ಪರಿಸರ ಸಂಪತ್ತನ್ನು ಸರಿಯಾಗಿ ನಿರ್ವಹಿಸಿದರೆ ಮಾತ್ರ ಉಳಿಗಾಲ: ಪರಿಸರ ತಜ್ಞ ಖಡಬಡಿ ಅಭಿಮತ

Must Read

ಮೂಡಲಗಿ ತಾಲೂಕಾ ಪತ್ರಕರ್ತರ ಸಂಘದ ಕಚೇರಿ ಉದ್ಘಾಟನೆ

ಮೂಡಲಗಿ - ಹಲವಾರು ಯುವ ಪತ್ರಕರ್ತರ ಉತ್ಸಾಹ ಹಾಗೂ ಕಾರ್ಯಶೀಲತೆಯ ಪ್ರತೀಕವಾಗಿ ರಚನೆಗೊಂಡ ಮೂಡಲಗಿ ತಾಲೂಕಾ ಪತ್ರಕರ್ತರ ಸಂಘದ ಕಚೇರಿಯನ್ನು ಅರಭಾವಿ ಶಾಸಕ ಬಾಲಚಂದ್ರ ಜಾರಕಿಹೊಳಿಯವರ...

ಲೋಳಸೂರ ಹೊಸ ಸೇತುವೆ ನಿರ್ಮಿಸುವಂತೆ ನೂತನ ಸಿಎಂ ಅವರಿಗೆ ಕಡಾಡಿಯವರಿಂದ ಮನವಿ

ಮೂಡಲಗಿ: ಗೋಕಾಕ ನಗರಕ್ಕೆ ಸಂಪರ್ಕ ಕಲ್ಪಿಸುವ ಜತ್ತ ಜಾಂಬೋಟಿ ರಾಜ್ಯ ಹೆದ್ದಾರಿ-31 ರ ಲೋಳಸೂರ ಗ್ರಾಮದ ಹತ್ತಿರ ಘಟಪ್ರಭಾ ನದಿಗೆ ಅಡ್ಡಲಾಗಿ ಹೊಸ ಸೇತುವೆ ನಿರ್ಮಿಸುವಂತೆ...

ಭಾರತ ಮಾತೆಯ ಜ್ಞಾನ ಶಕ್ತಿ ಭಾರತೀಯ ಸ್ತ್ರೀಯಲ್ಲಿದೆ

ಪತಿವ್ರತೆಗೂ ಧರ್ಮ ಪತ್ನಿಗಿರುವ ವ್ಯತ್ಯಾಸವಿಷ್ಟೆ. ಪತಿವ್ರತೆ ಪತಿಯ ದಾರಿಯಲ್ಲಿ ತಾನೂ ನಡೆಯೋದು. ಧರ್ಮಪತ್ನಿ ಪತಿಯನ್ನು ಧರ್ಮದ ಹಾದಿಯಲ್ಲಿ ನಡೆಸೋದು. ಭೂಮಿ ಮೇಲೆ ಧರ್ಮ ನೆಲೆಸಬೇಕಾದರೆ ಸ್ತ್ರೀ...

