spot_img
spot_img

ಧರ್ಮದಿಂದ ಮಾತ್ರ ಜಗತ್ತಿಗೆ ಶಾಂತಿ; ಒಪ್ಪತ್ತೇಶ್ವರ ಶ್ರೀಗಳು

Must Read

spot_img
- Advertisement -

ತಿಮ್ಮಾಪೂರ:- ಧರ್ಮ ಮಾನವನ ಅವಿಭಾಜ್ಯ ಅಂಗ. ಧರ್ಮ ಎಂದರೆ ಬದುಕಿನ ರೀತಿ, ಮಾನವ ಕುಲ ಸುಖದಿಂದ ಇರಬೇಕಾದರೆ ಧರ್ಮ ಬೇಕೇ ಬೇಕು. ಧರ್ಮದಿಂದ ಮಾತ್ರ ಜಗತ್ತಿಗೆ ಶಾಂತಿ ಲಭಿಸುತ್ತದೆ ಎಂದು ಗುಳೇದಗುಡ್ಡದ ಒಪ್ಪತ್ತೇಶ್ವರ ಶ್ರೀಗಳು ಅಭಿಪ್ರಾಯಪಟ್ಟರು.

ದಿ ೩೦ ರಂದು ಬೇವಿನಮಟ್ಟಿಯಿಂದ ಕೂಡಲ ಸಂಗಮದವರೆಗೆ ಸದ್ಭಾವನಾ ಪಾದಯಾತ್ರೆಯನ್ನು ಹಮ್ಮಿಕೊಳ್ಳಲಾಗಿತ್ತು. ಮಾರ್ಗ ಮಧ್ಯದಲ್ಲಿ ತಿಮ್ಮಾಪೂರಿನ ಭಕ್ತರು ಪೂಜ್ಯರನ್ನು ಸ್ವಾಗತಿಸುವ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದರು. ಒಪ್ಪತ್ತೇಶ್ವರ ಶ್ರೀಗಳು ಸಾನಿಧ್ಯವಹಿಸಿ ಮಾತನಾಡುತ್ತಿದ್ದರು .

ಅವರು ಮುಂದುವರಿದು ತಿಮ್ಮಾಪೂರಿನ ಜನ ಭಕ್ತಿವಂತರು ಆಧ್ಯಾತ್ಮಿಕತೆಯನ್ನು ಬದುಕಿನಲ್ಲಿ ರೂಢಿಸಿಕೊಡು ಬಂದಿದ್ದಾರೆ ಎಂದು ವಿವರಿಸಿದರು.

- Advertisement -

ಅಮೀನಗಡದ ಶಂಕರ ರಾಜೇಂದ್ರ ಶ್ರೀಗಳು ಆರ್ಶಿರ್ವಚನ ನೀಡಿ ಭಕ್ತಿಯಲ್ಲಿ ಶಕ್ತಿ ಇದೆ ಮಾನವ ಮಹಾಮಾನವನಾಗಲು, ಮನುಷ್ಯನ ಮನಸ್ಸು ಶುದ್ಧಿಗೊಳ್ಳಲು ಆಧ್ಯಾತ್ಮಿಕ ಜೀವನ ಅವಶ್ಯವಾಗಿದೆ ಎಂದು ಅಭಿಪ್ರಾಯ ಪಟ್ಟರು.

ಅಧ್ಯಕ್ಷತೆ ವಹಿಸಿದ ನಿವೃತ್ತ ಶಿಕ್ಷಕರಾದ ಬಸಯ್ಯನವರು ಹಿರೇಮಠ ಮಾತನಾಡಿ ಮಹಾತ್ಮರ ಹಾದಿಯಲ್ಲಿ ಸಾಗಿದರೆ ನಮ್ಮ ಜೀವನಕ್ಕೊಂದು ಅರ್ಥ ಬರುತ್ತದೆ. ಸುಂದರ ಬದುಕಿಗೆ ಪೂಜ್ಯರ ಮಾರ್ಗದರ್ಶನ ಅವಶ್ಯ. ಅವರ ಆಶಿರ್ವಾದ ನಮ್ಮೆಲ್ಲರ ಮೇಲಿದೆ ಎಂದರು.

ನಿವೃತ್ತ ಶಿಕ್ಷಕ ಸಾಹಿತಿ ಎಸ್. ಎಸ್. ಹಳ್ಳೂರ ಮಾತನಾಡಿ ಭಕ್ತಿಯಲ್ಲಿ ಶಕ್ತಿಯಿದೆ, ಅಧ್ಯಾತ್ಮ ಸಮಾಜದ ತಾಯಿ ಇದ್ದಂತೆ, ತಾಯಿ ತನ್ನ ಮಗು ಸರ್ವಶ್ರೇಷ್ಠ ವ್ಯಕ್ತಿಯಾಗಬೇಕೆಂದು ಬಯಸಿದಂತೆ ಅಧ್ಯಾತ್ಮವು ಈ ಸಮಾಜ ಸರ್ವಶ್ರೇಷ್ಟ ಸಮಾಜ ಆಗಬೇಕೆಂದು ಬಯಸುತ್ತದೆ. ರಾಮಾಯಣದ ಹನುಮಂತನ ಧೈರ್ಯ ಸಾಹಸಕ್ಕೆ ಆತನಲ್ಲಿರುವ ಭಕ್ತಿ ಕಾರಣ ಎಂದು ವಿವರಿಸಿದರು.

