spot_img
spot_img

ಸೆ. 22ಕ್ಕೆ ಪಂಚಮಸಾಲಿ ವಕೀಲರಿಂದ ಬೆಳಗಾವಿಯಲ್ಲಿ ಧರಣಿ- ಜಯಮೃತ್ಯುಂಜಯ ಶ್ರೀ

Must Read

         ಮೂಡಲಗಿ:- 2ಎ ಮೀಸಲಾತಿಗಾಗಿ ಕಳೆದ ಮೂರ್ನಾಲ್ಕು ವರ್ಷಗಳಿಂದ ಹೋರಾಟ ಮಾಡುತ್ತಿದ್ದರೂ ಯಾವುದೇ ಸರ್ಕಾರ ಗಮನಹರಿಸುತ್ತಿಲ್ಲ. ಕಳೆದ ಬಿಜೆಪಿ ಸರ್ಕಾರ 2ಡಿ ಮೀಸಲಾತಿ ನೀಡಿ ಸಮಾಜದ ಮೂಗಿಗೆ ತುಪ್ಪ ಸವರುವ ಕೆಲಸ ಮಾಡಿದೆ ಅಷ್ಟೆ ಎಂದು  ಕೂಡಲ ಸಂಗಮ ಜಗದ್ಗುರು ಶ್ರೀ ಬಸವ ಜಯಮೃತ್ಯುಂಜಯ  ಶ್ರೀಗಳು ಆರೋಪಿಸಿದರು.
    ಈ ಹೋರಾಟಕ್ಕೆ ಒಂದು ಕಾನೂನಾತ್ಮಕ ರೂಪ ಕೊಡಲು ಪಂಚಮಸಾಲಿ ಸಮಾಜದ ವಕೀಲರುಗಳಿಂದ ಬೆಳಗಾವಿಯಲ್ಲಿ ಸೆ. 22 ರಂದು ಬೃಹತ್ ಧರಣಿ ನಡೆಸಲು ನಿಶ್ಚಯಿಸಲಾಗಿದೆ ಎಂದು ಅವರು ಮೂಡಲಗಿಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
    ಇಂದಿನ ಸರ್ಕಾರಕ್ಕೆ ನಮ್ಮ ಸಮಾಜದ ಬೆಂಬಲ ಸಿಕ್ಕಿದೆ.34 ಲಿಂಗಾಯತ 12 ಪಂಚಮಸಾಲಿ ಶಾಸಕರು ಇದ್ದಾರೆ.ಸ್ವತಃ ಮುಖ್ಯಮಂತ್ರಿಗಳು ಡಿಸೆಂಬರ್,02-2023ಕ್ಕೆ ಸಭೆ ಮಾಡಿದರು. ಆಗ ಒಂಬತ್ತು ದಿನ ಅಧಿವೇಶನದಲ್ಲಿ ಮುಡಾ ಹಾಗೂ ವಾಲ್ಮೀಕಿ ಹಗರಣಗಳ ಬಗ್ಗೆ ಹೆಚ್ಚಾಗಿ ಚರ್ಚೆಯಾಯಿತು ಹೊರತಾಗಿ ಪಂಚಮಸಾಲಿ ಮೀಸಲಾತಿ ಆಗಲಿ ಯಾವುದೇ ಸಮಸ್ಯೆ ಬಗ್ಗೆ ಹೆಚ್ಚಾಗಿ ವಿಷಯದ ಚರ್ಚೆಯಾಗಲಿಲ್ಲ. ಕಾನೂನಾತ್ಮಕವಾಗಿ ಸಹಕಾರ/ಬೆಂಬಲದಿಂದ ವಕೀಲರ ಸಂಘಟನೆ ಮಾಡುತ್ತಿದ್ದೇವೆ. ತ್ತೂರು,ಕಲ್ಯಾಣ ಕರ್ನಾಟಕದ ಸುಮಾರು ಐದಾರು ಸಾವಿರ ವಕೀಲರು ಪಾಲ್ಗೊಳ್ಳಲಿದ್ದಾರೆ.ವಕೀಲರ ಮೂಲಕ ಸರ್ಕಾರವನ್ನು ಎಚ್ಚರಿಸುತ್ತೇವೆ. ವಿಜಯಪುರ, ಬಾಗಲಕೋಟೆ,ಕೊಪ್ಪಳ,ಬೆಳಗಾವಿ ಹಾಗೂ ಇನ್ನು ಅನೇಕ ಜಿಲ್ಲೆಗಳಲ್ಲಿ ವಕೀಲರ ಸಂಘದವರು ಪೂರ್ವ ಬಾವಿ ಸಭೆ ಮಾಡಿದ್ದೇವೆ. ಸರ್ಕಾರ ಸೌಜನ್ಯಕಾದರೂ ನಮ್ಮನ್ನು ಕರೆಯಿಸಿ ಒಂದು ಮಾತು ಕೂಡಾ ಮಾತನಾಡಿಲ್ಲ.ನಿಮ್ಮ ಮೇಲೆ ನಂಬಿಕೆ ಇಟ್ಟು ನಮ್ಮ ಸಮಾಜದವರು ನಿಮಗೆ ವೋಟ್ ಹಾಕಿದ್ದಾರೆ. ಬರುವ ಡಿಸೆಂಬರ್,02ಕ್ಕೆ ಒಂದು ವರ್ಷ ಆಗುತ್ತದೆ, ಮುಖ್ಯಮಂತ್ರಿಯವರನ್ನು ಬೇಟಿಮಾಡಿ. ನೀವು ಮೂಲತಃ ವಕೀಲರು,  ಅಂಬೇಡ್ಕರ್,ಸಂವಿಧಾನ  ಮೇಲೆ ನಂಬಿಕೆ ಇಟ್ಟವರು.ನ್ಯಾಯಯುತವಾಗಿ ನಮಗೆ 2ಎ ಮೀಸಲಾತಿ ಸಿಗುವ ಹಾಗೆ ಸಹಕರಿಸಿ,ಬಡ ಮಕ್ಕಳ ಭವಿಷ್ಯದ ಬಗ್ಗೆ ಕಾಳಜಿ ಮಾಡಿ,ಅವರಿಗೆ ಸಹಕಾರಿಯಾಗಲಿ ಎಂದರು.
