ನಿತ್ಯ ದೇವರ ಹುಂಡಿಗೆ ಚಿಲ್ಲರೆ ಹಣ, ಕಷ್ಟ ಅನುಭವಿಸುವವರು ದೇಶದ ಜನ

Must Read

ಸಂಚಾರಿ ವಿಜಯ್ ಬ್ರೇನ್ ಡೆಡ್ ; ನಾಳೆ “ನಿಧನ” ರಾಗಲಿರುವ ನಟ. ವಿಚಿತ್ರ ಪರಿಸ್ಥಿತಿ

ಬೆಂಗಳೂರು - ಯುವ ನಟ, ರಾಷ್ಟ್ರ ಪ್ರಶಸ್ತಿ ವಿಜೇತ ಕಲಾವಿದ ಸಂಚಾರಿ ವಿಜಯ್ ಅಪಘಾತದ ಕಾರಣದಿಂದಾಗಿ ಬ್ರೇನ್ ಡೆಡ್ ಆಗಿ ನಿಧನ ಹೊಂದಿದರೆಂದು ಹೇಳುವ ವಿಚಿತ್ರ...

ಜನ ಸಾಮಾನ್ಯರ ತುರ್ತು ಸೇವೆಗಾಗಿ ಅರಭಾವಿ ಕ್ಷೇತ್ರದ ಎಲ್ಲ ಪಿಎಚ್‍ಸಿಗಳಿಗೆ ರಕ್ಷಾ ಕವಚ ವಾಹನ ಸೌಲಭ್ಯ : ಶಾಸಕ ಬಾಲಚಂದ್ರ ಜಾರಕಿಹೊಳಿ

ಮೂಡಲಗಿಯಲ್ಲಿ ಟಾಸ್ಕ್ ಫೋರ್ಸ್ ಸಭೆ ಮೂಡಲಗಿ : ಕೋವಿಡ್ ಎರಡನೆಯ ಅಲೆಯ ವಿರುದ್ದ ಹೋರಾಟ ಮಾಡಿ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುತ್ತಿರುವ ಕೊರೋನಾ ವಾರಿಯರ್ಸ್‌ ಗಳ ಕಾರ್ಯ...

ಪುರಸಭೆಯ ಸಾಮಾನ್ಯ ಸಭೆ ಕರೆಯಲು ಮನವಿ

ಸಿಂದಗಿ: ಪಟ್ಟಣದ ಹಲವು ವಾರ್ಡುಗಳಲ್ಲಿ ನೀರಿನ ಸಮಸ್ಯೆ, ಗಟಾರಗಳ ಸಮಸ್ಯೆ ಸೇರಿದಂತೆ ಹಲವಾರು ಸಮಸ್ಯೆಗಳು ಉಲ್ಬಣ ಸೇರಿದಂತೆ ಹಲವಾರು ವಿಷಯಗಳ ಕುರಿತು ಚರ್ಚಿಸಲು ಸಾಮಾನ್ಯ ಸಭೆ...

ಭಾರತೀಯ ಸಂಸ್ಕೃತಿಯಲ್ಲಿ ಜನ ದೇವರನ್ನು ನಂಬಿದಷ್ಟು ಯಾವ ಜನಾಂಗವನ್ನು ಅಷ್ಟು ನಂಬುವದಿಲ್ಲ. ಸೃಷ್ಟಿಕರ್ತನಾದ ಶಿವನನ್ನು ಭಕ್ತಿಯಿಂದ ಆರಾಧಿಸುವವರೇ ಹೆಚ್ಚು. ನಿಸರ್ಗದಲ್ಲಿರುವ ಪಂಚ ಮಹಾಭೂತಗಳನ್ನು ಬೇರೆ ಬೇರೆ ರೂಪ ಅವತಾರಗಳಲ್ಲಿ ಮೂರ್ತಿಗಳನ್ನು ಸ್ಥಾಪಿಸಿ ದೇಶದ ತುಂಬೆಲ್ಲಾ ಚಿಕ್ಕ ಚಿಕ್ಕ ಗುಡಿಗಳಿಂದ ಹಿಡಿದು ಲಕ್ಷಾಂತರ ದೊಡ್ಡ ದೊಡ್ಡ ದೇವಾಲಯಗಳನ್ನು ಕಾಣುತ್ತೇವೆ. ಜನರ ಭಕ್ತಿಯಿಂದ ಕಲ್ಲು ದೇವರಾಗಿ ಜನರ ಇಚ್ಛಾಶಕ್ತಿಯನ್ನು ನೀಗಿಸುತ್ತದೆ ಎಂಬ ನಂಬಿಗೆ ಸಾವಿರ ಸಾವಿರ ವರ್ಷಗಳಿಂದ ನಡೆದುಕೊಂಡು ಬಂದಿದೆ.

