ಲಿಂಗ ಪೂಜೆಯೊಂದಿಗೆ ಪಂಚಮಸಾಲಿ ಹೋರಾಟ ಪುನಾರಂಭ – ಮೃತ್ಯುಂಜಯ ಶ್ರೀಗಳು

Must Read

ಮೂಡಲಗಿ: ಪಂಚಮಸಾಲಿ ಸಮಾಜಕ್ಕೆ 2ಎ ಮೀಸಲಾತಿಗೆ ಒತ್ತಾಯಿಸಿ ಬೆಳಗಾವಿಯ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಾಮುಹಿಕವಾಗಿ ಇಷ್ಟಲಿಂಗ ಪೂಜೆ ಮಾಡಿ ಹೋರಾಟಕ್ಕೆ ಚಾಲನೆ ನೀಡಲಾಗುವುದು. ಆದಷ್ಟು ಬೇಗಾ ಇಷ್ಟಲಿಂಗ ಪೂಜೆ ಯಾವಾಗ ಮಾಡಬೇಕು ಎಂಬುದು ನಿರ್ಧರಿಸಲಾಗುವುದು ಎಂದು ಕೂಡಲಸಂಗಮ ಪಂಚಮಸಾಲಿ ಪೀಠಾಧ್ಯಕ್ಷ ಜಯಮೃತ್ಯುಂಜಯ ಸ್ವಾಮೀಜಿ ಹೇಳಿದರು.

ಗುರುವಾರಂದು ಪಟ್ಟಣದ ಈರಣ್ಣ ಗುಡಿಯ ಸಭಾ ಮಂಟಪದಲ್ಲಿ ಮೂಡಲಗಿ ತಾಲೂಕಾ ಪಂಚಮಸಾಲಿ ಸಮಾಜದ ಮುಖಂಡರ ಸಭೆ ನಡೆಸಿ ಮಾತನಾಡಿದ ಅವರು, ಹಿಂದಿನ ಸರ್ಕಾರ ಮೀಸಲಾತಿ 2ಡಿ ಎಂದು ನೀಡಿದ್ದರು. ನಮಗೆ 2ಎ ಮೀಸಲಾತಿ ಬೇಕಾಗಿದೆ. ಇಲ್ಲಿಯವರೆಗೆ ನಮ್ಮ ಸಮಾಜಕ್ಕೆ ನ್ಯಾಯ ಸಿಕ್ಕಿಲ್ಲ. ಈಗಿನ ಸಿಎಂ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಅಧಿವೇಶನ ಮುಗಿದ ಬಳಿಕ ಚರ್ಚಿಸಿ ಮೀಸಲಾತಿ ನೀಡಲು ಕ್ರಮ ಕೈಗೊಳ್ಳುವ ಭರವಸೆ ನೀಡಿತ್ತು. ಆದರೆ ಅಧಿವೇಶನ ಮುಗಿದು ಒಂದೂವರೆ ತಿಂಗಳು ಕಳೆದರೂ ಅದರ ಬಗ್ಗೆ ಚರ್ಚೆಗೆ ಅವಕಾಶ ನೀಡಿಲ್ಲ. ಮತ್ತು ನಮ್ಮ ಲಿಂಗಾಯತ ಸಮಾಜದ ಎಲ್ಲ ಒಳಪಂಗಡಗಳನ್ನು ಕೇಂದ್ರದಲ್ಲಿ ಒಬಿಸಿಗೆ ಸೇರಿಸುವಂತೆ ರಾಜ್ಯ ಸರ್ಕಾರ ಶಿಫಾರಸು ಮಾಡಬೇಕು ಎಂದು ಆಗ್ರಹಿಸಿ ಮತ್ತೆ ಹೋರಾಟ ಮಾಡುವುದು ಅನಿವಾರ್ಯವಾಗಿದೆ ಎಂದರು.

