ಬೆಳಗಾವಿಯಲ್ಲಿ ಆಪ್ತ ಸಮಾಲೋಚನ ಹಾಗೂ ಉದ್ಯೋಗ ಮಾಹಿತಿ ಕೇಂದ್ರ ಆರಂಭ

Must Read

ಜೆಡಿಎಸ್ ಗೆ ಗೆಲುವು ಕುಮಾರಸ್ವಾಮಿಗೆ ಬೇಕಿಲ್ಲ, ಬಿಜೆಪಿ ಗೆಲ್ಲಿಸಲು ಆಸಕ್ತಿ ಹೊಂದಿದ್ದಾರೆ – ಎಸ್ ಎಂ ಪಾಟೀಲ

ಸಿಂದಗಿ: ಈ ಕ್ಷೇತ್ರದ ಅಭಿವೃದ್ಧಿಗೆ ದಿ.ಮನಗೂಳಿ ಅವರು ತಮ್ಮ ಆಯುಷ್ಯವನ್ನೆ ಮುಡಿಪಾಗಿಟ್ಟು ದುಡಿದು ಅಗಲಿ ಹೋಗಿದ್ದಾರೆ ಅವರ ಮಗನಿಗೆ ಕೂಲಿ ಸಿಗಬೇಕು ಆದರೆ ಜೆಡಿಎಸ್ ಪಕ್ಷದ...

ಕಾಂಗ್ರೆಸ್ ಸರ್ಕಾರದ ಕೆಲಸಗಳು ಅದರ ಗೆಲುವಿಗೆ ಕಾರಣವಾಗುತ್ತದೆ – ಸುಜಾತಾ ಕಳ್ಳಿಮನಿ

ಸಿಂದಗಿ: ಸಿದ್ದರಾಮಯ್ಯನವರು ಐದು ವರ್ಷದ ಅಧಿಕಾರದ ಅವಧಿಯಲ್ಲಿ ಈ ಕರುನಾಡಿಗೆ ಬಡವರ ಪರ, ರೈತರ ಪರ ಜಾರಿಗೆ ತಂದ ಯೋಜನೆಗಳು ಈ ಸಿಂದಗಿ ಉಪಚುನಾವಣೆಯಲ್ಲಿ ಕಾಂಗ್ರೆಸ್...

ಬಿಜೆಪಿ ಅಲೆಮಾರಿ ಜನಾಂಗಕ್ಕೆ ಸುಳ್ಳು ಹೇಳಿ ಮತ ಪಡೆಯುತ್ತಿದೆ – ಮೇಘರಾಜ್ ಆರೋಪ

ಸಿಂದಗಿ: ಬಿಜೆಪಿಯ ಸರ್ಕಾರ  ಅಧಿಕಾರಕ್ಕೆ ಬಂದು ಎರಡು ವರ್ಷವಾದರೂ  ಅಲೆಮಾರಿ, ಅರೆ ಅಲೆಮಾರಿ ಸಮುದಾಯದ ಆಶ್ರಯ ಮನೆಗಳನ್ನು  ಮಂಜೂರು ಮಾಡದೆ ಕೇವಲ ಕಾಗದ ಪತ್ರದಲ್ಲಿ ಮಂಜೂರು...

ದಿ.26 ರಂದು ಪ್ರೊಫೆಷನಲ್ ಸೋಶಿಯಲ್ ವರ್ಕ ಅಸೋಶಿಯೇಶನ್ (ರಿ) ಕರ್ನಾಟಕ ವತಿಯಿಂದ ಬೆಳಗಾವಿ ಕೇಂದ್ರ ಕಛೇರಿಯಲ್ಲಿ ನೂತನವಾಗಿ ಆಪ್ತ ಸಮಾಲೋಚನ ಕೇಂದ್ರ ಮತ್ತು ಉದ್ಯೋಗ ಮಾಹಿತಿ ಕೇಂದ್ರವನ್ನು ಉದ್ಘಾಟಿಸಲಾಯಿತು.

