ಬೀದರ – ಗಡಿ ಜಿಲ್ಲೆ ಬೀದರನಲ್ಲಿ ರಾಜಾರೋಷವಾಗಿ ಅಕ್ರಮ ಮರಳು ದಂಧೆ ಎಗ್ಗಿಲ್ಲದೆ ನಡೆಯುತ್ತಿದ್ದರೂ ಗಣಿ ಮತ್ತು ಭೂ ವಿಜ್ಞಾನ ಹಾಗೂ ಜಿಲ್ಲಾಡಳಿತ ಮಾತ್ರ ಇದಕ್ಕೂ ನಮಗೂ ಸಂಭಂದವಿಲ್ಲ ಎನ್ನುವಂತೆ ನಾಪತ್ತೆಯಾಗಿ ಬಿಟ್ಟಿವೆ.
ಆದರೆ ಮರಳು ಮಾಫಿಯಾಗೆ ಜಿಲ್ಲೆಯ ಜೀವ ನದಿ ಮಾಂಜ್ರಾ ಒಡಲು ಮಾತ್ರ ಬರಿದಾಗುತ್ತಿದ್ದರೂ ಯಾರೂ ಕ್ರಮಕ್ಕೆ ಮುಂದಾಗುತ್ತಿಲ್ಲ.
ಈ ಕುರಿತು ಒಂದು ವಿಶೇಷ ವರದಿ ಇಲ್ಲಿದೆ ನೋಡಿ…
ಒಂದು ಕಡೆ ರಾಜಾರೋಷವಾಗಿ ಅಕ್ರಮ ಮರಳು ದಂಧೆ ಮಾಡುತ್ತಿರುವವರ ದೃಶ್ಯಗಳು… ಮತ್ತೊಂದು ಕಡೆ ಜಿಲ್ಲೆಯ ಜೀವನದಿಯ ಒಡಲು ಬರಿದಾಗುತ್ತಿರುವ ದೃಶ್ಯಗಳು….ಆದರೆ ಯಾರೂ ಹೇಳೋರು ಕೇಳೋರು ಇಲ್ಲದಂತಾಗಿದೆ.
ಹೌದು, ಬೀದರ್ ನಲ್ಲಿ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳ ಲಂಚಬಾಕತನಕ್ಕೆ ಇಂದು ಮಂಜ್ರಾ ದಡದಲ್ಲಿ ಅಕ್ರಮ ಮರಳು ದಂಧೆ ಜೋರಾಗುತ್ತಿದೆ… ಪ್ರತಿದಿನ ಟ್ರ್ಯಾಕ್ಟರ್ ಗಾಡಿಗಳಲ್ಲಿ ಸಾವಿರಾರು ಲೋಡ್ ಮರಳನ್ನು ಅಕ್ರಮವಾಗಿ ಸಾಗಾಟ ಮಾಡುತ್ತಿದ್ದಾರೆ.
ಮಂಜ್ರಾನದಿಯ ದಡದಲ್ಲಿರುವ ಭಾಲ್ಕಿಯ ಹಜನಾಳ, ಯರನಾಳ ಬೀದರ್ ತಾಲೂಕಿನ ಶ್ರೀಮಂಡಲ್ ಸೇರಿದಂತೆ ವಿವಿಧ ಗ್ರಾಮಗಳ ಬಳಿ ಎಗ್ಗಿಲ್ಲದೆ ರಾಜಾರೋಷಾಗಿ ಅಕ್ರಮ ಮರಳು ನಡೆಯುತ್ತಿದೆ.
ಮರಳು ಮಾಫಿಯಾಗೆ ಜಿಲ್ಲೆಯ ಜೀವ ನದಿ ಮಾಂಜ್ರಾ ಒಡಲು ಬರಿದಾಗುತ್ತಿದೆ. ಜಿಲ್ಲೆಯ ಮರಳು ಸಂಪತ್ತು ಲೂಟಿಯಾಗುತ್ತಿದ್ದರೂ ಅಧಿಕಾರಿಗಳು ಮಾತ್ರ ನಾಪತ್ತೆಯಾಗಿ ಬಿಟ್ಟಿದ್ದಾರೆ. ಗಣಿ ಮತ್ತು ಭೂ ವಿಜ್ಞಾನ ಹಾಗೂ ಜಿಲ್ಲಾಡಳಿತ ಮಾತ್ರ ಮರಳು ಮಾಫಿಯಾಗೆ ಬ್ರೇಕ್ ಹಾಕದೆ ಜಿಲ್ಲೆಯಿಂದ ಕಾಣೆಯಾಗಿದ್ದಾರೆ.
