ಸಿಂದಗಿ: ಸಂಘಟನೆಗಳು ಸರಕಾರದ ಜೊತೆಗೆ ಸಂಘರ್ಷಿಸಿ ನೊಂದ ಜನರಿಗೆ ಹಾಗೂ ಕಟ್ಟಕಡೆಯ ಜನರಿಗೆ ಸೌಲಭ್ಯಗಳನ್ನು ಕೊಡಿಸಲು ಪ್ರಯತ್ನಿಸಬೇಕೆ ವಿನಃ ಸಾರ್ವಜನಿಕರಿಗೆ ತೊಂದರೆ ನೀಡುವ ಸಂಘಟನೆಯಾಗಬಾರದು ಎಂದು ಕಾನಿಪ ಧ್ವನಿ ತಾಲೂಕು ಅಧ್ಯಕ್ಷ ಪಂಡಿತ ಯಂಪೂರೆ ಹೇಳಿದರು.
ತಾಲೂಕಿನ ದೇವೂರ ಗ್ರಾಮದಲ್ಲಿ ಜಾಂಬವ ಸಂಘಟನೆಯ ನೂತನ ಜಿಲ್ಲಾಧ್ಯಕ್ಷ ಪದಗ್ರಹಣ ಹಾಗೂ ಸಂಕೇತನ 3ನೇ ಹುಟ್ಟು ಹಬ್ಬದ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, ಇಂದು ಕೆಲವೊಂದು ಸಂಘಟನೆಗಳು ಸರಕಾರಿ ಅಧಿಕಾರಿಗಳನ್ನು ಬ್ಲ್ಯಾಕ್ ಮೇಲ್ ಮಾಡಿ ದುಡ್ಡು ಸಂಗ್ರಹಿಸುತ್ತಿವೆ ಅಂತಹ ಸಂಘಟನೆಗಳಿಂದ ನಿಜವಾಗಿ ಸಂಘಟನೆ ಕಟ್ಟುವವರಿಗೆ ಹೊಡೆತ ಬೀಳುತ್ತಿದೆಯಲ್ಲದೆ ಜನರ ಭಾವನೆಗಳಿಗೆ ಧಕ್ಕೆ ತರುವಂತಾಗಿವೆ ಆಯಾ ಸಮುದಾಯಕ್ಕನುಗುಣವಾಗಿ ನಿಗಮಗಳನ್ನು ಸ್ಥಾಪನೆ ಮಾಡಿವೆ ಅದರ ಅರಿವು ಜನರಿಗಿಲ್ಲ ಸರಕಾರಿ ಸೌಲಭ್ಯಗಳ ಜಾಗೃತಿ ಕಾರ್ಯಕ್ರಮಗಳನ್ನು ಹಾಕಿಕೊಂಡು ಕೂಲಿ ನಾಲಿ ಮಾಡುವ ಜನರಿಗೆ ಯೋಜನೆಗಳನ್ನು ಮುಟ್ಟಿಸುವಲ್ಲಿ ಸಂಘಟನೆಗಳ ಪಾತ್ರ ಬಹುಮುಖ್ಯವಾಗಿದ್ದು ಆ ದಿಸೆಯಲ್ಲಿ ಕಾರ್ಯ ಪ್ರವೃತ್ತರಾಗಬೇಕು ಎಂದರು.
ದೇವರಹಿಪ್ಪರಗಿ ಮತಕ್ಷೇತ್ರದ ಕಾಂಗ್ರೆಸ್ ಮುಖಂಡ ಸಂತೋಷ ದೊಡಮನಿ ಅಧ್ಯಕ್ಷತೆ ವಹಿಸಿದ್ದರು.
ನಿತ್ಯಾನಂದ ಕಟ್ಟಿಮನಿ, ರಮೇಶ ಯಂಕಂಚಿಕರ ಮಾತನಾಡಿ, ಸಂಘಟನೆಗಳ ಜವಾಬ್ದಾರಿಗಳು ಜನರ ಭಾವನೆಗಳಿಗೆ ಸ್ಪಂದಿಸುವಂತಾಗಬೇಕು ಎಂದರು.
ಈ ಸಂದರ್ಭದಲ್ಲಿ ಜಾಂಬನ ಯುವ ಸೇನೆಯ ರಾಜ್ಯ ಉಪಾಧ್ಯಕ್ಷ ಮಲಕಪ್ಪ ಬಾಗೇವಾಡಿ ಅವರು ನೂತನ ಜಿಲ್ಲಾಧ್ಯಕ್ಷ ಮಂಜುನಾಥ ದೊಡಮನಿ, ಯುವ ಘಟಕದ ಜಿಲ್ಲಾಧ್ಯಕ್ಷ ಅಶೋಕ ರತ್ನಾಕರ ಅವರಿಗೆ ಆದೇಶ ಪತ್ರ ನೀಡುವ ಮೂಲಕ ಗೌರವಿಸಿದರು.
ಕುರುಬ ಸಮುದಾಯದ ಅಧ್ಯಕ್ಷ ನಿಂಗಣ್ಣ ಬಿರಾದಾರ, ಪುರಸಭೆ ನಾಮ ನಿರ್ದೇಶನ ಸದಸ್ಯ ಕಾಜು ಬಂಕಲಗಿ, ಪರಶುರಾಮ ಗೊರವಗುಂಡಗಿ, ಎಸ್.ಟಿ.ಬಿರಾದಾರ, ದೇವೂರ ಗ್ರಾಪಂ ಸದಸ್ಯ ಅಬ್ಬಾಸಲಿ ಬಾಗವಾನ, ಮಲ್ಲು ಬಂಕಲಗಿ, ಮಹೇಶ ಸಿದ್ದಾಪುರ, ಶಿವಾನಂದ ನಾಟೀಕಾರ, ಮಲ್ಲಿಕಾರ್ಜುನ ದೊಡಮನಿ, ನಜೀರ ಬೀಳಗಿ, ಪ್ರತಾಪ ಬರತ್ ಇಂಡಿ ಸೇರಿದಂತೆ ಅನೇಕರು ವೇದಿಕೆ ಮೇಲಿದ್ದರು.
ಕಾನಿಪ ಧ್ವನಿ ಸಂಘದ ಕಾರ್ಯದರ್ಶಿ ಇಸ್ಮಾಯಲ್ ಶೇಖ ಸ್ವಾಗತಿಸಿದರು.
ಸಾಯಬಣ್ಣ ದೇವರಮನಿ ನಿರೂಪಿಸಿ ಕೊನೆಯಲ್ಲಿ ವಂದಿಸಿದರು.