ಬೆಳಗಾವಿ: ಸವದತ್ತಿ ತಾಲೂಕಿನ ಕುರುವಿನಕೊಪ್ಪ ಗ್ರಾಮದ ಸಂಗಮೇಶ ಈರನಗೌಡ ಪಾಟೀಲ ಅವರಿಗೆ ರಾಣಿ ಚನ್ನಮ್ಮ ವಿಶ್ವವಿದ್ಯಾಲಯ ಈಚೆಗೆ ಪಿಎಚ್.ಡಿ ಪದವಿ ಪ್ರದಾನ ಮಾಡಿದೆ.
ವಿಶ್ವವಿದ್ಯಾಲಯದ ರಾಜ್ಯಶಾಸ್ತ್ರ ವಿಭಾಗದ ಪ್ರೊ. ಕಮಲಾಕ್ಷಿ ತಡಸದ ಅವರ ಮಾರ್ಗದರ್ಶನದಲ್ಲಿ ಸಂಗಮೇಶ ಪಾಟೀಲ ‘ಸಿವಿಲ್ ಸೊಸೈಟಿ ಆ್ಯಂಡ್ ಗವರ್ನನ್ಸ್: ಎನ್ ಅನಲ್ಯಾಟಿಕ್ ಸಂಶೋಧನಾ ಮಹಾಪ್ರಬಂಧ ಮಂಡಿಸಿದರು.
ಕು. ಸಂಗಮೇಶ ಪಾಟೀಲ ಸಾಧನೆಗೆ ಗ್ರಾಮವೇ ಸಂಭ್ರಮಿಸಿ ಇಂದು ಸಾಧಕನಿಗೆ ಸನ್ಮಾನ ಮಾಡಲಾಯಿತು..
ಈ ಸಂಧರ್ಭದಲ್ಲಿ ಗ್ರಾಮದ ಹಿರಿಯರಾದ ತಿರಕಪ್ಪ ತಮ್ಮನವ್ವರ, ಸಿದ್ದಯ್ಯ ಪಾಟೀಲ, ಬಸವನಗೌಡ ಪಾಟೀಲ್, ಮಂಜುನಾಥ ಅನ್ನಪ್ಪನವರ, ದೊಡ್ಡೇಶ ಹರ್ಲಾಪುರ, ಪ್ರಕಾಶ ಜ್ಯೋತಿ, ಮಾದೇವ ಮಾದರ, ಮಾರುತಿ, ಕರೆಪ್ಪ ಹಾಗೂ ಇನ್ನು ಅನೇಕ ಗ್ರಾಮದ ಹಿರಿಯರು ಯುವಕರು ಉಪಸ್ಥಿತರಿದ್ದರು..