ಕನ್ನಡ ಸಾಹಿತ್ಯ ಪರಿಷತ್ತು ವತಿಯಿಂದ ಹಮ್ಮಿಕೊಳ್ಳಲಾಗಿರುವ ಸೆಮಿನಾರ್ ಮಾಲಿಕೆಯ ಆರನೇ ಉಪನ್ಯಾಸ ರವಿವಾರ ಜರುಗಿತು. ಕಾರ್ಯಕ್ರಮದಲ್ಲಿ ಸವದತ್ತಿ ತಾಲೂಕು ಕ.ಸಾ.ಪ ಅಧ್ಯಕ್ಷ ಡಿ.ಬಿ. ದೊಡ್ಡಗೌಡರ ಸ್ವಾಗತಿಸಿ ಅತಿಥಿಗಳ ಪರಿಚಯ ಮಾಡಿದರು. ಆಶಯ ನುಡಿಗಳನ್ನಾಡಿದ ಜಿಲ್ಲಾಧ್ಯಕ್ಷೆ ಮಂಗಲ ಮೆಟಗುಡ್ ಮಾತನಾಡಿ, ಪರಿಸರ ದಿನ ಕೇವಲ ದಿನಕ್ಕೆ ಸೀಮಿತವಾಗಿರದೆ ನಿತ್ಯವೂ ಆಗಿರಲಿ. ಸಾಧ್ಯವಾದಷ್ಟು ಮಾನಸಿಕವಾಗಿ ಪ್ರತಿಯೊಬ್ಬರೂ ಪರಿಸರವನ್ನು ಸ್ವಚ್ಛವಾಗಿರುವ ಜವಾಬ್ದಾರಿಯನ್ನು ಹೊರಬೇಕಾಗಿದೆ. ಸಾಧ್ಯವಿದ್ದಷ್ಟು ಪ್ಲಾಸ್ಟಿಕನ್ನು ದೂರಮಾಡುವ ಇಲ್ಲವೇ ಮರುಬಳಕೆ ಆಗುವ ರೀತಿಯಲ್ಲಿ ಬಳಸಿದರೆ ಮಾತ್ರ ಪೃಥ್ವಿಗೆ ಇದರಿಂದ ಉಳಿಗಾಲ ಎಂದರು.

ಕಾರ್ಯಕ್ರಮದಲ್ಲಿ ಪರಿಸರ ಮಿತ್ರ ಸಂಘಟನೆಯ ಅಧ್ಯಕ್ಷರು, ನಿವೃತ್ತ ಅಧಿಕಾರಿಗಳು ಆದ ಪ್ರೊ. ಜಿ.ಕೆ. ಖಡಬಡಿ “ಪರಿಸರ ಮಾಲಿನ್ಯ ನಿರ್ವಹಣೆ” ವಿಷಯದ ಮೇಲೆ ವಿಶೇಷ ಉಪನ್ಯಾಸ ನೀಡಿದರು.

