ಸಿಂದಗಿ; ಪಟ್ಟಣದ ಹಿರಿಯ ಮಠದ ಲಿಂ.ಶ್ರೀ ಶಾಂತವೀರ ಪಟ್ಟಾಧ್ಯಕ್ಷರ 42 ನೇ ಪುಣ್ಯ ಸ್ಮರಣೋತ್ಸವದ ನಿಮಿತ್ತ ಶುಕ್ರವಾರ ಶ್ರೀಗಳ ರಜತ ಮೂರ್ತಿಯ ಭವ್ಯ ಪಲ್ಲಕ್ಕಿ ಉತ್ಸವದ ಮೆರವಣಿಗೆ ಜರುಗಿತು.
ಪಲ್ಲಕ್ಕಿ ಉತ್ಸವಕ್ಕೆ ಊರಿನ ಹಿರಿಯ ಮಠದ ಪೀಠಾಧ್ಯಕ್ಷರಾದ ಶ್ರೀ ಶಿವಾನಂದ ಶಿವಾಚಾರ್ಯರರು ಪೂಜಾ ಕೈಂಕರ್ಯಗಳನ್ನು ನೆರವೇರಿಸಿ ಚಾಲನೆ ನೀಡಿದರು. ಪಲ್ಲಕ್ಕಿ ಉತ್ಸವವು ಊರಿನ ಪ್ರಮುಖ ಬೀದಿಗಳ ಮೂಲಕ ಸಂಚರಿಸಿತು. ಮಾರ್ಗ ಮಧ್ಯದಲ್ಲಿ ನೂರಾರು ಭಕ್ತರು ಪಲ್ಲಕ್ಕಿಗೆ ಪೂಜೆ, ನೈವೇದ್ಯ, ಹಣ್ಣುಗಳನ್ನು ಅರ್ಪಿಸಿದರು.
ಪಲ್ಲಕ್ಕಿ ಉತ್ಸವದುದ್ದಕ್ಕೂ ಅನೇಕ ಸುಮಂಗಲೆಯರು ಆರತಿ ಹಿಡಿದಿದ್ದರು. ಮಾರ್ಚ 5 ರಂದು ನಡೆದ ಸ್ಮರಣೋತ್ಸವವು ಪಲ್ಲಕ್ಕಿ ಮೆರವಣಿಗೆಯೊಂದಿಗೆ ಮುಕ್ತಾಯವಾಯಿತು. ಪಲ್ಲಕ್ಕಿ ಶ್ರೀಮಠಕ್ಕೆ ಆಗಮಿಸುತ್ತಿದ್ದಂತೆ ಪುಷ್ಪವೃಷ್ಠಿ ನೆರವೇರಿತು.
ಉತ್ಸವವದಲ್ಲಿ ಕಲಬುಗಿಯ ರೋಜಾ ಹಿರೇಮಠದ ಶ್ರೀ ಕೆಂಚಬಸವ ಸ್ವಾಮಿಗಳು, ರಟಗಲ್ಲದ ಶ್ರೀ ರೇವಣಸಿದ್ದೇಶ್ವರ ಶಿವಾಚಾರ್ಯರು, ಸಂಶಿ ವಿರಕ್ತಮಠದ ಚನ್ನಬಸವ ದೇವರು, ಗದುಗಿನ ಕುಮಾರೇಶ್ವರ ಧಾರ್ಮಿಕ ಪಾಠಶಾಲೆಯ ಶ್ರೀ ಶಿವಪ್ರಸಾದ ದೇವರು, ಊರಿನ ಹಿರಿಯ ಮಠದ ಶ್ರೀ ಲಿಂಗದೇವರು, ಡಾ. ಎಂ.ಎಂ.ಪಡಶೆಟ್ಟಿ, ಬಸವರಾಜ ಇವಣಿ, ಮಹಾದೇವಪ್ಪ ಮುಂಡೇವಾಡಗಿ, ಶಿರುಗೌಡ ದೇವರಮನಿ, ರವಿ ನಾಗೂರ, ಶಿವಾನಂದ ನಾಗೂರ, ಶಾಂತೂ ಹಿರೇಮಠ, ಡಾ. ಮಹಾಂತೇಶ ಹಿರೇಮಠ, ಶ್ರೀಶೈಲ ನಂದಿಕೋಲ, ಶೇಖರ ಮಾಡಬಾಳ, ನಿಂಗಯ್ಯ ಹಿರೇಮಠ, ಆನಂದ ಗುಣಾರಿ, ಅಶೋಕ ಕುಲಕರ್ಣಿ, ನೀಲಪ್ಪ ಗುಣಾರಿ, ಅನೀಲಗೌಡ ಬಿರಾದಾರ, ಗದಿಗಯ್ಯ ನಂದಿಮಠ, ಸಿದ್ದಲಿಂಗ ಕಿಣಗಿ, ಸಿದ್ದಲಿಂಗ ಪತ್ತಾರ ಹಾಗೂ ಸಮಸ್ತ ಕುಂಬಾರ ಭಕ್ತವೃಂದ ಸೇರಿದಂತೆ ಅನೇಕರು ಇದ್ದರು.