ಸಂಜಯ ಪಾಟೀಲ ಹೇಳಿಕೆಗೆ ಆಕ್ರೋಶ ಕಾಂಗ್ರೆಸ್ ಕಾರ್ಯಕರ್ತರಿಂದ ಪ್ರತಿಭಟನೆ

Must Read

ಜೆಡಿಎಸ್ ಗೆ ಗೆಲುವು ಕುಮಾರಸ್ವಾಮಿಗೆ ಬೇಕಿಲ್ಲ, ಬಿಜೆಪಿ ಗೆಲ್ಲಿಸಲು ಆಸಕ್ತಿ ಹೊಂದಿದ್ದಾರೆ – ಎಸ್ ಎಂ ಪಾಟೀಲ

ಸಿಂದಗಿ: ಈ ಕ್ಷೇತ್ರದ ಅಭಿವೃದ್ಧಿಗೆ ದಿ.ಮನಗೂಳಿ ಅವರು ತಮ್ಮ ಆಯುಷ್ಯವನ್ನೆ ಮುಡಿಪಾಗಿಟ್ಟು ದುಡಿದು ಅಗಲಿ ಹೋಗಿದ್ದಾರೆ ಅವರ ಮಗನಿಗೆ ಕೂಲಿ ಸಿಗಬೇಕು ಆದರೆ ಜೆಡಿಎಸ್ ಪಕ್ಷದ...

ಕಾಂಗ್ರೆಸ್ ಸರ್ಕಾರದ ಕೆಲಸಗಳು ಅದರ ಗೆಲುವಿಗೆ ಕಾರಣವಾಗುತ್ತದೆ – ಸುಜಾತಾ ಕಳ್ಳಿಮನಿ

ಸಿಂದಗಿ: ಸಿದ್ದರಾಮಯ್ಯನವರು ಐದು ವರ್ಷದ ಅಧಿಕಾರದ ಅವಧಿಯಲ್ಲಿ ಈ ಕರುನಾಡಿಗೆ ಬಡವರ ಪರ, ರೈತರ ಪರ ಜಾರಿಗೆ ತಂದ ಯೋಜನೆಗಳು ಈ ಸಿಂದಗಿ ಉಪಚುನಾವಣೆಯಲ್ಲಿ ಕಾಂಗ್ರೆಸ್...

ಬಿಜೆಪಿ ಅಲೆಮಾರಿ ಜನಾಂಗಕ್ಕೆ ಸುಳ್ಳು ಹೇಳಿ ಮತ ಪಡೆಯುತ್ತಿದೆ – ಮೇಘರಾಜ್ ಆರೋಪ

ಸಿಂದಗಿ: ಬಿಜೆಪಿಯ ಸರ್ಕಾರ  ಅಧಿಕಾರಕ್ಕೆ ಬಂದು ಎರಡು ವರ್ಷವಾದರೂ  ಅಲೆಮಾರಿ, ಅರೆ ಅಲೆಮಾರಿ ಸಮುದಾಯದ ಆಶ್ರಯ ಮನೆಗಳನ್ನು  ಮಂಜೂರು ಮಾಡದೆ ಕೇವಲ ಕಾಗದ ಪತ್ರದಲ್ಲಿ ಮಂಜೂರು...

ಮೂಡಲಗಿ: ಬಿಜೆಪಿ ಜಿಲ್ಲಾಧ್ಯಕ್ಷ ಸಂಜಯ ಪಾಟೀಲ ಬೆಳಗಾವಿ ಗ್ರಾಮೀಣ ಕ್ಷೇತ್ರದ ಶಾಸಕಿ ಲಕ್ಷೀ ಹೆಬ್ಬಾಳಕರ ವಿರುದ್ಧ ಹೇಳಿದ ವಿವಾದಾತ್ಮಕ ಹೇಳಿಕೆ ಖಂಡಿಸಿ ಭಾನುವಾರ ಅರಭಾವಿ ಮತ್ತು ಕೌಜಲಗಿ ಬ್ಲಾಕ್ ಕಾಂಗ್ರೆಸ್ ಸಮಿತಿಗಳ ಕಾರ್ಯಕರ್ತರು ಕಲ್ಮೇಶ್ವರ ವೃತ್ತದಲ್ಲಿ ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತ ಪಡಿಸಿದರು.

ಸಂಜಯ ಪಾಟೀಲ ಅವರ ಪ್ರತಿಕೃತಿ ದಹಿಸಿ ಕೂಡಲೆ ಅವರನ್ನು ಬಂಧಿಸಬೇಕೆಂದು ಆಗ್ರಹಿಸಲಾಯಿತು.