ಪಂಚಮಸಾಲಿ ಸಮಾಜದ ಸಂಘಟನೆಯ ಬೆಳಗಾವಿ ಜಿಲ್ಲಾಕಾರ್ಯಾಧ್ಯಕ್ಷ ನಿಂಗಪ್ಪ ಪಿರೋಜಿ ಮಾತನಾಡಿ, ಪ್ರತಿ ತಾಲೂಕಿನಿಂದ ಪಂಚಮಸಾಲಿ ಸಮಾಜದ ಮುಖಂಡರನ್ನು ಹೋರಾಟಕ್ಕೆ ಆಹ್ವಾನಿಸಿ ಸಮಾಜದ ಶಕ್ತಿಯನ್ನು ತೋರಿಸಿ ಮೀಸಲಾತಿಯನ್ನು ಪಡೆದುಕೊಳ್ಳುತ್ತೇವೆ. ಈ ಹಿಂದೆ ಇದ್ದ ಬಿಜೆಪಿ ಸರ್ಕಾರ ನಮ್ಮ ಹೋರಾಟಕ್ಕೆ ಮಣಿದು 2ಡಿ ಮೀಸಲಾತಿ ನೀಡಿತ್ತು. ಅದು ಬೇಡವೆಂದು ತಡೆಗಾಗಿ ಕೋರ್ಟ ಮೆಟ್ಟಿಲೇರಿದ್ದೆವು. ನಮಗೆ 2ಎ ಮೀಸಲಾತಿ ಬೇಕಾಗಿದ್ದು ಈಗಿನ ಕಾಂಗ್ರೇಸ್ ಸರ್ಕಾರ ಮನಸ್ಸು ಮಾಡಿದರೆ ಅದನ್ನು ತೆರವುಗೊಳಿಸಿ ಮೀಸಲಾತಿ ನೀಡುವ ಎಲ್ಲಾ ಅವಕಾಶಗಳಿವೆ ಅದನ್ನು ಮಾಡಿಕೊಡಬೇಕೆಂದು ಸರ್ಕಾರಕ್ಕೆ ಮನವಿ ಮಾಡುತ್ತೇವೆ. ಈ ಹೋರಾಟವು ನಿಪ್ಪಾಣಿಯಿಂದ ಪ್ರಾರಂಭವಾಗಿ ಸಮಾಜಕ್ಕೆ ಮೀಸಲಾತಿ ದೊರೆಯುವವರೆಗೂ ರಾಜ್ಯಾದ್ಯಂತ ಮುಂದುವರೆಯಲಿದೆ ಎಂದರು.

ಈ ಸಂದರ್ಭದಲ್ಲಿ ಬೆಂಗಳೂರ ದ್ರಾಕ್ಷಿ ಮತ್ತು ವೈನ್ ಮಹಾಮಂಡಳಿಯ ಅಧ್ಯಕ್ಷ ಎಮ್ ಎಸ್ ರುದ್ರಗೌಡರ, ಜಮಖಂಡಿ ತಾಲೂಕಿನ ಸಮಾಜದ ಮುಖಂಡ ಸುಭಾಷ ಕೊಪ್ಪದ, ಸಮಾಜದ ತಾಲೂಕಾ ಯುವ ಘಟಕದ ಅಧ್ಯಕ್ಷ ಸಂಗಮೇಶ ಕೌಜಲಗಿ, ಮೀಸಲಾತಿ ಹೋರಾಟ ಸಮಿತಿಯ ತಾಲೂಕಾಧ್ಯಕ್ಷ ಮಲ್ಲು ಗೋಡಿಗೌಡರ ಹಾಗೂ ತಾಲೂಕಿನ ಪ್ರತಿಯೊಂದು ಹಳ್ಳಿಗಳಿಂದ ಸಮಾಜದ ಮುಖಂಡರು ಭಾಗಿಯಾಗಿದ್ದರು.

Latest News

ಅಪ್ಪಟ ದೇಸಿ ಪ್ರತಿಭೆ ಡಾ ಸಾವಿತ್ರಿ ಕಮಲಾಪೂರ

ಡಾ. ಸಾವಿತ್ರಿ ಕಮಲಾಪುರ ಅವರು ಬಸವ ತಿಳಿವಳಿಕೆ ಮತ್ತು ಸಂಶೋಧನ ಕೇಂದ್ರದ ಆಜೀವ ಸದಸ್ಯರು ಮತ್ತು ದತ್ತಿ ದಾಸೋಹಿಗಳು. ತಮ್ಮ ಇಬ್ಬರು ಸಹೋದರರನ್ನೂ ಸಹ ಆಜೀವ...

More Articles Like This

error: Content is protected !!
Join WhatsApp Group