ಸಾಮಾಜಿಕ-ಆರ್ಥಿಕ, ಜಾಗತಿಕವಾಗಿ ಎಲ್ಲವುಗಳ ಬೆಳವಣಿಗೆಗೆ ಪರಿಸರವೇ ಮೂಲವಾಗಿದೆ. ನೀರು, ಭೂಮಿ, ಅರಣ್ಯ, ವಾಯು ಇಂತಹ ಅಂಗಗಳನ್ನು ಹೊಂದಿರುವ ಪರಿಸರ ಶೇ. 90ರಷ್ಟು ಮಲೀನ ವಾಗುವುದು ಮಾನವನಿಂದಲೇ. ವಿಶ್ವ ಇಂದು ಮಾನವನ ಬೇಡಿಕೆ ಪೂರೈಕೆ ಮತ್ತು ಪರಿಸರ ನಾಶ ತಡೆ ಈ ಎರಡು ಪ್ರಮುಖ ಸಮಸ್ಯೆಗಳನ್ನು ಎದುರಿಸುತ್ತಿದೆ. ನಾವು ಪರಿಸರವನ್ನು ನಾಶಮಾಡಿ ಅಭಿವೃದ್ಧಿ ಮಾಡಿದರೆ ಅದು ಅಭಿವೃದ್ಧಿಯಲ್ಲ. ಅರಣ್ಯ ನಾಶವಾದರೆ ಜೀವಸಂಕುಲದ ಸಮತೋಲನದ ಕೊಂಡಿ ಮುರಿಯುತ್ತದೆ. ಪ್ರಾಣಿ ನಗರಕ್ಕೆ ಬಂದು, ಮಳೆ ಕಡಿಮೆ, ಬೆಳೆ ಕಡಿಮೆ, ಆದಾಯ ಕಡಿಮೆಯಾಗುತ್ತದೆ. ಪರಿಸರದ ಪ್ರಮುಖ ಅಂಶ ನೀರು. ನೀರು ಮಲಿನವಾದರೆ ತನ್ನ ಅಸ್ತಿತ್ವ ಕಳೆದುಕೊಳ್ಳುತ್ತದೆ. ಹನಿ ಹನಿ ನೀರನ್ನು ಸಹ ನಾವು ಜಾಗರೂಕವಾಗಿ ಉಳಿಸಬೇಕಿದೆ. ಇರುವ ನೀರು ಇರುವಷ್ಟೇ ಇರುತ್ತದೆ ಆದರೆ ನಾವು ಅದನ್ನು ಯಾವ ರೀತಿ ಬಳಕೆ ಮಾಡಬೇಕು ಎನ್ನುವುದು ಮುಖ್ಯ. ಮಳೆ ನೀರು ಕೊಯ್ಲು ಇಂಗುಗುಂಡಿ ಮಾಡಿದರೆ ಅಂತರ್ಜಲದ ಮಟ್ಟ ಹೆಚ್ಚಿಸಬಹುದು. ನಾವು ಇದ್ದ ನೀರನ್ನು ಪೋಲಾಗದಂತೆ ನಿರ್ವಹಣೆ ಮಾಡಬೇಕು. ಕೃಷಿ, ಕಾರ್ಖಾನೆ, ಗೃಹಬಳಕೆ ಎಲ್ಲದರಲ್ಲೂ ಸಹ ನಿರ್ವಹಣೆ ಮುಖ್ಯ. ವಾಯು ಸಹ ಇಂದಿನ ವಿಷಕಾರಿಕ ಅನಿಲಗಳು ಹೆಚ್ಚಾಗುವ ಕಾರಣ ಮಲಿನವಾಗುತ್ತಿದೆ. ಶೇ75 ರಷ್ಟು ವಾಹನಗಳಿಂದ ವಾಯುಮಾಲಿನ್ಯ ಆಗುತ್ತಿದೆ. ಅದಕ್ಕೆ ಪರ್ಯಾಯವಾಗಿ ನಾವು ಜೈವಿಕ ಇಂಧನಗಳನ್ನು ಬಳಸಿ ಇಂಧನ ತೆಗೆಯಲು ಸಾಧ್ಯ ಅದನ್ನು ಹೆಚ್ಚಾಗಿ ಮಾಡಬೇಕಿದೆ. ಸೌರಶಕ್ತಿಯನ್ನು ಹೆಚ್ಚಾಗಿ ಬಳಸಬೇಕಿದೆ. ಗೋಡೆ ಕಟ್ಟಿ ತಟ್ಟಿ ಹೊಲಿಯುವುದು ಬೇಡ. ಪರ್ಯಾಯ ಮಾರ್ಗ ಅನುಸರಿಸಬೇಕಿದೆ. ವಿಷಾನಿಲಗಳು ವಿಪರೀತ ಬಿಡುಗಡೆ ಆಗುವುದರಿಂದ ಓಝೋನ್ ಪದರ ತೆಳುವಾಗಿ ಮುಂದೆ ಬರಬಹುದಾದ ಗಂಡಾಂತರವನ್ನು ತಪ್ಪಿಸಲು ನಾವು ವಾಯುಮಾಲಿನ್ಯ ತಡೆಯಬೇಕಿದೆ. ಅದೇ ರೀತಿ ಭೂಮಿಯು ಸಹ ವಿಪರೀತವಾದ ರಾಸಾಯನಿಕ ಗೊಬ್ಬರಗಳನ್ನು ಬಳಸುವುದರಿಂದ ತನ್ನ ಫಲವತ್ತತೆ ಕಳೆದುಕೊಳ್ಳುತ್ತಿದೆ. ಬೇಗ ಬೆಳೆ ಬರಬೇಕೆಂದು ಎಂದು ನಾವು ನಾನಾ ರೀತಿಯ ರಾಸಾಯನಿಕಗಳನ್ನು ಬಳಸುವುದರಿಂದ ಭೂಮಿ ಬರಡಾಗುತ್ತಿದೆ. ಭೂ ಸವಕಳಿ ತಡೆಯಲು ನಾವು ಯತ್ನಿಸಬೇಕು. ಇನ್ನೂ ಅರಣ್ಯಗಳನ್ನು ಸಹ ನಾವು ಖನಿಜೀಕರಣ, ನಗರೀಕರಣ, ರಸ್ತೆ ಹೀಗೆ ನಾನಾ ಕಾರಣಗಳಿಂದ ಅರಣ್ಯವನ್ನು ಬರಡು ಮಾಡುತ್ತಿದ್ದೇವೆ. 80 ಮತ್ತು 90ರ ದಶಕದಲ್ಲಿ ಅರಣ್ಯ ಉಳಿಕೆಗಾಗಿ ಹೋರಾಡಿದ ಸುಂದರಲಾಲ್ ಬಹುಗುಣ ಮತ್ತು ಶಿವರಾಮ ಕಾರಂತರಂತೆ ಜಾಗೃತಿ ಮೂಡಿಸುವ ಕಾರ್ಯಗಳು ಮತ್ತೆ ಈಗ ಆಗಬೇಕಿದೆ. ಅಂದಾಗ ಮಾತ್ರ ಕಾಡು ಉಳಿದು ಜಾಗತಿಕ ತಾಪಮಾನವು ಸಹ ಹೆಚ್ಚಾಗದು. ಪರಿಸರವನ್ನು ರಕ್ಷಿಸಬಹುದು ಎಂದು ಎಳೆಎಳೆಯಾಗಿ ಅಂಕಿ-ಅಂಶಗಳನ್ನು ನೀಡುತ್ತಾ ಪರಿಸರ ಮಾಲಿನ್ಯದ ನಿರ್ವಹಣೆಯ ಬಗ್ಗೆ ವಿವರಣೆ ನೀಡಿದರು.

