spot_img
spot_img

ಬಣಜಿಗ ಸಮಾಜದ ಸದೃಢಗೋಳಿಸುವುದಕ್ಕಾಗಿ ಸಂಘಟನೆ ಅವಶ್ಯ

Must Read

spot_img

ಮೂಡಲಗಿ: ‘ಬಣಜಿಗ ಸಮಾಜವನ್ನು ಶೈಕ್ಷಣಿಕ, ಸಾಮಾಜಿಕ, ಆರ್ಥಿಕವಾಗಿ ಸದೃಢಗೊಳಿಸುವುದಕ್ಕೆ ಸಮಾಜದ ಸಂಘಟನೆ ಮತ್ತು ಒಗ್ಗಟ್ಟು ಅವಶ್ಯವಿದೆ’ ಎಂದು ಕರ್ನಾಟಕ ರಾಜ್ಯ ಬಣಜಿಗ ಸಮಾಜದ ಕ್ಷೇಮಾಭಿವೃದ್ಧಿ ಸಂಘದ ರಾಜ್ಯಾಧ್ಯಕ್ಷ ಅಂದಪ್ಪ ಜವಳಿ ಹೇಳಿದರು.

ಕರ್ನಾಟಕ ರಾಜ್ಯ ಬಣಜಿಗ ಸಮಾಜದ ಕ್ಷೇಮಾಭಿವೃದ್ಧಿ ಸಂಘದ ಮೂಡಲಗಿ ಘಟಕದ 14ನೇ ವಾರ್ಷಿಕೋತ್ಸವ ಹಾಗೂ ಪ್ರತಿಭಾ ಪುರಸ್ಕಾರ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದ ಅವರು ಬಣಜಿಗ ಸಮಾಜದ ಸಂಘಟನೆಗಳಿಂದ ಸಮಾಜದಲ್ಲಿರುವ ಬಡ ಮತ್ತು ಕಷ್ಟದಲ್ಲಿರುವ ಜನರನ್ನು ಮೇಲೆತ್ತುವ ಕಾರ್ಯವಾಗಬೇಕು ಮತ್ತು ಸಮಾಜವನ್ನು ಪುನ:ಶ್ಚೇತನಗೊಳಿಸಬೇಕಾಗಿದೆ ಎಂದರು.ರಾಜ್ಯ ಬಣಜಿಗ ಸಮಾಜ ಸಂಘಟನೆಯಿಂದ ವಿದ್ಯಾನಿಧಿ ಸ್ಥಾಪಿಸುವ ಮೂಲಕ ಸಮಾಜದ ಬಡ ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿಗೆ ಆರ್ಥಿಕ ಸಹಾಯ, ವಿವಿಧ ಸ್ಪರ್ಧಾತ್ಮಕ ಪರೀಕ್ಷೆಗಳ ತರಬೇತಿ, ವಸತಿ ನಿಲಯ ಮತ್ತು ತಾಲ್ಲೂಕಿಗೊಂದು ಬಣಜಿಗ ಭವನ ನಿರ್ಮಾಣ ಮಾಡುವ ಉದ್ದೇಶವಿದೆ ಎಂದರು.

ಬಣಜಿಗ ಸಮಾಜಕ್ಕೆ ಈಗಾಗಲೇ ಸರ್ಕಾರವು ಶಿಕ್ಷಣಕ್ಕಾಗಿ 2ಎ ಮೀಸಲಾತಿ ಹಾಗೂ ನೌಕರಿ ಪಡೆಯಲು 3ಎ ಸೌಲಭ್ಯವನ್ನು ಕಲ್ಪಿಸಿಕೊಟ್ಟಿದೆ. ಸಮಾಜದ ಜನರು ಈ ಸೌಲಭ್ಯವನ್ನು ಪಡೆದುಕೊಂಡು ಶೈಕ್ಷಣಿಕವಾಗಿ ಮುಂದೆ ಬರಬೇಕು. ಮೂಡಲಗಿ ಬಣಜಿಗ ಸಂಘವು ಉತ್ತಮವಾದ ಸಂಘಟನೆ ಹೊಂದಿದ್ದು, ಹಲವಾರು ಸಮಾಜ ಮೆಚ್ಚುವ ಕಾರ್ಯಗಳನ್ನು ಮಾಡುತ್ತಿರುವುದು ಶ್ಲಾಘನೀಯವಾಗಿದೆ ಎಂದರು.

ಬಣಜಿಗ ಸಮಾಜದ ಜಿಲ್ಲಾಧ್ಯಕ್ಷ ಮಲ್ಲಿಕಾರ್ಜುನ ಕನಶೆಟ್ಟಿ ಮಾತನಾಡಿ ‘ಬಣಜಿಗ ಸಮಾಜವು ಶಿಕ್ಷಣ, ಸಹಕಾರ, ಮಠಮಾನ್ಯಗಳ ಸ್ಥಾಪನೆ ಸೇರಿದಂತೆ ನಾಡಿನ ಪ್ರಗತಿಯಲ್ಲಿ ಬಣಜಿಗ ಸಮಾಜದ ಪಾತ್ರವು ಪ್ರಮುಖವಾಗಿದೆ ಎಂದರು.

ಮುಖ್ಯ ಅತಿಥಿ ಸರ್ವೋತ್ತಮ ಜಾರಕಿಹೊಳಿ ಹಾಗೂ ಸತೀಶ ಈರಣ್ಣ ಕಡಾಡಿ ಅವರು ಮಾತನಾಡಿ ಸುಸಂಸ್ಕøತವಾದ ಬಣಜಿಗ ಸಮಾಜದ ಜನರು ಎಲ್ಲ ಕ್ಷೇತ್ರಗಳಲ್ಲಿ ಗುರುತಿಸಿಕೊಂಡು ಸಮಾಜವನ್ನು ಕಟ್ಟುವ ಕೆಲಸವನ್ನು ಮಾಡಿದ್ದಾರೆ ಎಂದರು.

