spot_img
spot_img

ಗುರ್ಲಾಪೂರ ಗ್ರಾಮದ ಪಂಚಮಸಾಲಿ ಪ್ರತಿಜ್ಞಾ ಕಾರ್ಯಕ್ರಮ

Must Read

ಗುರ್ಲಾಪೂರ – ಲಿಂಗಾಯತ ಪಂಚಮಸಾಲಿ ಸಮಾಜಕ್ಕೆ 2ಎ ಮೀಸಲಾತಿ ನೀಡುವಂತೆ ಎಲ್ಲರೂ  ಮತ್ತೊಮ್ಮೆ  ಒಗ್ಗಟ್ಟಾಗಿ  ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಒತ್ತಡ ಹಾಕೋಣ ಎಂದು  ಕೂಡಲಸಂಗಮದ ಜಯ ಮೃತ್ಯುಂಜಯ ಸ್ವಾಮೀಜಿ ಹೇಳಿದರು.

ಅವರು ಗುರ್ಲಾಪೂರ ಗ್ರಾಮದ ಸಹಕಾರಿ ಬಸವಜ್ಯೋತಿ ಕಲ್ಯಾಣ ಮಂಟಪದಲ್ಲಿ ನಡೆದ ಪಂಚಮಸಾಲಿ ಪ್ರತಿಜ್ಞಾ ಪಂಚಾಯತ ಹೋರಾಟ ಕಾರ್ಯಕ್ರಮ ಹೋರಾಟದ ಕಾರ್ಯಕ್ರಮವನ್ನು ಜ್ಯೋತಿ ಬೆಳಗಿಸುವ ಮುಖಾಂತರ ಉದ್ಘಾಟಿಸಿ ಮಾತನಾಡಿ, ನಮ್ಮ ಸಮಾಜದ ಮಕ್ಕಳಿಗೆ ಇವತ್ತು ಶಿಕ್ಷಣ ಹಾಗೂ ಉದ್ಯೋಗದ ದೃಷ್ಟಿಯಿಂದ ಮೀಸಲಾತಿ ಅನಿವಾರ್ಯವಾಗಿದೆ  ಎಂದರು.

ಗುರ್ಲಾಪೂರ ಗ್ರಾಮದ ಪಂಚಮಸಾಲಿ ಸಮಾಜದವರು ನಾವು ಕರೆದರೆ ಹೋರಾಟಕ್ಕೆ ಮುಂಚೂಣಿಯಲ್ಲಿದ್ದು ಹೋರಾಟಕ್ಕೆ ಶಕ್ತಿ ತುಂಬಿದಂತಾಗುತ್ತದೆ ಎಂದು ಹೇಳಿದ್ದರು.

ಕಾರ್ಯಕ್ರಮದಲ್ಲಿ ಪಂಚಮಸಾಲಿ ಜಿಲ್ಲಾ ಅಧ್ಯಕ್ಷ ನಿಂಗಪ್ಪಾ ಫಿರೋಜಿ ಮಾತನಾಡಿ, ಸಮಾಜ ಅಂತಾ ಬಂದಾಗ ಯಾವದೇ ಪಕ್ಷ ಇರಲ್ಲಿ ಗುರುಗಳು ಕರೆದಾಗ ಪಕ್ಷಾತೀತವಾಗಿ ಬೆಂಬಲ ವ್ಯಕ್ತಪಡಿಸೋಣ ಎಂದು ಹೇಳಿದರು.

ಎಸ್.ಎಮ್.ಇಟನಾಳ ಮಾತನಾಡಿ,  ಪಂಚಮಸಾಲಿ 2ಎ ಮೀಸಲಾತಿ ಹೋರಾಟ ಮಾಡಲು ನಮ್ಮ ಬೆಂಬಲವಿದೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ಸಂಗಮೇಶ ಕೌಜಲಗಿ, ಕಲ್ಮೇಶ ಗೊಕಾಕ, ಎ.ಬಿ ಪಾಟೀಲ  ರಾಮನಗೌಡ ಪಾಟೀಲ, ಬಿ.ಸಿ.ಮುಗಳಖೋಡ, ಡಿ.ಎ.ಮುಗಳಖೋಡ ಎಮ್.ಎಮ್.ಮುಗಳಖೋಡ, ಎಸ್.ಕೆ.ಕೌಜಲಗಿ, ಮಲ್ಲು ಗೋಡಿಗೌಡರ ಕೆ.ಬಿ.ಮುಗಳಖೋಡ,  ಎಸ್‍ ಎಮ್  ಮುಗಳಖೋಡ, ಎಸ್.ಎಸ್. ಮುಗಳಖೋಡ, ಆಯ್. ವಾಯ್. ಮುಗಳಖೋಡ, ಮಲ್ಲೇಶ ಮುಗಳಖೋಡ, ಲಕ್ಞಣ ಗೌರಾಣಿ, ಶ್ರೀಶೈಲ ಮುಗಳಖೋಡ, ಅರ್ ಬಿ.ನೇಮಗೌಡರ, ಮಹಾದೇವ ಮಕ್ಕುಂದ ಹಾಗೂ ಪಂಚಮಸಾಲಿಯ ಸಮಾಜದ ಮುಖಂಡರು ಕಾರ್ಯಕರ್ತರು ಉಪಸ್ಥಿತರಿದ್ದರು.

ಆರಂಭದಲ್ಲಿ ಎಸ್.ಎಮ್.ಇಟನಾಳ ಸ್ವಾಗತಿಸಿದರು.ಮಹಾದೇವ ಕುಲಗೋಡ ನಿರೂಪಿಸಿ ವಂದಿಸಿದರು.

- Advertisement -
- Advertisement -

Latest News

ನಿಪ್ಪಾಣಿ ನಗರಸಭೆಯ ಮೇಲಿನ ಭಗವಾಧ್ವಜ ತೆರವುಗೊಳಿಸಲು ಗಡಾದ ಆಗ್ರಹ

ಮೂಡಲಗಿ - ಸುಮಾರು ೩೧ ವರ್ಷಗಳಿಂದ ಬೆಳಗಾವಿಯ ನಿಪ್ಪಾಣಿ ನಗರಸಭೆಯ ಕಟ್ಟಡದ ಮೇಲೆ ಅನಧಿಕೃತವಾಗಿ ಹಾರಾಡುತ್ತಿರುವ ಭಗವಾ ಧ್ವಜವನ್ನು ತೆರವುಗೊಳಿಸಬೇಕು ಎಂದು ಮನವಿ ಸಲ್ಲಿಸಿ ಒಂದು...
- Advertisement -

More Articles Like This

- Advertisement -
close
error: Content is protected !!