- Advertisement -

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಚ.ಕಿತ್ತೂರು ತಾಲ್ಲೂಕು ಘಟಕದ ಅಧ್ಯಕ್ಷರಾದ ಡಾ. ಶೇಖರ್ ಹಲಸಗಿ ಅವರು ಮಾತನಾಡಿ ನಮ್ಮನ್ನು ನಾವು ಮರೆತರೆ ಸುಖವಿಲ್ಲ ಹಾಗೆ ಪರಿಸರ ಮರೆತರೆ ಉಳಿಗಾಲವಿಲ್ಲ ಎಂಬುದನ್ನು ಅರಿತು ಪರಿಸರ ಪ್ರಜ್ಞೆ ನಮ್ಮೆಲ್ಲರಲ್ಲೂ ಬರಬೇಕು. ಪ್ರಾಥಮಿಕ ಹಂತದಿಂದ ಪರಿಸರದ ಕಾಳಜಿ ಬಂದರೆ ನಾವು ಎಲ್ಲರಲ್ಲೂ ಆ ಜಾಗೃತಿ ಮೂಡಿಸಲು ಸಾಧ್ಯ. ಕಿತ್ತೂರು ತಾಲೂಕಿನ ಕಾದರವಳ್ಳಿಯ ಸರಕಾರಿ ಶಾಲೆಯಲ್ಲಿ ಮಕ್ಕಳ ಮತ್ತು ಶಿಕ್ಷಕರ ವಿಶೇಷ ಕಾಳಜಿಯಿಂದ ಮುನ್ನೂರಕ್ಕೂ ಹೆಚ್ಚು ಗಿಡಮರಗಳನ್ನು ಬೆಳೆದು ಹಸಿರು ಕ್ರಾಂತಿಯ ಕಲ್ಪನೆ ಮಕ್ಕಳಲ್ಲಿ ಮೂಡಿಸಲಾಗಿದೆ ಈ ರೀತಿಯ ಕಾರ್ಯಗಳು ನಡೆಯಲು ಎಲ್ಲರಲ್ಲೂ ಜಾಗೃತಿ ಬರಬೇಕಿದೆ ಎಂದು ತಮ್ಮಶಾಲೆಯ ಪರಿಸರ ಕಾಳಜಿಯ ಯಶೋಗಾಥೆಯನ್ನು ವಿವರಿಸಿದರು.

