spot_img
spot_img

ರಾಷ್ಟ್ರೀಯ ಪುರುಷ ಹಾಗೂ ಮಹಿಳಾ ಕಬಡ್ಡಿ ಪಂದ್ಯಾವಳಿ ಆಯೋಜನೆ

Must Read

spot_img

ಸಿಂದಗಿ: ತಾಲೂಕಿನ ಚಾಂದಕವಠೆ ಗ್ರಾಮದಲ್ಲಿ  ಮಾ. 16 ರಂದು ಬೆಳಗ್ಗೆ 09-00 ಗಂಟೆಗೆ ಕುಂಭಮೇಳದೊಂದಿಗೆ ಶ್ರೀ ಕನಕದಾಸರ ಭವ್ಯಮೆರವಣಿಗೆ ಹಾಗೂ ಶ್ರೀ ಕನಕದಾಸರ ಕಂಚಿನ ಪುತ್ಥಳಿ ಅನಾವರಣದ ನಿಮಿತ್ತವಾಗಿ 11-30 ಗಂಟೆಗೆ ರಾಷ್ಟ್ರಮಟ್ಟದ ಪುರುಷರ ಮತ್ತು ಮಹಿಳಾ ಕುಸ್ತಿ ಪಂದ್ಯಾವಳಿ ಹಾಗೂ ಸಂತ ಶ್ರೇಷ್ಠ ಶ್ರೀ ಕನಕದಾಸರ ಕನಕ ಭವನ ಭೂಮಿಪೂಜಾ ಸಮಾರಂಭ ಹಮ್ಮಿಕೊಳ್ಳಲಾಗಿದ್ದು ಹಾಲುಮತ ಸಮಾಜದ ಬಾಂಧವರು ಹೆಚ್ಚಿನ ಸಂಖ್ಯೆಯಲ್ಲಿ ಬಾಗವಹಿಸುವಂತೆ ಮಲ್ಲು ಸಾವಳಸಂಗ ಹೇಳಿದರು.

ಪಟ್ಟಣದ ಪ್ರವಾಸಿ ಮಂದಿರದಲ್ಲಿ ತಾಲೂಕಿನ ಚಾಂದಕವಠೆ ಗ್ರಾಮದಲ್ಲಿ ಮಾ. 16 ರಂದು ಆಯೋಜಿಲಾದ ಕಾರ್ಯಕ್ರಮದ ಪೂರ್ವಭಾವಿಯಾಗಿ ನಡಸಿದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು.