ಈ ಅಪಾರವಾದ ನಂಬಿಗೆಯಿಂದ ಜನರು ದೇವರಿಗೆ ಏನಾದರೂ ಅರ್ಪಿಸೋಣ ಎನ್ನುವ ಮನೋಭಾನೆಯಿಂದ ವಸ್ತುಗಳನ್ನು ಧನ-ಕನಕಗಳನ್ನು ಅರ್ಪಿಸುವುದು ಸಹಜವಾದ ಭಕ್ತಿ ಭಾವದ ಸಂಕೇತ.

ದೇಶದಲ್ಲಿರುವ ಕೋಟಿ ಕೋಟಿ ದೇವಾಲಯಗಳ ಮುಂದೆ ಭಕ್ತಿಯ ಕಾಣಿಕೆಯ ಪೆಟ್ಟಿಗೆ ಇರುವುದು ಸಹಜ ಆ ಹುಂಡಿಯಲ್ಲಿ ಚಿಲ್ಲರೆ ಹಣ 1ರೂ, 2ರೂ, 5ರೂ, 50ರೂ, 100ರೂ ಕಾಣಿಕೆ ಹಾಕುವುದನ್ನು ಭಾರತೀಯರು ಭಕ್ತಿ ಭಾವವನ್ನು ಮೈಗಳವಡಿಸಿಕೊಂಡಿದ್ದಾರೆ.

- Advertisement -

ಈ ರೀತಿ ಅನೇಕ ಹಳ್ಳಿ ಹಳ್ಳಿಗಳಲ್ಲಿರುವ ದೇವರ ಗುಡಿಗಳಿಂದ ಹಿಡಿದು ಮಹಾನ್ ದೇವ ಮಂದಿರಗಳಲ್ಲಿ ಚಿಲ್ಲರ ಹಣದ ರಾಶಿ ಹುಂಡಿಯಲ್ಲಿ ಬಂದು ಬೀಳುತ್ತದೆ. ಭಾರತೀಯರ ಹಣದ ವ್ಯವಹಾರ ಸುಗಮವಾಗಿ ಸಾಗಲು ಹಾಗೂ ರಾಷ್ಟ್ರ ಅಭಿವೃದ್ದಿ ಹೊಂದಲು ಕೋಟಿ ಕೋಟಿ ಚಿಲ್ಲರೆ ಹಣ ಮತ್ತು ನೊಟುಗಳನ್ನು ಸರ್ಕಾರ ಮುದ್ರಿಸುತ್ತಲೇ ಇದೆ ಆದಾಗ್ಯೂ ಇಂದಿನ ದಿನಮಾನಗಳಲ್ಲಿ ಚಿಲ್ಲರೆ ಹಣದ ಕೊರತೆ ಎಲ್ಲ ರಂಗಗಳಲ್ಲಿಯೂ ಎದ್ದು ಕಾಣುತ್ತಿದೆ.

ಸಾರಿಗೆ ಸಂಸ್ಥೆಯ ಒಬ್ಬ ಕಂಡಕ್ಟರ್‍ರವರ ಮನಹೊಕ್ಕು ಚಿಂತನೆಗೈದರೆ ಅವನ ಬಾಳಿನ ಚಿಂತೆಗಿಂತ ನಾಳೆ ಕರ್ತವ್ಯದಲ್ಲಿ ಬರುವ ಚಿಲ್ಲರೆ ಹಣದ ಬಗ್ಗೆ ಚಿಂತಿಸುತ್ತಾನೆ. ಎಲ್ಲಾ ಪ್ರಯಾಣಿಕರು 500, 200, 100 ನೋಟು ಕೊಡುವುದರಿಂದ ಚಿಲ್ಲರ ಹಣ ಕೊಡಲೇಬೇಕು. ಚಿಲ್ಲರೆಯಿಲ್ಲವೆಂದು ಟಿಕೆಟ್ ಹಿಂದೆ ಬರೆದುಕೊಡುವುದು, ಊರು ಬಂದ ನಂತರ ಚೀಟಿ ನೋಡಿ ಚಿಲ್ಲರ ಕೊಡುವುದು, ಚಿಲ್ಲರೆ ಹಣವಿಲ್ಲವೆಂದಾಗ ಇಬ್ಬರನ್ನು ಜೋಡಿಸಿ ಹಣ ಹೊಂದಾಣಿಕೆ ಮಾಡುವುದು ಸಹಜವಾದ ಕಾರ್ಯವಾಗಿದೆ.

