ಸಿಂದಗಿ: ತಾಲೂಕಿನ ಪ್ರಾಥಮಿಕ ಶಾಲಾ ಶಿಕ್ಷಕರ ಸೇವಾ ಪುಸ್ತಕಗಳು ಅಪೂರ್ಣವಾಗಿರುವ ಸೇವಾ ವಿವರ ಹಾಗೂ ಮಾಹಿತಿಯನ್ನು ಪೂರ್ಣಗೊಳಿಸಲು “ಗುರುಸ್ಪಂದನ” ಕಾರ್ಯಕ್ರಮವನ್ನು ಆಯೋಜಿಸುವ ಕುರಿತು ಕ್ಷೇತ್ರ ಶಿಕ್ಷಣಾಧಿಕಾರಿ ಹಣಮಂತರಾಯ ಹರನಾಳ ಅವರಿಗೆ ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ತಾಲ್ಲೂಕ ಘಟಕದಿಂದ ಮನವಿ ಸಲ್ಲಿಸಿದರು.
ಈ ಸಂದರ್ಭದಲ್ಲಿ ತಾಲ್ಲೂಕ ಘಟಕದ ಅಧ್ಯಕ್ಷ ಆನಂದ ಭೂಸನೂರ ಮಾತನಾಡಿ, ಸಿಂದಗಿ ತಾಲೂಕಿನ ಪ್ರಾಥಮಿಕ ಶಾಲಾ ಶಿಕ್ಷಕರ ಸೇವಾ ಪುಸ್ತಕದಲ್ಲಿ ಸಂಪೂರ್ಣ ಮಾಹಿತಿ ನಮೂದಾಗದೆ ಅಪೂರ್ಣವಾಗಿದ್ದು ಕಂಡು ಬಂದಿದೆ .ಹಲವು ಸಂಘ ಪರವಾಗಿ ಮೌಖಿಕವಾಗಿ ತಿಳಿಸಿದರು ಶಿಕ್ಷಕರ ಸೇವಾ ವಿವರದ ಮಾಹಿತಿ ಅಪೂರ್ಣವಾಗಿದು ಕಂಡು ಬಂದಿದೆ ಕಾರಣ ಮಾನ್ಯ ಕ್ಷೇತ್ರ ಶಿಕ್ಷಣಾಧಿಕಾರಿಗಳು ಶಿಕ್ಷಕರ ಸೇವಾ ವಿವರದ ಮಾಹಿತಿ ಪೂರ್ಣವಾಗಿ ನಮೂದಿಸಲು ತಾವು “ಗುರುಸ್ಪಂದನ” ಹೆಸರಿನಲ್ಲಿ ಕಾರ್ಯಕ್ರಮವನ್ನು ಆಯೋಜಿಸಿ ಶಿಕ್ಷಕರ ಸೇವಾ ಪುಸ್ತಕಗಳಲ್ಲಿ ಅವರ ಸೇವಾ ವಿವರದ ಮಾಹಿತಿಯನ್ನು ಪೂರ್ಣಗೊಳಿಸಲು ಗುರುಸ್ಪಂದನ ಕಾರ್ಯಕ್ರಮ ಮಾಡಲು ವಿನಂತಿಸಿದರು.
ಈ ಸಂದರ್ಭದಲ್ಲಿ ಸಂಘದ ಪ್ರಧಾನ ಕಾರ್ಯದರ್ಶಿ ರಾಯಪ್ಪ ಬಿ ಇವಣಗಿ. ಎಂ.ಎಸ್.ಚೌಧರಿ. ಜಿ.ಎಸ್.ಹೊಸಗೌಡ. ಬಸವರಾಜ ಸೋಮಾಪೂರ ಭಾಗವಹಿಸಿದ್ದರು