     ನಿಮ್ಮ ಸರ್ಕಾರ ಬರುವ ಸೆಪ್ಟೆಂಬರ್,22 ರಂದು ಬೆಳಗಾವಿ ಗಾಂಧೀ ಭವನ, ರಾಣಿ ಚೆನ್ನಮ್ಮ ವೃತ್ತ ರಾಜ್ಯದ ಬಹುತೇಕ ಪಂಚಸಾಲಿ ವಕೀಲರಿಂದ ಧರಣಿ ಮಾಡಲು ನಿರ್ಧಾರ ಮಾಡಿದೆ ಮತ್ತು ಪಂಚಮಸಾಲಿ ಶಾಸಕರಿಗೆ  ದೈರ್ಯ ತುಂಬುವ ಕೆಲಸ ನಡೆಯಬೇಕು.ಈ ಹೋರಾಟಕ್ಕೆ ಮಣಿಯದಿದ್ದರೆ ಮುಂದಿನ ಅಧಿವೇಶನದಲ್ಲಿ ದೊಡ್ಡ ಮಟ್ಟದ ಹೋರಾಟ ಮಾಡಬೇಕಾಗುತ್ತದೆ. ನಮ್ಮ ಪಂಚಮಸಾಲಿ ಸಮುದಾಯಕ್ಕೆ ಮೀಸಲಾತಿ ಸಿಗಬೇಕೆಂದು ರಾಜ್ಯದ ಎಲ್ಲ ಸಮಾಜದವರ ಸಹಕಾರ ಕೂಡಾ ಇದೆ ಎಂದು ಕೂಡಲ ಸಂಗಮ ಜಗದ್ಗುರು ಶ್ರೀ ಬಸವ ಜಯಮೃತ್ಯುಂಜಯ ಶ್ರೀಗಳ ಮೂಡಲಗಿಯ ನೇಗಿಲಯೋಗಿ ಫಾರ್ಮ್ ಹೌಸನಲ್ಲಿ ಪತ್ರಿಕಾ ಗೋಷ್ಟಿ ನಡೆಸಿ ಹೇಳಿದರು.
     ಪತ್ರಿಕಾ ಗೋಷ್ಠಿಯಲ್ಲಿ ಮೂಡಲಗಿ ತಾಲೂಕಾ ನ್ಯಾಯವಾದಿಗಳ ಸಂಘದ ಅಧ್ಯಕ್ಷರಾದ ಆರ್.ಆರ್.ಬಾಗೋಜಿ, ಮೂಡಲಗಿ ತಾಲೂಕಾ ನ್ಯಾಯವಾದಿಗಳ ಕಾರ್ಯದರ್ಶಿ ಎಸ್.ಎಸ್.ಕೌಜಲಗಿ, ನ್ಯಾಯವಾದಿ ಎಸ್‌.ಎಸ್.ತುಪ್ಪದ, ಬೆಳಗಾವಿ ಜಿಲ್ಲಾ ಪಂಚಮಸಾಲಿ ಕಾರ್ಯಾಧ್ಯಕ್ಷ ನಿಂಗಪ್ಪ ಪಿರೋಜಿ, ಭೀಮಪ್ಪ ಹಂದಿಗುಂದ ‌ಉಪಸ್ಥಿತರಿದ್ದರು.
  ಯುವ ಘಟಕದ ಅಧ್ಯಕ್ಷ  ಸಂಗಮೇಶ ಕೌಜಲಗಿ ಸ್ವಾಗತಿಸಿದರು. ಶೇಖರ ತೇಲಿ ನಿರೂಪಿದರು ಮತ್ತು ಹೊಳೆಪ್ಪ ಶಿವಾಪೂರ ವಂದಿಸಿದರು.
- Advertisement -

LEAVE A REPLY

Please enter your comment!
Please enter your name here

- Advertisement -

Latest News

ಸಮುದ್ರ ವಿಹಾರ ತಂದಿತು ಜೀವಕ್ಕೆ ಕುತ್ತು; ನೋಡನೋಡುತ್ತಲೇ ಮುಳುಗಿದ ಬೋಟ್

ಗೋವಾದಂಥ ಪ್ರವಾಸಿ ತಾಣಗಳಿಗೆ ಪ್ರವಾಸಿಗರು ಭೇಟಿ ಕೊಟ್ಟಾಗ ಅಲ್ಲಿನ ಸಮುದ್ರದಲ್ಲಿ ವಿಹಾರ ಮಾಡುವುದು ಅತ್ಯಂತ ಹೆಚ್ಚಿನ ಬೇಡಿಕೆಯಾಗಿರುತ್ತದೆ. ಹಾಗೆಯೇ ಗೋವಾದಲ್ಲಿ ನಡೆದಿದೆಯೆಂದು ಹೇಳಲಾದ ಬೋಟ್ ಪಯಣ ಅದರ...
- Advertisement -

More Articles Like This

- Advertisement -
close
error: Content is protected !!
Join WhatsApp Group