ಕೆಲವರು ಅವಸರದಲ್ಲಿ ಮರೆತುಹೋಗುವುದು, ಚಿಲ್ಲರೆಗೋಸ್ಕರ ಜಗಳ ಮಾತು ಮಾತು ಬೆಳೆದು ಬಸ್ಸು ಪೋಲಿಸ್ ಕಚೇರಿಯತ್ತ ಮುಖ ಮಾಡುವುವುದನ್ನು ನೋಡಿದ್ದೇವೆ. ಪ್ರಾಮಾಣಿಕ ಕೆಲವು ನಿರ್ವಾಹಕರು ತಾವೇ ಕೇಳಿ ಪ್ರಯಾಣಿಕರಿಗೆ ಹಣ ಕೊಟ್ಟು ಸಹಕರಿಸುವುದು ಉಂಟು ಹೀಗೆ ಕಂಡಕ್ಟರ್ ಬದುಕು ನಿವೃತ್ತಿ ಹೊಂದುವವರೆಗೂ ನಡೆಯುವ ಪ್ರಕ್ರಿಯೆಯಾಗಿದೆ.

ಇದಕ್ಕೆ ಶಾಶ್ವತ ಚಿಲ್ಲರೆ ಹಣದ ಪರಿಹಾರವಿಲ್ಲವೇ? ಅದೇ ರೀತಿ ಕಾಯಿಪಲ್ಲೆ ಮಾರುವ ಹೆಣ್ಣು ಮಕ್ಕಳೂ ಸಹ ಚಿಲ್ಲರೆ ಹಣ ಸಂಬಂಧ ಅನೇಕ ತೊಂದರೆಗಳಾಗುವುದನ್ನು ಕಾಣುತ್ತೇವೆ. ಕೆಲ ಹೆಣ್ಣುಮಕ್ಕಳು ಚಿಲ್ಲರೆ ಹಣದ ಸಲುವಾಗಿ ಒಂದಿಷ್ಟು ಸೌತೆಕಾಯಿ, ಮೆಣಸಿನಕಾಯಿ ಹಾಕಿ ವ್ಯವಹಾರವನ್ನು ಚಿಲ್ಲರೆ ಹಣಕ್ಕೆ ಸರಿಮಾಡುವುದುನ್ನು ದಿನನಿತ್ಯ ಕಾಣುತ್ತೇವೆ.

ಅದೇ ರೀತಿ ಸಣ್ಣ ಸಣ್ಣ ವ್ಯಾಪಾರಿಗಳಾದ ಬೀಡಿ ಅಂಗಡಿಗಳು ಮೆಡಿಕಲ್ ಸ್ಟೋರ್ (ಚಿಲ್ಲರೆ ಹಣ ಇರದಿದ್ದರೆ ಚಾಕಲೇಟ್‍ಗಳಿಗೆ ಹೊಂದಾಣಿಕೆ) ಬೀದಿ ಬದಿ ವ್ಯಾಪಾರ ಮಾಡುವ ಅನೇಕ ಜನಾಂಗ ಚಿಲ್ಲರೆ ಹಣದ ತೊಂದರೆಯಿಂದ ಬಳಲಿ ಬೆಂಡಾಗಿದ್ದಾರೆ. ಅವರ ಕಷ್ಟ ಕಾರ್ಪಣ್ಯಗಳಿಗೆ ಸ್ಪಂಧಿಸುವವರು ಯಾರು?