ದಿವ್ಯ ಸಾನ್ನಿಧ್ಯ ವಹಿಸಿ ಮಾತನಾಡಿದ ಶ್ರೀ ಬಸವ ಪ್ರಕಾಶ ಮಹಾಸ್ವಾಮಿಗಳು, ಬಸವ ಮಂಟಪ ಬೆಳಗಾವಿ ಇವರು, ಇತ್ತೀಚಿನ ದಿನಗಳಲ್ಲಿ ನಮ್ಮ ದೇಶದಲ್ಲಿ ನಿರುದ್ಯೋಗ ಸಮಸ್ಯೆ ಜಾಸ್ತಿಯಾಗಿದೆ, ಆದರಿಂದ ಈ ಅಸೊಶಿಯೇಶನ್ ಉದ್ದೇಶಗಳಾದ ಆಪ್ತ ಸಮಾಲೋಚನ ಕೇಂದ್ರ ಇವತ್ತಿನ ದಿನಗಳಲ್ಲಿ ಪ್ರತಿಯೊಬ್ಬ ವ್ಯಕ್ತಿಯಲ್ಲಿ ಹಣ, ಅಂಡಬರಕೆ ‌ಜಾಸ್ತಿ ಒತ್ತುಕೊಟ್ಟು ತಮ್ಮ ಕೌಟುಂಬಿಕವಾಗಿ ಅಥವಾ ಕುಟುಂಬಕ್ಕೆ ಸಮಯ ಇಡದೆ ಎಲ್ಲೋ ಕಲಹಕ್ಕೆ ನಾವೇ ಆಹ್ವಾನ ನೀಡುತ್ತಿದ್ದೇವೆ ಆದರಿಂದ ಎಲ್ಲರಿಗೂ ಆಪ್ತ ಸಮಾಲೋಚನ ಅವಶ್ಯಕವಾಗಿದೆ ಆ ನಿಟ್ಟಿನಲ್ಲಿ ಈ ಅಸೊಶಿಯೇಶನ್ ಕೆಲಸ ಮಾಡಲಿ ಜನ ಬದಲಾವಣೆ ಆಗಲಿ ಮಾನವಿಯತೆಯ ಮೌಲ್ಯಗಳನ್ನು ರೂಡಿಸಿಕೊಳ್ಳಲ್ಲಿ, ಜೊತೆಗೆ ಯುವ ಸಮುದಾಯಕ್ಕೆ ಉದ್ಯೋಗ ಕ್ಕೆ ಸಂಬಂಧಿಸಿದ ಮತ್ತು ವಿದ್ಯಾರ್ಹತೆ ಗೆ ಸಂಬಂಧಿಸಿದ ಮಾಹಿತಿ ನೀಡುತ್ತಿರುವುದು ಜೊತೆಗೆ ಉದ್ಯೋಗ ಮೇಳದ ಇವರ ಕಾರ್ಯಕ್ಕೆ ಶುಭವಾಗಲಿ ಎಂದು ಹಾರೈಸಿದರು.

- Advertisement -

ಉದ್ಘಾಟಕರು ಮಾತನಾಡಿ, ಈ ಅಸೊಶಿಯೇಶನ್ ಜೊತೆಗೆ ನಾವು ಕೆಲಸಮಾಡಲು ಉತ್ಸಾಹಕರಾಗಿದ್ದು ಇವರ ಈ ಹೊಸ ಹೆಜ್ಜೆಗೆ ಹರಸಿದರು.

ಮುಖ್ಯ ಅಥಿತಿಯಾದ ವಿಠ್ಠಲ ಅಸೋದೆ ಅವರು ಮಾತನಾಡಿ, ಇತ್ತೀಚಿನ ದಿನಗಳಲ್ಲಿ ಶಿಕ್ಷಣದಲ್ಲಿ ತನ್ನ ಪರಿಣಾಮಕಾರಿ, ಕೌಶಲ್ಯಗಳ ಕೊರತೆಯಿದೆ, ಕಂಪನಿಗೆ ಬೇಕಾದ ಕೌಶಲ್ಯಗಳು ಇಲ್ಲದೆ ಇದ್ದ ಕಾರಣ ನಿರುದ್ಯೋಗ ಸಮಸ್ಯೆ ಉಂಟಾಗಿದೆ. ಆದರಿಂದ ವಿದ್ಯಾರ್ಥಿಗಳು ಕೌಶಲ್ಯಗಳನ್ನು ರೂಡಿಸಿಕೊಳ್ಳಬೇಕು ಎಂದರು. ಯುವ ಸಮುದಾಯ ಪ್ರೀತಿ ಪ್ರೇಮಕ್ಕೆ ಜಾಸ್ತಿ ಒತ್ತು ನೀಡಿ ಅವರ ಭವಿಷ್ಯವನ್ನು ತಾವೇ ಹಾಳು ಮಾಡುತ್ತಿದ್ದಾರೆ ಆದರಿಂದ ಈ ಅಸೊಶಿಯೇಶನ್ ನಿಂದಾದರು ಅವರು ಭವಿಷ್ಯ ಸ್ವಲ್ಪ ಮಟ್ಟಿಗೆ ಬದಲಾವಣೆ ಆಗಲಿ ಎಂದು ಹೇಳಿದರು.