- Advertisement -

ಜೆಡಿಎಸ್ ಧುರೀಣ ಶಿವಪ್ರಸಾದ ಗದ್ದಿಯವರು ಮಾತನಾಡಿ ಪೂಜ್ಯರು ಪಾದಯಾತ್ರೆ ಕೈಗೊಂಡಿದ್ದು ನಮ್ಮೆಲ್ಲರ ಭಾಗ್ಯ. ಅವರು ನಡೆದ ನೆಲ ಪಾವನ ಕ್ಷೇತ್ರವಾಯಿತು ಎಂದು ಅಭಿಪ್ರಾಯಪಟ್ಟರು.

ಹಿರೇಮಠದ ಶಿವಸಂಗಮೇಶ್ವರ ದೇವರು, ಹುನಗುಂದದ ಗಚ್ಚಿನಮಠದ ಅಮರೇಶ್ವರ ದೇವರು, ಜಿಗೇರಿ ಹಿರೇಮಠದ ಗುರುಸಿದ್ಧ ಶಿವಾಚಾರ್ಯರು, ಪುರಗಿರಿಯ ಕೈಲಾಸಲಿಂಗ ಶಿವಾಚಾರ್ಯರು ವೀರಯ್ಯ ಸರಗಣಚಾರಿ ವೇದಿಕೆಯ ಮೇಲೆ ಉಪಸ್ಥಿತರಿದ್ದರು.

ರಸಪ್ರಶ್ನೆ ಸ್ಪರ್ಧೆಯಲ್ಲಿ ಬಾಗಲಕೋಟ ಜಿಲ್ಲೆಯಿಂದ ರಾಜ್ಯಮಟ್ಟಕ್ಕೆ ಆಯ್ಕೆಯಾದ ತಿಮ್ಮಾಪೂರಿನ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಸಹಶಿಕ್ಷಕಿ ಗೀತಾ ತಾರಿವಾಳ ಹಾಗೂ ಇನ್ನೊರ್ವ ಶಿಕ್ಷಕಿ ಶಾರದಾ ಹೂಲಗೇರಿ ಇವರಿಗೆ ಎಸ್. ಆರ್. ಕೆ. ಪ್ರತಿಷ್ಟಾನದಿಂದ ತಾಲೂಕಾ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ ಪಡೆದದ್ದಕ್ಕಾಗಿ ಸನ್ಮಾನಿಸಲಾಯಿತು.

ಭೀಮಪ್ಪ ಮಡಿವಾಳರ, ಕಾಂತೇಶ ದಾಸರ, ಹನುಮಂತ ತಳವಾರ, ಸಂತೋಷ ವಾಲಿಕಾರ, ಸಂಗನಗೌಡ ಹಾದಿಮನಿ, ಸವಿತಾ ಬಸವರಾಜ ಕೋಣೆ, ಪತ್ರಕರ್ತ ಗುರುಬಸಯ್ಯ ಹಿರೇಮಠ, ಇಬ್ರಾಹಿಂ ನಾಯಕ, ಸಿದ್ದಮ್ಮ ಚಲವಾದಿ ಮುಂತಾದವರನ್ನು ಸಮಾರಂಭದಲ್ಲಿ ಸನ್ಮಾನಿಸಲಾಯಿತು.

ವಚನ ಪ್ರಾರ್ಥನೆ :- ಗೀತಾ ತಾರಿವಾಳ, ಪ್ರಾರ್ಥನೆ :- ತಿಮ್ಮಾಪೂರ ಶಾಲೆಯ ವಿದ್ಯಾರ್ಥಿಗಳಿಂದ, ಬಾಬು ಕೆಂಚನಗೌಡರ, ಸಂಗಯ್ಯ ಹಿರೇಮಠ ಕಾರ್ಯಕ್ರಮ ನಿರೂಪಸಿದರು. ಈಶ್ವರ ನಾರಾಯನಗೌಡರ ವಂದನಾರ್ಪಣೆ ನೆರವೇರಿಸಿದರು. ವೇದಿಕೆಯ ಮೇಲಿರುವ ಎಲ್ಲ ಪೂಜ್ಯರಿಗೆ ಸಮಾರಂಭದಲ್ಲಿ ಸನ್ಮಾನಿಸಲಾಯಿತು.

- Advertisement -
- Advertisement -

Latest News

ಎಮ್ಮೆತಮ್ಮನ ಕಗ್ಗದ ತಾತ್ಪರ್ಯ 

  ಅವ ಹಿಂದು ಅವ ಜೈನ ಅವ ಬೌದ್ಧ ಅವ ಸಿಖ್ಖ ಅವ ಕ್ರೈಸ್ತ ಅವ ಮಹಮದೀಯನೆಂದು ದಯಮಾಡಿ ಕರೆಯದಿರು ಬೇರೆಯವರೆನ್ನದಿರು ಅವರು ನಮ್ಮವರೆನ್ನು - ಎಮ್ಮೆತಮ್ಮ ಶಬ್ಧಾರ್ಥ ಮಹಮದೀಯ‌ = ಮುಸಲ್ಮಾನ ತಾತ್ಪರ್ಯ ಜಗತ್ತಿನಲ್ಲಿ‌ ಹಿಂದು‌,...
- Advertisement -

More Articles Like This

- Advertisement -
close
error: Content is protected !!
Join WhatsApp Group