಿಂತ ತತ್ವ ಅಳವಡಿಸಿಕೊಳ್ಳಬೇಕು

ಸಿಂದಗಿ; ೧೨ನೇ ಶತಮಾನದಲ್ಲಿ ಸಮ ಸಮಾಜದ ನಿರ್ಮಾಣ ಮಾಡಿದ ಶರಣರ ಜಯಂತಿಗಳ ಮೂಲಕ ಭಾವ ಚಿತ್ರಗಳನ್ನು ಪೂಜೆ ಮಾಡುವುದಕ್ಕಿಂತಲೂ ಶರಣರ ತತ್ವ ಸಿದಾಂತಗಳನ್ನು ನಾವೆಲ್ಲರು ಮೈಗೂಡಿಸಿಕೊಂಡು...

More Articles Like This

error: Content is protected !!
Join WhatsApp Group