ಲಾಕ್ಡೌನ್ ಮಾಡುವುದರಿಂದ. ಕೊರೊನ ಕೇಸ್ ಇಳಿಮುಖವಾಗುತ್ತದೆ. ಮುಗಿದ ನಂತರ ಹೆಚ್ಚುತ್ತದೆ ಯಾಕೆ?ಅಂತರ ಕಾಪಾಡಿಕೊಂಡು, ಮೂಗು, ಮುಖ, ಬಾಯಿ ಮುಚ್ಚಿಕೊಂಡು ಜನರು ಹೊರಗೆ ತಮ್ಮ ಕೆಲಸ ತಾವು ಮಾಡಿಕೊಳ್ಳುವವರು ಭಾರತದಲ್ಲಿ ಕಡಿಮೆಯಾಗಿರುವುದು ಇದಕ್ಕೆ ಕಾರಣ.
ಇಲ್ಲಿ ಸ್ವತಂತ್ರ ವಾಗಿ ಎಲ್ಲೆಂದರಲ್ಲಿ ಉಗುಳುತ್ತಾ,ಹೊಗಳುತ್ತಾ,ಬೈಯುತ್ತಾ ತೆಗುಳುತ್ತಾ ಹೊರಗೆ ಓಡಾಡಿಕೊಂಡಿದ್ದರೆ ರೋಗ ಬೇಗ ಹರಡುತ್ತದೆ. ಅದೇ ಅಂತಹವರನ್ನು ಮನೆಯೊಳಗೆ ಕೂರಿಸಿದ್ದರೆ ರೋಗ ಮನೆಯೊಳಗಿದ್ದರೂ ಕಾಣಿಸುವುದಿಲ್ಲ. ಒಟ್ಟಿನಲ್ಲಿ
ರೋಗವಿರೋದು ಮಾನವನೊಳಗಿನ ನಕಾರಾತ್ಮಕ ಶಕ್ತಿಯಲ್ಲಿ. ಇದನ್ನು ಶಿಕ್ಷಣದಲ್ಲಿಯೇ ಸರಿಪಡಿಸಿದ್ದರೆ ಇಂದು ಆರೋಗ್ಯಕರ ಸಮಾಜವಿರುತ್ತಿತ್ತು.
ನಡೆದ ಮೇಲೆ ಬುದ್ದಿಬರೋದು. ಹಾಗೆ ನಮಗೀಗಲೂ ಬುದ್ದಿ ಬರದಿದ್ದರೆ ಕೊರೊನ ದಂತಹ ಮಹಾಮಾರಿಗಳನ್ನು ತಡೆಯುವುದು ಕಷ್ಟ. ಲಾಕ್ಡೌನ್ಸ ಮಯದಲ್ಲಿ ಸಾತ್ವಿಕ ಜ್ಞಾನ ಬೆಳೆಸಿದರೆ ಮಕ್ಕಳವರೆಗೆ ರೋಗ ಹರಡುವುದಿಲ್ಲ.
ಇದೊಂದು ವರ ಎಂದರೆ ಸರಿ. ಭಗವಂತನ ಕರುಣೆಯನ್ನು ಜ್ಞಾನದಿಂದ ಅರ್ಥ ಮಾಡಿಕೊಳ್ಳಲು ಸುಸಮಯ. ಮನೆಯೊಳಗೆ ಕೂರಿಸಿ ರಕ್ಷಣೆ ನೀಡಿರುವಾಗ ಅದಕ್ಕೆ ಪ್ರತಿಯಾಗಿ ನಾವು ಸಮಾಜಕ್ಕಾಗಲಿ, ದೇಶಕ್ಕಾಗಲಿ,ಪ್ರಕೃತಿಗಾಗಲಿ ಏನೂ ಕೊಡಲಾಗದಿದ್ದರೂ ನಮ್ಮೊಳಗೇ ಅಡಗಿರುವ ಪರಮಾತ್ಮನ ಕಡೆಗೆ ನಡೆಯೋ ಪ್ರಯತ್ನ ನಡೆಸಿದರೆ ಅದೇ ನಮ್ಮ ಭವಿಷ್ಯವನ್ನು ಉತ್ತಮವಾಗಿಸುತ್ತದೆ.