ಈ ಕಾರ್ಯಕ್ರಮದಲ್ಲಿ ಹಿರಿಯ ಸಾಹಿತಿಗಳಾದ ಬಸವರಾಜ ಗಾರ್ಗಿ, ಹೇಮಾ ಸೋನೊಳ್ಳಿ, ಎಂ.ಎಸ್. ಹೊಂಗಲ್,ಶಿವಾನಂದ ತಲ್ಲೂರ, ರಜನಿ ಜೀರಗ್ಯಾಳ, ಶಬಾನ ಅಣ್ಣಿಗೇರಿ, ಶೈಲಜಾ ಮಸೂತಿ, ವೈ. ಎಂ. ಯಾಕೊಳ್ಳಿ, ಪಾಂಡುರಂಗ ಎಲಿಗಾರ್, ಗುರುದೇವಿ ಹುಲೆಪ್ಪನವರಮಠ, ಶಿಕ್ಷಕಿಯರಾದ ಕಮಲಾಕ್ಷಿ ಭಾವಿಹಾಳ, ಶ್ರೀಶೈಲಾ ಗೋಕಾಕ್, ಜಿಪಿ ಪನ್ನೂರಿ, ಪತ್ರಕರ್ತರಾದ ಮುರುಗೇಶ್ ಶಿವಪೂಜಿ, ಬಸವರಾಜು, ಸುರೇಶ್ ಮರಲಿಂಗಣ್ಣವರ, ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳಾದ ಬಾಲರಾಜ್ ಭಜಂತ್ರಿ ಜಿಲ್ಲೆಯ ವಿವಿಧ ತಾಲೂಕು ಕಸಾಪ ಘಟಕಗಳ ಅಧ್ಯಕ್ಷರಾದ ಶ್ರೀಪಾದ ಕುಂಬಾರ್, ವಿಜಯ ಬಡಿಗೇರ್ ಮಹಾಂತೇಶ ಉಕ್ಕಲಿ, ಸಿದ್ದರಾಮ ದ್ಯಾಗ್ಯಾನಟ್ಟಿ, ವಿದ್ಯಾವತಿ ಜನವಾಡೆ, ಜಿಲ್ಲಾ ಕಾರ್ಯದರ್ಶಿಗಳಾದ ಮಹಾಂತೇಶ್ ಮೆಣಸಿನಕಾಯಿ , ಜ್ಯೋತಿ ಬದಾಮಿ, ಕೋಶಾಧ್ಯಕ್ಷರಾದ ರತ್ನಪ್ರಭಾ ಬೆಲ್ಲದ ಸೇರಿದಂತೆ ಅನೇಕ ಸಾಹಿತ್ಯ ಅಭಿಮಾನಿಗಳು ಭಾಗವಹಿಸಿದ್ದರು. ಕಾರ್ಯಕ್ರಮವನ್ನು ರಾಮದುರ್ಗ ತಾಲೂಕು ಕ.ಸಾ.ಪ ಅಧ್ಯಕ್ಷರಾದ ಪಾಂಡುರಂಗ ಜಟಗನ್ನವರ ತಾಂತ್ರಿಕವಾಗಿ ನಿರ್ವಹಿಸಿ ನಿರೂಪಿಸಿದರು. ಕೊನೆಯಲ್ಲಿ ಮಹಾಂತೇಶ ಮೆಣಸಿನಕಾಯಿ ವಂದಿಸಿದರು.

- Advertisement -

LEAVE A REPLY

Please enter your comment!
Please enter your name here

- Advertisement -

Latest News

ಮೂಡಲಗಿ ತಾಲೂಕಾ ಪತ್ರಕರ್ತರ ಸಂಘದ ಕಚೇರಿ ಉದ್ಘಾಟನೆ

ಮೂಡಲಗಿ - ಹಲವಾರು ಯುವ ಪತ್ರಕರ್ತರ ಉತ್ಸಾಹ ಹಾಗೂ ಕಾರ್ಯಶೀಲತೆಯ ಪ್ರತೀಕವಾಗಿ ರಚನೆಗೊಂಡ ಮೂಡಲಗಿ ತಾಲೂಕಾ ಪತ್ರಕರ್ತರ ಸಂಘದ ಕಚೇರಿಯನ್ನು ಅರಭಾವಿ ಶಾಸಕ ಬಾಲಚಂದ್ರ ಜಾರಕಿಹೊಳಿಯವರ...
- Advertisement -

More Articles Like This

- Advertisement -
close
error: Content is protected !!