ಬಾಜಪ ಹಿಂದುಳಿದ ವರ್ಗಗಳ ಅಧ್ಯಕ್ಷ ರವಿ ನಾಯ್ಕೋಡಿ ಮಾತನಾಡಿ,  ಈ ಕಾರ್ಯಕ್ರಮದಲ್ಲಿ ತಾಲೂಕಿನ ಸುಮಾರು 15ರಿಂದ 20 ಸಾವಿರ ಜನರು ಪಾಲ್ಗೊಳ್ಳುವ ಸಂಭವವಿದೆ. ಸಾನ್ನಿಧ್ಯ ವಹಿಸಲಿರುವ  ಗೋಳಸಾರ ಶ್ರೀ ಸದ್ಗುರು ಅಭಿನವ ಮಹಾಶಿವಯೋಗಿಗಳು, ತಿಂಥಣಿ ಶ್ರೀ ಸಿದ್ದರಾಮಾನಂದ ಪುರಿ ಸ್ವಾಮೀಜಿ, ಸುಕ್ಷೇತ್ರ ಹುಲಜಂತಿ ಶ್ರೀ ಮಾಳಿಂಗರಾಯ ಮಹಾರಾಜರು, ಯಲಗೋಡ ಶ್ರೀ ಗುರುಅಂಗ ಮಹಾಸ್ವಾಮಿಗಳು, ಮುಮ್ಮೇಟಿಗುಡ್ಡ ಅಭಿನವ ಶ್ರೀ ಬನಸಿದ್ದೇಶ್ವರ ಮಹಾರಾಜರು, ರಾಂಪೂರ ಪಿ.ಎ. ಆರೂಢ ಸಂಗನಬಸವೇಶ್ವರ ಮಠದ ಶ್ರೀ ನಿತ್ಯಾನಂದ ಮಹಾರಾಜರು, ಮುದ್ದೇಬಿಹಾಳ ಸರೂರ ಮಠದ  ಶ್ರೀ ಸಿದ್ದಯ್ಯ ಸ್ವಾಮಿಗಳು,  ಶ್ರೀ ಸಿದ್ದಪ್ಪ ಪೂಜಾರಿ, ಶ್ರೀ ಸಿದ್ದಯ್ಯ ಹಿರೇಮಠ, ಪೌರಾಡಳಿತ ಮತ್ತು ಸಣ್ಣ ಕೈಗಾರಿಕಾ ಸಚಿವ ಎಂ. ಟಿ.ಬಿ. ನಾಗರಾಜ ಕನಕದಾಸರ ಪುತ್ತಳಿ ಅನಾವರಣಗೊಳಿಸುವವರು, ಮಾಜಿ ಉಪಮುಖ್ಯಮಂತ್ರಿ  ಲಕ್ಷ್ಮಣ ಸವದಿ ಅವರು ಕನಕದಾಸರ ಪುತ್ತಳಿ ಪುಷ್ಪಾರ್ಚನೆ ನೆರವೇರಿಸುವರು.  ಸಂಸದ ರಮೇಶ ಜಿಗಜಿಣಗಿ ರಾಷ್ಟ್ರೀಯ ಕುಸ್ತಿಗೆ ಚಾಲನೆ ನೀಡಲಿದ್ದಾರೆ. ನಗರಾಭಿವೃದ್ಧಿ ಸಚಿವ ಬೈರತಿ ಬಸವರಾಜ ಅವರು ನೂತನ ಕನಕ ಭವನದ ಭೂಮಿಪೂಜೆ ನೆರವೇರಿಸಲಿದ್ದಾರೆ. ಶಾಸಕರ ರಮೇಶ  ಭೂಸನೂರ ಜ್ಯೋತಿ ಬೆಳಗಿಸುವರು.  ಮಾಜಿ ಜಿ.ಪಂ. ಉಪಾಧ್ಯಕ್ಷರು ಮಲ್ಲಣ್ಣ ಸಾಲಿ, ಕುರಬ ಸಂಘದ ತಾಲೂಕಾಧ್ಯಕ್ಷ ನಿಂಗಣ್ಣ ಬಿರಾದಾರ ಅಧ್ಯಕ್ಷತೆ ವಹಿಸಲಿದ್ದಾರೆ.  ಮೆರವಣಿಗೆ ಫೋಟೋ ಪೂಜೆ ಯನ್ನು  ಸಮಾಜದ ಜಿಲ್ಲಾಧ್ಯಕ್ಷ ಶರಣಪ್ಪ ಕಣಮೇಶ್ವರ ಮೆರವಣೆಗೆಗೆ ಗುರುರಾಜಗೌಡ ಪಾಟೀಲ ಚಾಲನೆ ನೀಡಲಿದ್ದಾರೆ ಅಲ್ಲದೆ ಈ ಕಾರ್ಯಕ್ರಮದಲ್ಲಿ ಸಮಾಜದ ಅನೇಕ ಮುಖಂಡರು, ರಾಜಕೀಯ ದುರೀಣರು ಆಗಮಿಸಲಿದ್ದಾರೆ ಕಾರಣ ತಾಲೂಕಿನ ಸಮಾಜ ಬಂಧುಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಮನವಿ ಮಾಡಿಕೊಂಡರು.

ಈ ಪತ್ರಿಕಾಗೋಷ್ಠಿಯಲ್ಲಿ ಕುರುಬ ಸಮಾಜದ ಅಧ್ಯಕ್ಷ ನಿಂಗಣ್ಣ ಬಿರಾದಾರ, ಪ್ರಕಾಶ ಯಡಗಿ, ಎಸ್.ಪಿ.ಪೂಜಾರಿ ಇದ್ದರು.

- Advertisement -

LEAVE A REPLY

Please enter your comment!
Please enter your name here

- Advertisement -

Latest News

ವಿದ್ಯುತ್ ಕಳ್ಳತನ ಮಹಾಪರಾಧ: ಎಇಇ ಧರೆಪ್ಪಗೋಳ

ಸಿಂದಗಿ: ವಿದ್ಯುತ್ ಕಳ್ಳತನ ಮಹಾಪರಾಧ, ಕಳ್ಳತನ ಮಾಡಿದ ಗ್ರಾಹಕರಿಗೆ ಜೈಲುವಾಸ ಮತ್ತು ದಂಡ ಕಟ್ಟಿಟ್ಟಬುತ್ತಿ ಎಂದು ಸಿಂದಗಿ ಸಹಾಯಕ ಕಾರ್ಯನಿರ್ವಾಹಕ ವಿಶಾಲ್ ಧರೆಪ್ಪಗೋಳ ಹೇಳಿದರು. ತಾಲೂಕಿನ ಮೋರಟಗಿ...
- Advertisement -

More Articles Like This

- Advertisement -
close
error: Content is protected !!