ಕೆಲ ದಿನಗಳ ಹಿಂದೆಯಷ್ಟೇ ಅಕ್ರಮ ಕಲ್ಲು ಗಣಿಗಾರಿಕೆ ಬಗ್ಗೆ ಸುದ್ದಿ ಮಾಡಿ ರಾಜ್ಯದ ಜನತೆಗೆ ತೋರಿಸಿದ್ದ ಟೈಮ್ಸ್ ಆಫ್ ಕರ್ನಾಟಕ ಈ ಬಾರಿ ಅಕ್ರಮ ಮರಳು ಮಾಫಿಯಾ ಬಗ್ಗೆ ರಿಯಾಲಿಟಿ ಚೆಕ್ ಮಾಡಿದೆ.
ಭಾಲ್ಕಿ ತಾಲೂಕಿನ ಹಜನಾಳ, ಯರನಳ್ಳಿ ಸೇರಿದಂತೆ ವಿವಿಧ ಕಡೆ ಹೋಗಿ ಟೈಮ್ಸ್ ಆಪ್ ಕರ್ನಾಟಕ ರಿಯಾಲಿಟಿ ಚೆಕ್ ಮಾಡಿತ್ತು. ಆಗ ಅಕ್ರಮ ಮರಳು ದಂಧೆಕೊರರು ಜೆಸಿಬಿಯಿಂದ ಮಾಂಜ್ರಾನದಿ ಹೊಡಲನ್ನು ಬಗೆದಿದ್ದು ಬಹಿರಂಗವಾಗಿತ್ತು.
ಜೊತೆಗೆ ಟ್ರಾಕ್ಟರ್ ನಲ್ಲಿ ಮರಳು ತುಂಬಿಕೊಂಡು ಅಕ್ರಮವಾಗಿ ಸಾಗಾಟ ಮಾಡುತ್ತಿರುವ ದೃಶ್ಯಗಳು ಕ್ಯಾಮರಾದಲ್ಲಿ ಸೆರೆಯಾಗಿದ್ದರು. ಹಜನಾಳ ಗ್ರಾಮದ ಬಳಿರುವ ಮಾಂಜ್ರಾ ನದಿಯ ದಡಕ್ಕೆ ಕ್ಯಾಮೆರಾ ಕಾಲಿಡುತ್ತಿದ್ದಂತೆ ಅಲ್ಲಿಂದ ಅಕ್ರಮ ಮರಳು ದಂಧೆಕೋರರು ಬೈಕ್ ನಲ್ಲಿ ಕಾಲ್ಕಿತ್ತಿದ್ದರು… ಮಾಂಜ್ರಾ ನದಿ ಒಡಲನ್ನು ಬಗೆಯಲು ಬಳಸುತ್ತಿದ್ದ ಜೆಸಿಬಿಗಳನ್ನು ಅಲ್ಲೆ ಬಿಟ್ಟು ಅಕ್ರಮ ಮರಳು ದಂಧೆಕೋರರು ಪರಾರಿಯಾಗಿದ್ದರು.
ಈ ಬಗ್ಗೆ ಜಿಲ್ಲಾ ಉಸ್ತುವಾರಿ ಸಚಿವ ಶಂಕರ ಪಾಟೀಲ ಮುನೇನಕೊಪ್ಪರನ್ನು ಪತ್ರಿಕೆ ಪ್ರಶ್ನೆ ಮಾಡಿದಾಗ, ಅಕ್ರಮ ಗಣಿಗಾರಿಕೆ ಮಾಡುವವರ ವಿರುದ್ಧ ಕಠಿಣ ಕ್ರಮ ಜರುಗಿಸುವುದಾಗಿ ಸಿದ್ಧ ಉತ್ತರ ನೀಡಿ ಜಾರಿಕೊಂಡರು.
ರಾಜ್ಯದ ಎಲ್ಲಾ ಕಡೆ ಅಕ್ರಮ ಮರಳು ದಂಧೆಗೆ ಕಡಿವಾಣ ಬಿದ್ದಿದೆ ಆದರೂ ಬೀದರ ಜಿಲ್ಲೆಯಲ್ಲಿ ಇದು ರಾಜಾರೋಷವಾಗಿ ನಡೆಯುತ್ತಿದ್ದು ಜನತೆಯಲ್ಲಿ ಅನೇಕ ಊಹಾಪೋಹಗಳು ಉಂಟಾಗಲು ಕಾರಣ ವಾಗಿದೆ. ಇನ್ನಾದರೂ ಜಿಲ್ಲಾಡಳಿತ, ಗಣಿ ಇಲಾಖೆಗಳು ಎಚ್ಚತ್ತುಕೊಂಡು ಅಕ್ರಮ ಮರಳು ಗಣಿಗಾರಿಕೆಯನ್ನು ತಡೆಯುತ್ತವೆಯೋ ಎಂಬುದನ್ನು ಕಾದು ನೋಡಬೇಕು.
ವರದಿ: ನಂದಕುಮಾರ ಕರಂಜೆ,
ಟೈಮ್ಸ್ ಆಫ್ ಕರ್ನಾಟಕ, ಬೀದರ