ಸವದತ್ತಿಃ “ನಮ್ಮ ವೃತ್ತಿ ಬದುಕಿನಲ್ಲಿ ವರ್ಗಾವಣೆಗೊಳ್ಳುವುದು ಮತ್ತು ನಿವೃತ್ತಿಯಾಗುವುದು.ಬಡ್ತಿಯಾಗುವುದು ಇವೆಲ್ಲವೂ ಸಹಜ ಕ್ರಿಯೆಗಳು. ಈ ಎಲ್ಲವುಗಳ ನಡುವೆ ನಾವು ಏನು ಮಾಡಿದೆವು ಮತ್ತು ಹೇಗೆ ನಮ್ಮ ಒಡನಾಡಿಗಳ ಜೊತೆಗೆ ಕರ್ತವ್ಯ ನಿರ್ವಹಿಸಿದೆವು ಎಂಬುದು ನಮ್ಮ ಜೀವನ ಪರ್ಯಂತ ನೆನಪಿಡುವ ಸಂಗತಿಗಳು ನಮ್ಮ ಕರ್ತವ್ಯದ ಮೂಲಕ ನಮ್ಮನ್ನು ಇತರರು ಸ್ಮರಿಸುವ ಹಾಗಿದ್ದಾಗ ಮಾತ್ರ ನಮ್ಮ ವೃತ್ತಿ ಬದುಕು ಸಾರ್ಥಕ.ಇಲ್ಲಿ ಕರ್ತವ್ಯದಲ್ಲಿ ಶೃದ್ಧೆ ಇರಬೇಕು.”ಎಂದು ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಶ್ರೀಶೈಲ ಕರೀಕಟ್ಟಿ ತಿಳಿಸಿದರು
ಅವರು ಪಟ್ಟಣದ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯದಲ್ಲಿ ವರ್ಗಾವಣೆಗೊಂಡ ಕ್ಷೇತ್ರ ಶಿಕ್ಷಣಾಧಿಕಾರಿ ಎಂ.ಬಿ.ಬಳಿಗಾರ ಇವರ ಬೀಳ್ಕೊಡುಗೆ ಹಾಗೂ ನೂತನವಾಗಿ ಕ್ಷೇತ್ರ ಸಮನ್ವಯಾಧಿಕಾರಿಗಳಾಗಿ ಹಾಜರಾದ ಬಿ.ಎನ್.ಬ್ಯಾಳಿ. ದೈಹಿಕ ಶಿಕ್ಷಣ ಪರಿವೀಕ್ಷಕ ಎಂ.ಆರ್.ಮಾರಾ ಶಿಕ್ಷಣ ಸಂಯೋಜಕ ಶಿವಪೂಜಿಮಠ ಇವರ ಸ್ವಾಗತ ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದರು.
ಈ ಸಂದರ್ಭದಲ್ಲಿ ಪ್ರೌಢಶಾಲಾ ಶಿಕ್ಷಕರ ಸಂಘದ ಅಧ್ಯಕ್ಷರಾದ ಸುಧೀರ ವಾಘೇರಿ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷರಾದಎಚ್.ಆರ್.ಪೆಟ್ಲೂರ. ಕಾರ್ಯದರ್ಶಿಗಳಾದ ಎಫ್.ಜಿ.ನವಲಗುಂದ..ಶಿಕ್ಷಣ ಸಂಯೋಜಕರಾದ ಗುರುನಾಥ ಕರಾಳೆ. ಎಂ.ಡಿ.ಹುದ್ದಾರ. ಬಿ.ಆರ್.ಪಿಗಳಾದ ರಾಜು ಭಜಂತ್ರಿ.ವ್ಹಿ.ಸಿ.ಹಿರೇಮಠ.ರತ್ನಾ ಸೇತಸನದಿ. ಡಾ. ಬಿ. ಐ. ಚಿನಗುಡಿ. ಸಮನ್ವಯ ಶಿಕ್ಷಣ ಸಂಪನ್ಮೂಲ ಶಿಕ್ಷಕರಾದ ಎಸ್.ಬಿ.ಬೆಟ್ಟದ.ವೈ.ಬಿ.ಕಡಕೋಳ ನಿವೃತ್ತ ಬಿ.ಐ.ಇ.ಆರ್.ಟಿ ಎಂ.ಎಂ.ಸಂಗಮ.ಎಂ.ವ್ಹಿ.ಹಾಳಮನಿ. ಗಣಕ ಯಂತ್ರ ನಿರ್ವಾಕರಾದ ವಿನೋದ ಹೊಂಗಲ ಮಲ್ಲಿಕಾರ್ಜುನ ಹೂಲಿ ಸೇರಿದಂತೆ ತಾಲೂಕಿನ ಎಲ್ಲ ಸಮೂಹ ಸಂಪನ್ಮೂಲ ಕೇಂದ್ರಗಳ ಸಂಪನ್ಮೂಲ ವ್ಯಕ್ತಿಗಳು, ವಿವಿಧ ಪ್ರಾಥಮಿಕ ಮತ್ತು ಪ್ರೌಢಶಾಲೆಗಳಿಂದ ಆಗಮಿಸಿದ್ದ ಮುಖ್ಯ ಶಿಕ್ಷಕರು ಹಾಗೂ ಸಹ ಶಿಕ್ಷಕರು ಉಪಸ್ಥಿತರಿದ್ದರು.