ನಮ್ಮ ಭಾರತೀಯ ಸಂಪ್ರದಾಯಸ್ತರು ತಮ್ಮ ಮನೆಯ ದೇವರ ಹೆಸರಿನಲ್ಲಿ ಕಾಣಿಕೆಯ ಪೆಟ್ಟಿಗೆಯನ್ನಿಟ್ಟು ದುಡಿದ ಹಣದಲ್ಲಿ ತಮ್ಮ ದೇವರ ಅರ್ಪಣೆಗೋಸ್ಕರ ದೇವರ ಡಬ್ಬಿಯಲ್ಲಿ ಚಿಲ್ಲರೆ ಹಣ ಹಾಕುತ್ತಾ ಆ ಊರಿನ ಜಾತ್ರೆ ನೆರವೇರುತ್ತಿರುವಾಗ ಅರ್ಪಣೆ ಮಾಡುತ್ತಾರೆ. ಇನ್ನು ಕೆಲವರು ಒಂದು ವರ್ಷದ ನಂತರ ಕಾಣಿಕೆ ಹೊರಗೆ ತೆಗೆಯುವರು, ಕೆಲವರು ಮೂರು ವರ್ಷ, ಕೆಲವರು ಹನ್ನೆರಡು ವರ್ಷ ಚಿಲ್ಲರೆ ಹಣ ದೇವರ ಹುಂಡಿಯಲ್ಲಿ ನಿಷ್ಕ್ರಿಯವಾಗಿ ಚಲಾವಣೆ ಇಲ್ಲದ ಹಣವಾಗಿ ವರ್ಷದ ವರೆಗೆ ವ್ಯಾಪಾರ ವ್ಯವಹಾರದಲ್ಲಿ ತೊಂದರೆ ಆಗುವುದನ್ನು ಕಾಣುತ್ತೇವೆ.

ಮನುಷ್ಯರೇ ದೇವರ ಹೆಸರಿನಲ್ಲಿ ಚಿಲ್ಲರದ ಅಭಾವವನ್ನು ಸೃಷ್ಟಿ ಮಾಡಿದಂತಾಗುತ್ತದೆ. ಆದ್ದರಿಂದ ಕೇಂದ್ರ ಸರ್ಕಾರ/ಭಾರತೀಯ ರಿಸರ್ವ ಬ್ಯಾಂಕ್ ಹೊಸ ಕಾಯ್ದೆ ಕಾನೂನುಗಳನ್ನು ಜಾರಿಗೆ ತಂದು ದೇವಾಲಯಗಲ್ಲಿ ಸಂಗ್ರಹವಾದ ಚಿಲ್ಲರೆ ಹಣವನ್ನು, ನೋಟುಗಳನ್ನಾಗಿ ಪರಿವರ್ತಿಸಿ ಧರ್ಮಾಧಿಕಾರಿಗಳ/ಅರ್ಚಕರ ಹೆಸರಿನ ಪಾಸ್‍ಬುಕ್ಕಿನಲ್ಲಿ ಜಮಾಯಿಸಬೇಕು. ಕೆಲವು ಶ್ರೀಮಂತ ದೇವಾಲಯಗಳ ಹಣವನ್ನು 3, 6, 12 ತಿಂಗಳಿಗೊಮ್ಮೆ ಬ್ಯಾಂಕಿನಲ್ಲಿ ಜಮಾ ಮಾಡುತ್ತಾ ಹೋದರೆ ಚಿಲ್ಲರೆ ಹಣದ ಅಭಾವ ತಾನಾಗಿಯೇ ದೂರವಾಗಿ ಜನರ ವ್ಯವಹಾರವು ಸುಲಭವಾಗುತ್ತದೆ. ರಾಷ್ಟ್ರವು ಪ್ರಗತಿಯತ್ತ ಹೆಜ್ಜೆ ಹಾಕುತ್ತಾ ಹೋಗುತ್ತದೆ.ಪರಶುರಾಮ. ಮಡಿವಾಳರ
ವಿಶ್ರಾಂತ ಪ್ರಾಧ್ಯಾಪಕರು, ಸಿಂದಗಿ
ಮೋ:9606562488

- Advertisement -
- Advertisement -

Latest News

ಸಂಚಾರಿ ವಿಜಯ್ ಬ್ರೇನ್ ಡೆಡ್ ; ನಾಳೆ “ನಿಧನ” ರಾಗಲಿರುವ ನಟ. ವಿಚಿತ್ರ ಪರಿಸ್ಥಿತಿ

ಬೆಂಗಳೂರು - ಯುವ ನಟ, ರಾಷ್ಟ್ರ ಪ್ರಶಸ್ತಿ ವಿಜೇತ ಕಲಾವಿದ ಸಂಚಾರಿ ವಿಜಯ್ ಅಪಘಾತದ ಕಾರಣದಿಂದಾಗಿ ಬ್ರೇನ್ ಡೆಡ್ ಆಗಿ ನಿಧನ ಹೊಂದಿದರೆಂದು ಹೇಳುವ ವಿಚಿತ್ರ...
- Advertisement -

More Articles Like This

- Advertisement -
close
error: Content is protected !!