ಪ್ರತಿ ಟನ್‌ಗೆ 3,300 ರೂ. ನಿಗದಿಪಡಿಸಿದ ಅಧಿಕೃತ ಆದೇಶ ಪ್ರತಿ ರೈತ ಮುಖಂಡರಿಗೆ ನೀಡಿದ ಸಚಿವರು

Must Read

ಸರ್ಕಾರದಿಂದ ಕಬ್ಬು ಬೆಳೆಗಾರರಿಗೆ ಸಿಹಿ ಸುದ್ಧಿ 

ಮೂಡಲಗಿ : ಕಬ್ಬಿಗೆ ಪ್ರತಿ ಟನ್‌ಗೆ 3,300 ರೂ.ದರ ನಿಗದಿಪಡಿಸಿದ ರಾಜ್ಯ ಸರ್ಕಾರದ ಅಧಿಕೃತ ಆದೇಶದ ಪ್ರತಿಯನ್ನು ಸಕ್ಕರೆ ಸಚಿವರಾದ ಶಿವಾನಂದ ಪಾಟೀಲ್‌ ಅವರು ಮುಗಳಖೋಡ-ಜಿಡಗಾ ಮಠದ ಪೀಠಾಧಿಪತಿಗಳಾದ ಶ್ರೀ ಮುರುಘರಾಜೇಂದ್ರ ಶ್ರೀಗಳ ,ಹಾಗೂ ರೈತ ಮುಖಂಡರ ಕೈಗೆ ಹಸ್ತಾಂತರಿಸಿದರು.

ಸಕ್ಕರೆ ಸಚಿವ ಶಿವಾನಂದ ಪಾಟಿಲ ಅವರು ಮಾತನಾಡಿ ನಿನ್ನೆ ಬೆಂಗಳೂರನಲ್ಲಿ ನಡೆದ ಕಾರ್ಖಾನೆಗಳ ಮಾಲೀಕರು, ರೈತರ ಜೊತೆ ಸಿಎಂ ಸಿದ್ದರಾಮಯ್ಯ ಸಭೆ ನಡೆಸಿದ್ದರು. ಹೆಚ್ಚುವರಿಯಾಗಿ 100 ರೂಪಾಯಿ ರೈತರಿಗೆ ನೀಡಲು ಸಭೆಯಲ್ಲಿ ನಿರ್ಣಯ ಆಗಿತ್ತು. 50 ರೂ. ಮಾಲೀಕರು ಮತ್ತು 50 ರೂ. ಸರ್ಕಾರ ನೀಡುವಂತೆ ಆಗಿದ್ದ ನಿರ್ಣಯಕ್ಕೆ ಸರ್ಕಾರ ಆದೇಶ ನೀಡಿದೆ, ಎಲ್ಲ ಕಾರ್ಖಾನೆಗಳಲ್ಲಿ ಡಿಜಿಟಲ್ ತೂಕದ ಯಂತ್ರ ಬಳಸಬೇಕು ತೂಕದಲ್ಲಿ ವ್ಯತ್ಯಾಸ ಅವ್ಯವಹಾರ ಕಂಡು ಬಂದರೆ ನಮ್ಮ ಗಮನಕ್ಕೆ ತಂದರೆ ಕಾನೂನು ಕ್ರಮ ಕೈಗೊಳ್ಳುತ್ತೇವೆ, ಕಬ್ಬು ಕಟಾವುದಾರರ ಬಾಕಿ ಇರುವ ರೂ. 114 ಹಣವನ್ನು ನೀಡುವಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ಎಂದು ಹೇಳಿದರು.

ಹಿನ್ನೆಲೆಯಲ್ಲಿ ಸಕ್ಕರೆ ಸಚಿವರಾದ ಶಿವಾನಂದ ಪಾಟೀಲ ಅವರು ಗುರ್ಲಾಪುರಕ್ಕೆ ಆಗಮಿಸಿ ಶ್ರೀಗಳ ಸಮ್ಮುಖದಲ್ಲಿ ರೈತರ ಕಬ್ಬಿನ ಬೆಲೆ ಆದೇಶದ ಪ್ರತಿಯನ್ನು ನೀಡುವ ಮೂಲಕ ಕಬ್ಬು ಬೆಳೆಗಾರರಿಗೆ ಸಿಹಿ ಸುದ್ಧಿ ನೀಡಿದರು.