ಸಾನ್ನಿಧ್ಯ ವಹಿಸಿದ್ದ ದತ್ತಾತ್ರೇಯಬೋಧ ಸ್ವಾಮೀಜಿ ಹಾಗೂ ಸುಣಧೋಳಿಯ ಶಿವಾನಂದ ಸ್ವಾಮೀಜಿ ಮಾತನಾಡಿ, ವ್ಯಕ್ತಿಗಿಂತ ಸಂಘ ಮುಖ್ಯವಾಗಿದೆ. ಅಧಿಕಾರ, ಅಹಂಕಾರಗಳನ್ನು ಬದಿಗಿಟ್ಟು ಕಾರ್ಯಮಾಡಿದರೆ ಮಾತ್ರ ಸಮಾಜಗಳ ಸಂಘಟನೆಗಳು ಬೆಳೆಯುತ್ತವೆ ಎಂದರು.

ಬಣಜಿಗ ಸಮಾಜದ ಮೂಡಲಗಿ ಘಟಕದ ಅಧ್ಯಕ್ಷ ಶಿವಪ್ಪ ಭುಜನ್ನವರ ಅಧ್ಯಕ್ಷತೆವಹಿಸಿದ್ದರು.

ಸಮಾರಂಭದಲ್ಲಿ ಬಣಜಿಗ ಸಮಾಜದ 75 ವಯಸ್ಸು ದಾಟಿದ ಹಿರಿಯ ಜೀವಿಗಳಿಗೆ, ಸೇವೆಯಿಂದ ನಿವೃತ್ತರಾದವರಿಗೆ, ಎಸ್‍ಎಸ್‍ಎಲ್‍ಸಿ ಮತ್ತು ದ್ವಿತೀಯ ಪಿಯುಸಿಯಲ್ಲಿ ಉತ್ತಮ ಅಂಕ ಪಡೆದು ಉತ್ತೀರ್ಣರಾದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಹಾಗೂ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿರುವ ಮಹನೀಯರನ್ನು ಸನ್ಮಾನಿಸಿ ಗೌರವಿಸಿದರು.

ವೇದಿಕೆಯಲ್ಲಿ ಶಾಸಕರ ಆಪ್ತ ಸಹಾಯಕ ನಾಗಪ್ಪ ಶೇಖರಗೋಳ, ಮಹಿಳಾ ಘಟಕದ ಅಧ್ಯಕ್ಷೆ ಮಹಾದೇವಿ ತಾಂವಶಿ, ರಾಜ್ಯ ಸಂಘದ ಕಾರ್ಯಕಾರಿಣಿ ಸದಸ್ಯ ಸುರೇಶಬಾಬು ಜತ್ತಿ ವೇದಿಕೆಯಲ್ಲಿದ್ದರು.

ಸಂಘದ ಪ್ರಧಾನ ಕಾರ್ಯದರ್ಶಿ ಚಿದಾನಂದ ಶೆಟ್ಟರ ಪ್ರಾಸ್ತಾವಿಕ ಮಾತನಾಡಿದರು.

ಮೂಡಲಗಿ ಘಟಕದ ಉಪಾಧ್ಯಕ್ಷ ಪ್ರಕಾಶ ಪುಠಾಣಿ, ಖಜಾಂಚಿ ಶಿವಾನಂದ ಗಾಡವಿ, ವೀರಪಾಕ್ಷ ಗಾಡವಿ, ಚನ್ನವೀರಪ್ಪ ಅಂಗಡಿ, ಸಂತೋಷ ಅಂಗಡಿ, ವಿಶ್ವನಾಥ ಶೀಲವಂತ, ವಿರೇಶ ದುಗ್ಗಾಣಿ, ಈಶ್ವರ ಗೋಲಶೆಟ್ಟಿ, ಸುಪ್ರೀತ ತಾಂವಶಿ, ಮುರುಘೇಂದ್ರ ಜಕಾತಿ, ಸುಭಾಷ ಅವಟಿ ಇದ್ದರು.

ಈರಣ್ಣ ಕೊಣ್ಣೂರ ಸ್ವಾಗತಿಸಿದರು, ಶಿವಬಸು ಶೆಟ್ಟರ, ಬಾಲಶೇಖರ ಬಂದಿ ನಿರೂಪಿಸಿದರು.

- Advertisement -
- Advertisement -

Latest News

ಪಂಚಮಸಾಲಿ ಸಮಾಜದ ಹೋರಾಟಕ್ಕೆ ಬೆಂಬಲ ಘೋಷಿಸಿದ ಶಾಸಕ ಹಾಗೂ ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ

ಕೂಡಲ ಸಂಗಮ ಜಯ ಮೃತ್ಯುಂಜಯ ಸ್ವಾಮಿಗಳ ಜೊತೆ ದೂರವಾಣಿ ಮೂಲಕ ಮಾತನಾಡಿ ಹೋರಾಟಕ್ಕೆ ಸಹಕಾರ ಘೋಷಣೆ ಮೂಡಲಗಿ: ಕೂಡಲಸಂಗಮ ಜಯ ಮೃತ್ಯುಂಜಯ ಸ್ವಾಮಿಗಳ ನೇತೃತ್ವದಲ್ಲಿ ಪಂಚಮಸಾಲಿ ಸಮಾಜಕ್ಕೆ...
- Advertisement -

More Articles Like This

- Advertisement -
close
error: Content is protected !!