ಈ ಸಮಯದಲ್ಲಿ ಕಾಂಗ್ರೆಸ್ ಮುಖಂಡ ಅರವಿಂದ ದಳವಾಯಿ ಮಾತನಾಡಿ, ಶಾಸಕಿ ಲಕ್ಷ್ಮೀ ಹೆಬ್ಬಾಳಕರ ಅವರ ಬಗ್ಗೆ ಸಂಜಯ ಪಾಟೀಲ ಅವರು ವಿವಾದಾತ್ಮಕ ಹೇಳಿಕೆ ನೀಡಿರುವುದು ಬಿಜೆಪಿಯ ಸಂಸ್ಕೃತಿಯನ್ನು ಎತ್ತಿ ತೋರಿಸುತ್ತದೆ. ಪ್ರಧಾನಿ ನರೇಂದ್ರ ಮೋದಿ ಹೇಳಿದ ಬೇಟಿ ಬಚಾವೊ ಬೇಟಿ ಪಢಾವೊ ಎಂಬ ಮಾತಿಗೆ ಕವಡೆ ಕಾಸಿನ ಬೆಲೆ ಇಲ್ಲದಂತಾಗಿದೆ. ಅವರು ಈ ರೀತಿ ನಾಲಿಗೆ ಹರಿ ಬಿಟ್ಟು ಕೀಳು ಮಟ್ಟದ ರಾಜಕೀಯ ಮಾಡುತ್ತಿದ್ದಾರೆ. ಇದು ಮಹಿಳಾ ಕುಲಕ್ಕೆ ಮಾಡಿದ ಘೋರ ಅಪಮಾನವಾಗಿದೆ. ಅವರನ್ನು ತಕ್ಷಣ ಬಂಧಿಸಬೇಕೆಂದು ಒತ್ತಾಯಿಸಿದರು.

- Advertisement -

ಕಾಂಗ್ರೆಸ್ ಮುಖಂಡ ಮಾಜಿ ಅರಭಾವಿ ಬ್ಲಾಕ್ ಅಧ್ಯಕ್ಷ ವಿ ಪಿ ನಾಯ್ಕ ಮಾತನಾಡಿ, ಮಹಿಳೆಯರನ್ನು ಗೌರವದಿಂದ ಕಾಣುವಂಥ ನಾಡಿನಲ್ಲಿ ಮಹಿಳಾ ಶಾಸಕಿ ಲಕ್ಷ್ಮೀ ಹೆಬ್ಬಾಳಕರ ಬಗ್ಗೆ ಕೇವಲವಾಗಿ ಮಾತನಾಡಿದ ಸಂಜಯ ಪಾಟೀಲ ವ್ಯಕ್ತಿತ್ವ ಹೇಗಿದೆ ಎಂಬುದನ್ನು ತೋರಿಸುತ್ತದೆ.ಕೂಡಲೆ ಅವರು ಹೆಬ್ಬಾಳಕರ ಹತ್ತಿರ ಬಹಿರಂಗ ಕ್ಷಮೆ ಯಾಚಿಸಬೇಕು ಎಂದರು.

ಕಾಂಗ್ರೆಸ್ ಹಿರಿಯ ಮುಖಂಡ ಎಸ್ ಆರ್ ಸೋನವಾಲಕರ, ಗಿರೀಶ ಕರಡಿ, ಗುರಪ್ಪ ಹಿಟ್ಟಣಗಿ, ರವಿ ತುಪ್ಪದ ಮಾತನಾಡಿ, ಪಾಟೀಲ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಅರಭಾವಿ ಅಲ್ಪಸಂಖ್ಯಾತರ ಘಟಕದ ಅಧ್ಯಕ್ಷ ಸಲೀಮ್ ಇನಾಮದಾರ, ಬಸನಗೌಡ ಪಾಟೀಲ, ರವಿ ಮೂಡಲಗಿ, ಮಹಾಲಿಂಗಯ್ಯ ನಂದಗಾಂವಮಠ, ಜಾಕೀರ ನದಾಫ್, ಮಹಾದೇವ ಮೇತ್ರಿ, ರಮಜಾನ ಬಿಜಾಪೂರ, ಸುರೇಶ ಮಗದುಮ್, ರಾಬರ್ಟ ಮೂಡಲಗಿ, ಜಗದೀಶ ಜೋಗನ್ನವರ, ಮದಾರ ಜಕಾತಿ, ಇಮಾಮ ಹುನ್ನೂರ ಹಾಗೂ ಅನೇಕ ಕಾರ್ಯಕರ್ತರು ಇದ್ದರು.

- Advertisement -

LEAVE A REPLY

Please enter your comment!
Please enter your name here

- Advertisement -

Latest News

ಜೆಡಿಎಸ್ ಗೆ ಗೆಲುವು ಕುಮಾರಸ್ವಾಮಿಗೆ ಬೇಕಿಲ್ಲ, ಬಿಜೆಪಿ ಗೆಲ್ಲಿಸಲು ಆಸಕ್ತಿ ಹೊಂದಿದ್ದಾರೆ – ಎಸ್ ಎಂ ಪಾಟೀಲ

ಸಿಂದಗಿ: ಈ ಕ್ಷೇತ್ರದ ಅಭಿವೃದ್ಧಿಗೆ ದಿ.ಮನಗೂಳಿ ಅವರು ತಮ್ಮ ಆಯುಷ್ಯವನ್ನೆ ಮುಡಿಪಾಗಿಟ್ಟು ದುಡಿದು ಅಗಲಿ ಹೋಗಿದ್ದಾರೆ ಅವರ ಮಗನಿಗೆ ಕೂಲಿ ಸಿಗಬೇಕು ಆದರೆ ಜೆಡಿಎಸ್ ಪಕ್ಷದ...
- Advertisement -

More Articles Like This

- Advertisement -
close
error: Content is protected !!