ಬೀದರ – ಅಂಬೇಡ್ಕರ್ ಮೂರ್ತಿಯನ್ನು ಸ್ಥಳಾಂತರಕ್ಕಾಗಿ ತೆರವುಗೊಳಿಸಲು ಮುಂದಾದ ಅಧಿಕಾರಿಗಳಿಗೆ ತೀವ್ರ ವಿರೋಧ ವ್ಯಕ್ತಪಡಿಸಿ ಬೀದರ ಜಿಲ್ಲೆಯ ಕಂಠಾಣ ಗ್ರಾಮಸ್ಥರು ಅಧಿಕಾರಿಗಳನ್ನು ತಡೆದ ಘಟನೆ ನಡೆದಿದೆ.
ಸರ್ವೋಚ್ಛ ನ್ಯಾಯಾಲಯದ ಆದೇಶದ ಪ್ರತಿ ತೋರಿಸಿ ಜಿಲ್ಲಾಡಳಿತವು ಕಳೆದ ವಾರದಿಂದ ಜಿಲ್ಲೆಯ ರಸ್ತೆಯಲ್ಲಿ ನಿರ್ಮಿಸಲಾಗಿದ್ದ ಮಹಾತ್ಮ ಪುರುಷರ ಮೂರ್ತಿಗಳನ್ನು ತೆರವು ಗೊಳಿಸುತ್ತ ಇಂದು ಅಧಿಕಾರಿಗಳು ಕಂಠಾಣ ಗ್ರಾಮಕ್ಕೆ ಭೇಟಿ ನೀಡಿ ಗ್ರಾಮದ ಮುಖ್ಯರಸ್ತೆಯ ಮಧ್ಯದಲ್ಲಿ ಇರುವ ಅಂಬೇಡ್ಕರ್ ಮೂರ್ತಿ ತೆರವುಗೊಳಿಸಲು ಮುಂದಾದಾಗ ಸರ್ವಜನಿಕರು ಅಧಿಕಾರಿಗಳನ್ನು ತರಾಟೆಗೆ ತೆಗೆದು ಕೊಂಡರು.
ಸುಪ್ರೀಮ್ ಕೋರ್ಟ್ ಆದೇಶ ಇರುವದು ಎಲ್ಲಾ ಕಡೆಗೆ ಅದನ್ನು ಕೇವಲ ಗ್ರಾಮೀಣ ಪ್ರದೇಶಗಳ ಮೂರ್ತಿಗಳಿಗೆ ಮಾತ್ರ ಅಲ್ಲ ಮೊದಲು ಜಿಲ್ಲಾ ಕೇಂದ್ರದಲ್ಲಿ ಬರುವ ಮಹಾತ್ಮರ ಮೂರ್ತಿಗಳನ್ನು ತೆರವುಗೊಳಿಸಿ ನಂತರ ಗ್ರಾಮೀಣ ಭಾಗದ ಕಡೆ ಬನ್ನಿ ನಾವೇ ಸಹಕರಿಸುತ್ತೇವೆ. ನೀವು ಜೆಸಿಬಿ ತಂದು ತೆರವುಗೊಳಿಸುವ ಅವಶ್ಯಕತೆಯಿಲ್ಲ ಒಂದುವೇಳೆ ತಾವು ತಮ್ಮ ದರ್ಪವನ್ನು ಮುಂದುವರಿಸುವದಾದರೆ ಇಲ್ಲಿ ರಕ್ತದ ಕಾಲುವೆ ಹರಿಯುತ್ತದೆ ಎಂದು ಗ್ರಾಮಸ್ಥರು ಅಧಿಕಾರಿಗಳನ್ನು ಎಚ್ಚರಿಸಿದರು.
ಸ್ಥಳಿಯರ ಈ ವಿರೋಧದಿಂದಾಗಿ ಮೂರ್ತಿಯನ್ನು ತೆರವುಗಳಿಸಲು ಬಂದಿದ್ದ ಅಧಿಕಾರಗಳು ಸ್ಥಳದಿಂದ ಕಾಲು ಕಿತ್ತರು.
ವರದಿ: ನಂದಕುಮಾರ ಕರಂಜೆ
ಟೈಮ್ಸ್ ಆಫ್ ಕರ್ನಾಟಕ, ಬೀದರ