ನಮ್ಮ ನಡೆ ಶಾಲೆ ಕಡೆ ಕಾರ್ಯಕ್ರಮಕ್ಕೆ ಚಾಲನೆ

Must Read

ಸಿಂದಗಿ: ಶಿಕ್ಷಣ ಪಡೆಯುವುದು ಪ್ರತಿಯೊಬ್ಬರ ಹಕ್ಕು, ಸರ್ಕಾರ 6-14 ವರ್ಷದ ಒಳಗಿನ ಮಕ್ಕಳಿಗೆ ಕಡ್ಡಾಯ ಮತ್ತು ಉಚಿತವಾಗಿ ಶಿಕ್ಷಣವನ್ನು ನೀಡುತ್ತಿದೆ. ಇದರ ಸದುಪಯೋಗ ತಾವೆಲ್ಲರೂ ಹಾಗೂ ಶಾಲೆ ಬಿಟ್ಟು ಮನೆಯಲ್ಲಿರುವ ನಿಮ್ಮ ಗೆಳೆಯ/ಗೆಳತಿಯರು ಪಡೆದುಕೊಳ್ಳುವಂತೆ ನೀವು ಹುರಿದುಂಬಿಸಬೇಕು. ಪ್ರತಿಯೊಬ್ಬ ಪಾಲಕರು ತಮ್ಮ ಮಕ್ಕಳ ಭವಿಷ್ಯವನ್ನು ಮನಗಂಡು ಅವರ ಶಿಕ್ಷಣಕ್ಕೆ ಆದ್ಯತೆಯನ್ನು ನೀಡಬೇಕು ಎಂದು ಸಂಗಮ ಸಂಸ್ಥೆಯ ನಿರ್ದೇಶಕ ಫಾದರ್ ಆಲ್ವಿನ್ ಡಿಸೋಜರವರು ಹೇಳಿದರು.

ತಾಲೂಕಿನ ರಾಂಪುರ ಪಿ.ಎ ಗ್ರಾಮದ ಸರ್ಕಾರಿ ಪ್ರೌಢಶಾಲೆ ಹಾಗೂ ಸರ್ಕಾರಿ ಹಿರಿಯ ಪ್ರಾರ್ಥಮಿಕ ಶಾಲೆ ಸಹಯೋಗದಲ್ಲಿ ಸಂಗಮ ಸಮಗ್ರ ಗ್ರಾಮೀಣ ಅಭಿವೃದ್ಧಿ ಕೇಂದ್ರ ವತಿಯಿಂದ ನಮ್ಮ ನಡೆ ಶಾಲೆ ಕಡೆ ಜಾಥಾ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿ,  ಶಾಲಾ ವಿದ್ಯಾರ್ಥಿಗಳು, ಶಿಕ್ಷಕರು ಮತ್ತು ಲೋಕ ಮಂಚ್ ನಾಯಕರು ರಾಂಪುರದ ಪ್ರತಿಯೊಂದು ಬೀದಿಯಲ್ಲಿ ಸಂಚರಿಸಿ ಮಕ್ಕಳು ಶಾಲೆಗೆ ಬರುವಂತೆ ಘೋಷಣೆಗಳನ್ನು ಕೂಗಿದರು.

ಇದೇ ಸಂದರ್ಭದಲ್ಲಿ ಶಾಲಾವರಣದಲ್ಲಿ ಪರಿಸರ ದಿನಾಚರಣೆಯ ಅಂಗವಾಗಿ ಗಿಡಗಳನ್ನು ನೆಡಲಾಯಿತು. 

ಎಸ್.ಎಂ ಜೆವರ್ಗಿ ಸಹಶಿಕ್ಷಕರು ನಿರೂಪಿಸಿದರು, ವಿದ್ಯಾರ್ಥಿಗಳು ಪ್ರಾರ್ಥನೆ ಗೀತೆಯನ್ನು ಹಾಡಿದರು, ಸಂಗಮ ಸಂಸ್ಥೆಯ ಕಾರ್ಯಕರ್ತ ರಾಜೀವ ಕುರಿಮನಿ ಸ್ವಾಗತಿಸಿದರು.

ಫಾದರ್ ಸಂತೋಷ, ಸುರೇಖಾ ಬಂಡೆ, ಚೌಡಮ್ಮ ಮಾರ್ಸನಳ್ಳಿ, ಶಾಂತಮ್ಮ ಮಾರ್ಸನಳ್ಳಿ, ರೇವುಬಾಯಿ ಮಲಘಾಣ, ಚೆನ್ನಮ್ಮ ಕರ್ಚಗೇರಿ ಲೋಕ್ ಮಂಚ್ ನಾಯಕರು ಭಾಗವಹಿಸಿದರು. ಶ್ರೀಮತಿ ನುಸರತ್ ಕೌಸರ ಅತ್ತಾರ ಮುಖ್ಯಗುರುಗಳು  ರಾಂಪುರ ಪ್ರೌಢಶಾಲೆ, ಎಸ್.ಎಂ ಬಿರಾದರ ಮುಖ್ಯ ಗುರುಗಳು ರಾಂಪುರ ಪ್ರಾರ್ಥಮಿಕ ಶಾಲೆ ಹಾಗೂ ಸಹಶಿಕ್ಷರು ಕಾರ್ಯಕ್ರಮ ಹಾಗೂ ಜಾಥದಲ್ಲಿ ಭಾಗವಹಿಸಿದರು.

Latest News

ಬಸವ ಸಮಿತಿಯಿಂದ ಶರಣ ಸಂದೇಶ ಜಗತ್ತಿಗೆ ಮುಟ್ಟಿದೆ – ಯಾಪಲಪರವಿ

ಜನಸಾಮಾನ್ಯರಿಂದ ಸ್ಥಾಪಿತವಾದ ಧರ್ಮ ಲಿಂಗಾಯತಕಲಬುರ್ಗಿ - ಕಲಬುರ್ಗಿ ಬಸವ ಸಮಿತಿ ಅನುಭವ ಮಂಟಪ , ಡಾ. ಬಿ ಡಿ ಜತ್ತಿ ವಚನ ಅಧ್ಯಯನ ಮತ್ತು ಸಂಶೋಧನ...

More Articles Like This

error: Content is protected !!
Join WhatsApp Group