ಭಾರತೀಯರ ಆಧ್ಯಾತ್ಮ ಚಿಂತನೆಗೂ ವಿದೇಶಿಗಳ ಬೌತಿಕ ಚಿಂತನೆಗೂ ವ್ಯತ್ಯಾಸವಿದೆ. ವಿದೇಶಿಗರಿಗೆ ಭಾರತೀಯರ ಆಧ್ಯಾತ್ಮದ ಕಡೆ ಒಲವಿದ್ದರೂ ಭಾರತೀಯರಿಗೆ ಇಲ್ಲದೆ ವಿದೇಶಿಗರಂತೆ ಮೈ ಮರೆತರೆ ರೋಗ ಹೆಚ್ಚುತ್ತದೆ. ಇಲ್ಲಿ ಮನರಂಜನೆ ಬೇಕು.
ಆದರೆ ಅದರಿಂದಾಗಿ ಆತ್ಮವಂಚನೆ ಹೆಚ್ಚಾಗದಂತೆ ಎಚ್ಚರವಹಿಸಿ ಸಾತ್ವಿಕ ವಿಚಾರಗಳನ್ನು ಅರ್ಥ ಮಾಡಿಕೊಳ್ಳಲು ಮನೆಯೊಳಗಿದ್ದರೆ ಮಾತ್ರ ಸಾಧ್ಯ. ಆಧ್ಯಾತ್ಮದ ಪ್ರಕಾರ ಬಾಯಿ ಮುಚ್ಚಿಕೊಂಡು ತಮ್ಮ ಕೆಲಸವನ್ನು ಶ್ರದ್ದಾಭಕ್ತಿಯಿಂದ ಮಾಡುತ್ತಾ ಕೆಟ್ಟ ವಾಸನೆ ಅಥವಾ ಕೆಟ್ಟ ಆಸೆ ಆಕಾಂಕ್ಷೆಗಳನ್ನು ಬಿಟ್ಟು ಸ್ವತಂತ್ರ ಜೀವನ ನಡೆಸುವುದರಿಂದ ಮಾನವನ ಆರೋಗ್ಯ ಹೆಚ್ಚುತ್ತದೆ.
ಮೈಯನ್ನು ಶುದ್ದವಾಗಿಟ್ಟುಕೊಂಡು ಮನೆಯೊಳಗಿದ್ದು ಮನಸ್ಸನ್ನು ಹಾಳು ಮಾಡಿಕೊಂಡವರು ಹೊರಬಂದರೆ ಸರ್ಕಾರ ಏನು ಮಾಡಲು ಸಾಧ್ಯ? ಇದಕ್ಕೆಲ್ಲ ಕಾರಣವೆ ಮಧ್ಯವರ್ತಿಗಳ ಸ್ವಾರ್ಥ ಪೂರ್ಣ ಅರ್ಧಸತ್ಯದ ಪ್ರಚಾರ. ಮಾನವನಿಗೆ ಹೊರಗಿನ ಯಾವುದೇ ಸಹಕಾರ ವಿಷಯ ತಿಳಿಯದಿದ್ದರೆ ಅವನೊಳಗಿರುವ. ಆತ್ಮಶಕ್ತಿ ಹೆಚ್ಚುತ್ತದೆ.
ದೈವಸಾಕ್ಷಾತ್ಕಾರವಾಗುತ್ತದೆ ಎಂದಾಗ ಈಗ ಒಳಗೇ ಅಡಗಿರುವ ದೇವರನ್ನು ಕಾಣಲು ಕೊರೊನ ಅವಕಾಶ ನೀಡಿರುವುದನ್ನು ಎಷ್ಟು ಜನರು ತಿಳಿದು ತಮ್ಮ ಆತ್ಮರಕ್ಷಣೆಗಾಗಿ ಸಮಯವನ್ನು ಸದ್ಬಳಕೆ ಮಾಡಿಕೊಳ್ಳುವರೋ ಅಷ್ಟೇ ಬೇಗ ರೋಗದಿಂದ ಮುಕ್ತಿ ಸಿಗುತ್ತದೆ.