ಸನ್ಮಾನ ಸ್ವೀಕರಿಸಿದ ಮಾತನಾಡಿದ ಎಂ.ಬಿ.ಬಳಿಗಾರ “ಸವದತ್ತಿ ತಾಲೂಕಿನ ನನ್ನ ಎಲ್ಲ ವೃತ್ತಿ ಬಾಂಧವರು ಮತ್ತು ಕ್ಷೇತ್ರ ಶಿಕ್ಷಣಾಧಿಕಾರಿಗಳು ತಮಗೆ ನೀಡಿದ ಸಹಕಾರ ಮತ್ತು ಶೈಕ್ಷಣಿಕ ರಂಗದ ಚಟುವಟಿಕೆಗಳಲ್ಲಿ ಶಿಕ್ಷಕರು ತೋರಿದ ಶೈಕ್ಷಣಿಕ ಬಾಂಧವ್ಯ ಮರೆಯಲಾಗದು.
ಸಂಘಟನೆಗಳ ಪದಾಧಿಕಾರಿಗಳು ಮತ್ತು ಅಧ್ಯಕ್ಷರುಗಳು ಕೂಡ ಶಿಕ್ಷಣ ಕ್ಷೇತ್ರದಲ್ಲಿ ಎಲ್ಲ ರೀತಿಯ ಸಹಾಯ ಸಹಕಾರ ನೀಡಿರುವರು.ಇದೊಂದು ಮರೆಯಲಾಗದ ಅನುಭವ”ಎಂದು ಕೃತಜ್ಞತಾ ನುಡಿಗಳನ್ನು ಹೇಳುವ ಮೂಲಕ ಎಲ್ಲರಿಗೂ ಧನ್ಯವಾದಗಳನ್ನು ಅರ್ಪಿಸಿದರು.
ಇದೇ ಸಂದರ್ಭದಲ್ಲಿ ಗೋಕಾಕಕ್ಕೆ ವರ್ಗಾವಣೆಗೊಂಡ ಕ್ಷೇತ್ರ ಸಮನ್ವಯಾಧಿಕಾರಿಗಳಾದ ಎಂ.ಬಿ.ಬಳಿಗಾರ ಅವರಿಗೆ ಗೌರವ ಸನ್ಮಾನವನ್ನು ಪ್ರಾಥಮಿಕ ಮತ್ತು ಪ್ರೌಢಶಾಲೆಗಳ ಸಂಘಟನೆಗಳಿಂದ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯದಲ್ಲಿ ಸಮೂಹ ಸಂಪನ್ಮೂಲ ವ್ಯಕ್ತಿಗಳಿಂದ ವಿವಿಧ ಶಿಕ್ಷಕರುಗಳಿಂದ ಜರುಗಿತು.
ಹಾಗೆಯೇ ನೂತನವಾಗಿ ಆಗಮಿಸಿದವರನ್ನು ಕೂಡ ಸನ್ಮಾನಿಸಿ ಗೌರವಿಸುವ ಮೂಲಕ ಸ್ವಾಗತ ಕೋರಲಾಯಿತು. ಈ ಕಾರ್ಯಕ್ರಮದ ಪ್ರಾರಂಭದಲ್ಲಿ ಶಿಕ್ಷಣ ಸಂಯೋಜಕ ಎಂ.ಡಿ.ಹುದ್ದಾರ ಸ್ವಾಗತಿಸುವ ಜೊತೆಗೆ ಕಾರ್ಯಕ್ರಮ ನಿರೂಪಿಸಿದರು. ಗುರುನಾಥ ಕರಾಳೆ ಕೊನೆಗೆ ವಂದಿಸಿದರು.