ಈ ಕಾರ್ಯಕ್ರಮ ಅಧ್ಯಕ್ಷತೆ ವಹಿಸಿದ್ದ ದೀಪಕ್ ಕೆ ಇವರು ಮಾತನಾಡಿ, ಇವತ್ತಿನ ಕಾಲಘಟ್ಟದಲ್ಲಿ ನಾವೆಲ್ಲರೂ ಸಂಘಟಕರಾಗಬೇಕಾಗಿದೆ, ನಮ್ಮ ಹಕ್ಕುಗಳನ್ನು ಪಡೆಯಲು ನಮ್ಮ ಹೋರಾಟ ನಡೆಯಬೇಕಾಗಿದೆ, ಆ ನಿಟ್ಟಿನಲ್ಲಿ ಸಮಾಜದ ನಮ್ಮ ಕೈಯಲ್ಲಿ ಸಾದ್ಯ ಆದಷ್ಟು ಬದಲಾವಣೆ ಮಾಡಬೇಕು ಎಂದರು.ಇದರ ಜೊತೆಗೆ‌ ಉದ್ಯೋಗದ ಬಗ್ಗೆ ನಮ್ಮ ಅಸೊಶಿಯೇಶನ್ ಮಾಹಿತಿ ನೀಡುತ್ತಿದ್ದ ಒಳ್ಳೆಯ ಉದ್ದೇಶ ಅವರ ಜೊತೆಗೆ ಸದಾ ನಾನು ಬೆನ್ನೆಲುಬಾಗಿ ನಿಂತು ಕೆಲಸಮಾಡುತ್ತೇನೆ, ಆಪ್ತ ಸಮಾಲೋಚನ ಕೇಂದ್ರವು ಒಳ್ಳೆಯ ರೀತಿಯಲ್ಲಿ ನಡೆಯಲಿ ಎಂದು ಹಾರೈಸುತ್ತಾ ಹಾರೈಸಿದರು.

ಈ ಸಂದರ್ಭದಲ್ಲಿ , ಶ್ರೀ ಅಶೋಕ ಕೂರಿ, ಎಮ್ ಎಮ್ ಗಡಗಲಿ, ಆರ್, ಎನ್ ಮೇತ್ರಿ, ಶಿವರಾಜ ಹೊಳೆಪ್ಪಗೋಳ, ಲಕ್ಷ್ಮಣ ಥರಕಾರ, ಆಕಾಶ ಬೇವಿನಕಟ್ಟಿ, ಲಗಮಾ ನಾಯಕ ಶಿವರಾಜ ಕಾಟಕರ, ಸುಪ್ರೀಯಾ, ಲಕ್ಷ್ಮೀ, ಆಶಾ, ಲಕ್ಷ್ಮೀ, ಉಮೇಶ ಹಾರುಗೋಪ್ಪ, ಇನ್ನಿತರೆ ಎಲ್ಲಾ ಸಮಾಜಕಾರ್ಯ ವಿದ್ಯಾರ್ಥಿಗಳು, ಸಹಮನಸ್ಸುಗಳು, ಉಪಸ್ಥಿತರಿದ್ದರು, ಗಂಗಾ ಬೆಳವಿ ನಿರೂಪಿಸಿ, ಕುತುಬು ವಂದಿಸಿದರು.

- Advertisement -
- Advertisement -

Latest News

ಜೆಡಿಎಸ್ ಗೆ ಗೆಲುವು ಕುಮಾರಸ್ವಾಮಿಗೆ ಬೇಕಿಲ್ಲ, ಬಿಜೆಪಿ ಗೆಲ್ಲಿಸಲು ಆಸಕ್ತಿ ಹೊಂದಿದ್ದಾರೆ – ಎಸ್ ಎಂ ಪಾಟೀಲ

ಸಿಂದಗಿ: ಈ ಕ್ಷೇತ್ರದ ಅಭಿವೃದ್ಧಿಗೆ ದಿ.ಮನಗೂಳಿ ಅವರು ತಮ್ಮ ಆಯುಷ್ಯವನ್ನೆ ಮುಡಿಪಾಗಿಟ್ಟು ದುಡಿದು ಅಗಲಿ ಹೋಗಿದ್ದಾರೆ ಅವರ ಮಗನಿಗೆ ಕೂಲಿ ಸಿಗಬೇಕು ಆದರೆ ಜೆಡಿಎಸ್ ಪಕ್ಷದ...
- Advertisement -

More Articles Like This

- Advertisement -
close
error: Content is protected !!