ಆಯಸ್ಸು ಇರುವಷ್ಟು ದಿನವಷ್ಟು ಜೀವ ಒಳಗಿರುತ್ತದೆ. ತೀರಿದ ಮೇಲೆ ಎಷ್ಟೇ ಪ್ರಯತ್ನಪಟ್ಟರೂ ಇರೋದಿಲ್ಲ. ಭೂಮಿಗೆ ಬಂದ ಜೀವಕ್ಕೆ ಅದರ ಮೂಲ ಸ್ಥಾನ ಸಿಕ್ಕ ಮೇಲೆ ಮುಕ್ತಿ. ಎಷ್ಟು ದೂರ ದೂರ ಹೊರಗೆ ಬರುವುದೋ ಅಷ್ಟೆ ಪರಮಾತ್ಮ ದೂರವಾಗುತ್ತಾನೆಂಬುದೆ ಮಹಾತ್ಮರುಗಳು ತಿಳಿಸಿದ ಸತ್ಯ.” ಅಲ್ಲಿರುವುದು ನಮ್ಮನೆ ಇಲ್ಲಿ ಬಂದೆ ಸುಮ್ಮನೆ” ಹೊರಗಿನ ದೊಡ್ಡ ಮನೆಗಳಿಗಿಂತ ದೇಹವನ್ನು ದೇಗುಲ
ಮಾಡಿಕೊಳ್ಳಲು ಆಧ್ಯಾತ್ಮ ಬೇಕು.
ಆಧ್ಯಾತ್ಮ ಸತ್ಯದ ಪರ ಇರಬೇಕು. ಅಸತ್ಯದಿಂದ ಧರ್ಮ ಉಳಿಯಲಾಗದು. ರಾಜಕೀಯದಲ್ಲಿ ಅಸತ್ಯ,ಅಧರ್ಮ,ಅನ್ಯಾಯ, ಭ್ರಷ್ಟಾಚಾರ ಹೆಚ್ಚಾದಂತೆ ಮಾನವನ ರೋಗವೂ ಬೆಳೆದು ರೋಗಗ್ರಸ್ತ ಸಮಾಜವಾಗುತ್ತದೆ.
ಸಮಾಜದಲ್ಲಿ ಆರೋಗ್ಯವಿದ್ದರೆ ಎಷ್ಟು ಚೆನ್ನಾಗಿರುತ್ತದೆ. ಭಾರತ ದೇಶ ಯೋಗಿಗಳ ದೇಶವಾಗಿ ಆರೋಗ್ಯದೆಡೆಗೆ ನಡೆದಿತ್ತು. ಈಗ ಯೋಗಿಗಳೂ ಭೋಗ ಜೀವನಕ್ಕೆ ಶರಣಾಗಿ ರೋಗ ಹರಡುತ್ತಿದೆ. ಇದನ್ನು ತಡೆಯಲು ಜ್ಞಾನದಿಂದ ಸಾಧ್ಯ.
ಸಾತ್ವಿಕ ಶಿಕ್ಷಣ, ಸಾತ್ವಿಕ ಆಹಾರ,ವಿಹಾರ. ಸ್ವಚ್ಚಭಾರತಕ್ಕೆ ಅಡಿಪಾಯವಾಗಿತ್ತು. ಈಗಿದು ಅರ್ಧಸತ್ಯದ ವ್ಯಾಪಾರಕ್ಕೆ ತಿರುಗಿ ವಿಜ್ಞಾನದೆಡೆಗೆ ಮಿತಿಮೀರಿ ಬೆಳೆದಿದೆ. ಅತಿಯಾದರೆ ಗತಿಗೇಡು ಎನ್ನುವುದು ಸತ್ಯವಲ್ಲವೆ? ಮಾನವ ಕಾರಣಮಾತ್ರದವನಷ್ಟೆ.ಅವನಲ್ಲಿ ಅಡಗಿರುವ ಶಕ್ತಿಯೇ ಎಲ್ಲದ್ದಕ್ಕೂ ಕಾರಣ.
ನಮ್ಮೊಳಗೇ ಇರುವ ಈ ದೇವಾಸುರರ ಗುಣಗಳನ್ನು ತಿಳಿದು ನಡೆಯುವುದಕ್ಕೆ ಮಹಾತ್ಮರಾಗಬೇಕು. ಅಂದರೆ ಆತ್ಮಾನುಸಾರ ನಡೆದರೆ ಉತ್ತಮ ಜೀವನ. ಇಲ್ಲಿ ಕೆಲವರು ಮನಸ್ಸನ್ನು ಆತ್ಮ ಎಂದರು. ಚಂಚಲ ಮನಸ್ಸನ್ನು ಹಿಡಿದಿಟ್ಟುಕೊಳ್ಳುವ ಶಕ್ತಿ ಕೇವಲ ಜ್ಞಾನಿಗಳಿಗೆ ಸಾಧ್ಯವಿದೆ.
ಶ್ರೀಮತಿ ಅರುಣ ಉದಯಭಾಸ್ಕರ, ಬೆಂಗಳೂರು