ಈ ವೇಳೆ ಗುರ್ಲಾಪುರ ವೃತ್ತದಲ್ಲಿ ರೈತ ಬಾಂಧವರು ಸಿಹಿ ಹಂಚಿ ಸಂಭ್ರಮಿಸಿದರು. ಮುಗಳಖೋಡ-ಜಿಡಗಾ ಮಠದ ಪೀಠಾಧಿಪತಿಗಳಾದ ಶ್ರೀ ಮುರುಘರಾಜೇಂದ್ರ ಸ್ವಾಮೀಜಿಗಳು, ಮಾತನಾಡಿ ರೈತರ ಹೋರಾಟಕ್ಕೆ ತೃಪ್ತಿ ತಂದಿದೆ ದೇಶಕ್ಕೆ ಅನ್ನ ಹಾಕುವ ಅನ್ನದಾತರು ಸುಖವಾಗಿದ್ದಾರೆ ದೇಶಕ್ಕೆ ಒಳ್ಳೆಯದು ಎಂದು ಹೇಳಿದರು.

ಶಶಿಕಾಂತ್‌ ಪಡಸಲಗಿ ಗುರೂಜಿ, ಜಿಲ್ಲಾಧಿಕಾರಿ ಮೊಹಮ್ಮದ ರೋಷನ್‌, ಎಸ್ಪಿ ಭೀಮಾಶಂಕರ್‌ ಗುಳೇದ್‌, ರೈತ ಮುಖಂಡ ಚೂನಪ್ಪಾ ಪೂಜಾರಿ, ಮಾತನಾಡಿ ಗುರ್ಲಾಪುರದಲ್ಲಿ ನಡೆದ ರೈತ ಚಳವಳಿ ಇತಿಹಾಸದಲ್ಲಿ ಬರೆದು ಇಡುವ ಹಾಗಾಗಿದೆ ರೈತರು ಯಾವುದೆ ಅಹಿತಕರ ಘಟನೆ ನಡೆಯದಂತೆ ಮುನ್ನೆಚ್ಚರಿಕೆ ಕ್ರಮವಾಗಿ ಗಾಂಧಿಜೀ ತತ್ವದ ಮೇಲೆ ಎಲ್ಲರೂ ಹೋರಾಟ ಮಾಡಿದ್ದಕ್ಕೆ ಧನ್ಯವಾದಗಳು ಎಂದರು.

ಈ ಸಮಯದಲ್ಲಿ ಶಾಂತಕುಮಾರ ಕುರುಬರ, ಅಶೋಕ ದಳವಾಯಿ, ತಹಶೀಲ್ದಾರ್ ಶ್ರೀಶೈಲ ಗುಡಮೆ, ಲಕ್ಕಣ್ಣ ಸವಸುದ್ಧಿ, ಸಿಪಿಐ ಶ್ರೀಶೈಲ ಬ್ಯಾಕುಡ, ಶಿವಶರಣ ಅವಜಿ, ಪಿ ಎಸ್ ಐ ರಾಜು ಪೂಜೇರಿ, ಕೆಂಪಣ್ಣ ಅಂಗಡಿ, ಶ್ರಿಶೈಲ ಅಂಗಡಿ ಹಾಗೂ ರೈತ ಬಾಂಧವರು ಇದ್ದರು.

Latest News

ಬಾಲಿವುಡ್ ಬೆಡಗಿಯಾಗಿ ಮೆರೆದ ಕನ್ನಡದ ಹುಡುಗಿ ಶಾಂತಾ ಹುಬ್ಳಿಕರ

ಮಹಾರಾಷ್ಟ್ರ ಮತ್ತು ಭಾರತೀಯ ಚಿತ್ರ ರಂಗಕ್ಕೆ ಕನ್ನಡದ ಕೊಡುಗೆ ಅಪಾರ. ಅಮೀರ್ ಬಾಯಿ ಕರ್ನಾಟಕಿ ಗುರು ದತ್ತ ಶ್ಯಾಮ ಬೆನಗಲ್ ಗಿರೀಶ್ ಕಾರ್ನಾಡ ವಿ ಶಾಂತಾರಾಮ...

More Articles Like This

error: Content is protected !!
Join WhatsApp Group