ಮೂಡಲಗಿ:-ಪಟ್ಟಣದಲ್ಲಿ ಆರ್.ಡಿ.ಎಸ್.ಕಾಲೇಜಿನಲ್ಲಿ ಜರುಗಿದ ಕನ್ನಡ ಸಾಹಿತ್ಯ ಸಮ್ಮೇಳನದ ಮತ್ತೊಂದು ಆಕರ್ಷಣೆ ಚಿತ್ರಕಲಾ ಪ್ರದರ್ಶನ !
ಹಲವಾರು ಚಿತ್ರಕಲಾವಿದರ ಕೈ ಚಳಕದಲ್ಲಿ ಅರಳಿದ ಬಣ್ಣ ಬಣ್ಣದ ಕಲಾಕೃತಿಗಳು ನೋಡುಗರ ಗಮನಸೆಳೆದವು. ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಆಗಮಿಸಿದ ಸಾವಿರಾರು ಚಿತ್ರ ಪ್ರೇಮಿಗಳು ಚಿತ್ರಗಳನ್ನು ವೀಕ್ಷಿಸಿದರು.
ಕುಡಿತದಿಂದಾಗುವ ಸಂಸಾರ ದುಃಖ, ಮಾನವ ದೇಹ ರಚನೆಯ ಚಿತ್ರಗಳು, ನಿಸರ್ಗದ ವರ್ಣನೆ, ಪಕ್ಷಿಗಳ ಚಿತ್ರಗಳು, ಆಧ್ಯಾತ್ಮಿಕ ಆಕರ್ಷಣೆಯ ಚಿತ್ರ ವ್ಯಕ್ತಿ ಚಿತ್ರಗಳು….ಹೀಗೆ ಹಲವು ಬಗೆಯ ಕಲಾಕೃತಿಗಳು ಕಲಾ ರಸಿಕರ ಮನಸೆಳೆದವು
ಚಿತ್ರಕಲಾವಿದರುಗಳಾದ ಎಸ್. ಎಸ್. ಕುರುಣೆ, ಬಿ. ಐ. ಬಡಿಗೇರ್, ಆರ್. ಎಸ್. ಬಡೇಸ್, ಎ. ಆರ್. ಕುರುಬರ, ಎನ್. ಬಿ. ಕದಮ್, ಬಿ. ಎ. ಬಿರಾದಾರ, ಶ್ರೀಮತಿ ಶೋಭಾ ದಡುತಿ, ಗಣಪತಿ ಬಾಗೋಜಿ, ಸಿ. ಕೆ. ಹೊನ್ನ ನಾಯಕ್, ಎನ್.ಎಮ್ ಗುಡುಗುಡಿ, ಬ್ರಹ್ಮಾನಂದ ಬಸರಗಿ, ಎನ್ ಎಸ್ ಗಸ್ತಿ ಮತ್ತು ಶ್ರೀಮತಿ ಗೀತಾ ಗಾಣಿಗೇರ ಚಿತ್ರ ಕಲಾವಿದರು ತಮ್ಮ ಕೈಚಳಕ ತೋರಿದ್ದ ಪೇಂಟಿಂಗ್ಸ್ ಗಳನ್ನು ಪ್ರದರ್ಶಿಸಿದ್ದರು.