Homeಸುದ್ದಿಗಳುಅಮೀನಗಡ ಪ್ರಾಥಮಿಕ ಶಾಲೆ ಎರಡರಲ್ಲಿ ಪ್ರಾರಂಭೋತ್ಸವ

ಅಮೀನಗಡ ಪ್ರಾಥಮಿಕ ಶಾಲೆ ಎರಡರಲ್ಲಿ ಪ್ರಾರಂಭೋತ್ಸವ

ಬಾಗಲಕೋಟೆ : ಸರ್ಕಾರಿ ಶಾಲೆಗಳಲ್ಲಿ ಗುಣಮಟ್ಟದ ಶಿಕ್ಷಣ ಜೊತೆಗೆ ವ್ಯಕ್ತಿತ್ವ ವಿಕಸನವಾಗಿ ಮಗುವಿ‌ನ ಸರ್ವಾಂಗೀಣ ಅಭಿವೃದ್ಧಿ ಸಾಧ್ಯ ಎಂದು ಪಟ್ಟಣ ಪಂಚಾಯತ ಸದಸ್ಯ ರಮೇಶ ಮುರಾಳ ಹೇಳಿದರು.

ಜಿಲ್ಲೆಯ ಹುನಗುಂದ ತಾಲೂಕಿನ ಅಮಿನಗಡ ಪಟ್ಟಣದ ಪಿ.ಎಂ.ಶ್ರೀ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ನಂ2 ಶಾಲೆಯಲ್ಲಿ ನಡೆದ 2025-26 ನೇ ಸಾಲಿನ ಶಾಲಾ ಪ್ರಾರಂಭೋತ್ಸವ ಹಾಗೂ ಉಚಿತ ಪಠ್ಯಪುಸ್ತಕ ವಿತರಿಸಿ ಮಾತನಾಡಿದ ಅವರು, ಸರ್ಕಾರ ಶಾಲಾ ಮಕ್ಕಳಿಗೆ ಉಚಿತ ಸಮವಸ್ತ್ರ, ಶೂ ಸಾಕ್ಸ್ , ಮೊಟ್ಟೆ, ಬಾಳೆಹಣ್ಣು ಪೌಷ್ಟಿಕಾಹಾರ ನೀಡುವುದರ ಜೊತೆಗೆ ಗುಣಾತ್ಮಕ ಶಿಕ್ಷಣ ಸರ್ಕಾರಿ ಶಾಲೆಗಳಲ್ಲಿ ಸಿಗುತ್ತಿದ್ದು, ಪಾಲಕರು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದರು.

ಎಸ್.ಡಿ.ಎಂ.ಸಿ ಅಧ್ಯಕ್ಷ ಮಹೇಶ ಸಿಂಹಾಸನ ಮಾತನಾಡಿ, ಈ ಶೈಕ್ಷಣಿಕ ವರ್ಷದಲ್ಲಿ ಎಲ್.ಕೆ.ಜಿ, ಯು.ಕೆ.ಜಿ ತರಗತಿ ಆರಂಭವಾಗಿದ್ದು , ಪಿ.ಎಂ.ಶ್ರೀ ಯೋಜನೆಯಲ್ಲಿ ನಮ್ಮ ಶಾಲೆ ಆಯ್ಕೆಯಾಗಿದ್ದು , ಗುಣಾತ್ಮಕ ಶಿಕ್ಷಣದ ಜೊತೆಗೆ ಭೌತಿಕವಾಗಿ ಅಭಿವೃದ್ಧಿಯಾಗುತ್ತಿದೆ ಪಟ್ಟಣ ಜನತೆ ಇದರ ಉಪಯೋಗ ಪಡೆದುಕೊಳ್ಳಬೇಕು ಎಂದರು.

ಸಮಾಜ ಸೇವಕ ಡಿ.ಪಿ.ಅತ್ತಾರ, ಮಹಾಂತೇಶ ಕಲ್ಲಕುಟಗರ , ರೇಷ್ಮಾ ಬೇಪಾರಿ, ಪ್ರಕಾಶ ಐಹೊಳೆ, ಮುಖ್ಯೋಪಾಧ್ಯಾಯ ಎಂ.ಎಸ್ ಹರಗಬಲ್ಲ, ಶಿಕ್ಷಕರಾದ ಆರ್.ಎಂ.ಎಮ್ಮಿ, ಬಿ.ಬಿ.ಭಾಪ್ರಿ, ಎಸ್.ಎಸ್.ಲಮಾಣಿ, ಐ.ಬಿ.ಭಾಪುರೆ, ಮಲ್ಲಿಕಾರ್ಜುನ. ಸಜ್ಜನ. ಶಾರದಾ ಕುಶಾಲಕರ ಇದ್ದರು.
ವಿದ್ಯಾರ್ಥಿಗಳಿಗೆ ಪುಷ್ಟವೃಷ್ಠಿ, ಸಿಹಿ ತಿಂಡಿ ನೀಡುವುದರ ಮೂಲಕ ಶಾಲೆಗೆ ಸ್ವಾಗತಿಸಲಾಯಿತು.

RELATED ARTICLES

Most Popular

error: Content is protected !!
Join WhatsApp Group