spot_img
spot_img

ಪೋಷಕರು ಮಕ್ಕಳಿಗೆ ಪೌಷ್ಠಿಕ ಆಹಾರ ನೀಡಬೇಕು – ಡಾ. ಚೇತನ

Must Read

spot_img
- Advertisement -

ಸಿಂದಗಿ; ಮಕ್ಕಳಲ್ಲಿ ಸರಿಯಾದ ಬೆಳವಣಿಗೆ ಆಗಬೇಕಾದರೆ ಪಂಚೇಂದ್ರಿಯಗಳ ಸರಿಯಾದ ಬೆಳವಣಿಗೆ ಆಗಬೇಕು. ಇದಕ್ಕೆ ಪೂರಕವಾಗಿ ಪೋಷಕರು ಮಕ್ಕಳಿಗೆ ಪೌಷ್ಠಿಕ ಆಹಾರ ಕೊಡಬೇಕು, ಜಂಕ್ ಆಹಾರ ಕೊಡಬಾರದು, ಮೊಬೈಲನ್ನು ಕೊಡಬಾರದು ಮತ್ತು ಮಕ್ಕಳನ್ನು ಸುರಕ್ಷಿತವಾಗಿ ರಕ್ಷಿಸಬೇಕು ಎಂದು ಬೆಂಗಳೂರಿನ ಖ್ಯಾತ ಮಕ್ಕಳ ತಜ್ಞರಾದ ಡಾ. ಚೇತನ ಹೇಳಿದರು.

ಪಟ್ಟಣದ ಸಂಗಮ ಸಮಗ್ರ ಗ್ರಾಮೀಣ ಅಭಿವೃದ್ಧಿ ಕೇಂದ್ರ ಸಿಂದಗಿ ಮತ್ತು ಅಸ್ಟರ್ ಡಿ ಎಮ್ ಫೌಂಡೇಷನ್ ಇವರ ಸಹಯೋಗದೊಂದಿಗೆ ವ್ಹೀಲ್‌ಚೆರ್ ಹಾಗೂ ಸಸಿಗಳ ವಿತರಣಾ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ರೋನಾಲ್ಡ್ರವರು ಅಸ್ಟರ್ ಡಿ ಎಮ್ ಫೌಂಡೇಷನ್ ಕೊಚ್ಚಿ, ಇವರ ಸಿ.ಎಸ್.ಆರ್ ನಿಧಿಯಿಂದ ಬಿಜಾಪುರ ಸಿ.ಎನ್.ಎಫ್.ಇ ಸಂಸ್ಥೆಯ ೨೬ ವಿಶೇಷ ಚೇತನರಿಗೆ, ದೇವರಹಿಪ್ಪರಗಿ ಜೆ.ಎಂ.ಜೆ ಸಂಸ್ಥೆಯ ೫ ವಿಶೇಷ ಚೇತನರಿಗೆ ಮತ್ತು ಸಂಗಮ ಸಂಸ್ಥೆಯ ೧೯ ವಿಶೇಷ ಚೇತನರಿಗೆ ವ್ಹೀಲ್ ಚೇರಗಳು ಮತ್ತು ೨೦೦೦ ಸಸಿಗಳನ್ನು ನೀಡಿದರು.

- Advertisement -

ಅಧ್ಯಕ್ಷತೆ ವಹಿಸಿದ ಸಂಗಮ ಸಮಗ್ರ ಗ್ರಾಮೀಣ ಅಭಿವೃದ್ಧಿ ಕೇಂದ್ರದ ನಿರ್ದೇಶಕ ಫಾದರ್. ಸಂತೋಷ್ ಮಾತನಾಡಿ ಅಸ್ಟರ್ ಡಿ ಎಮ್ ಸಂಸ್ಥೆಗೆ ಫಲಾನುಗಳ ಪರವಾಗಿ ಕೃತಜ್ಞತೆಯನ್ನು ಸಲ್ಲಿಸಿದರು.

ಕಾರ್ಯಕ್ರಮದಲ್ಲಿ ನವೀನ್ ಸೇಲ್ಸ್ ಡಿಪಾರ್ಟ್ಮೆಂಟ್, ಮಹಮ್ಮದ್ ರಿಜ್ವಾನ್ ಮಾರ್ಕೆಟಿಂಗ್, ವಿಕ್ರಮ್ ಸಿ.ಎಸ್.ಆರ್ ಉಸ್ತುವಾರಿ, ವಿಶೇಷ ಚೇತನರು ಮತ್ತು ಸ್ವ-ಸಹಾಯ ಸಂಘದ ಸದಸ್ಯರು ಭಾಗವಹಿಸಿದರು.
ಕಾರ್ಯಕ್ರಮವನ್ನು ಸಂವಿಧಾನ ಪೀಠಿಕೆ ಮೂಲಕ ಪ್ರಾರಂಭಿಸಲಾಯಿತು. ವಿಜಯ್ ಬಂಟನೂರು ನಿರೂಪಿಸಿದರು, ಮಹೇಶ್ ಚವಾಣ್ ಸ್ವಾಗತಿಸಿದರು. ಬಸವರಾಜ್ ಬಿಸನಾಳ್ ವಂದಿಸಿದರು.

- Advertisement -

LEAVE A REPLY

Please enter your comment!
Please enter your name here

- Advertisement -

Latest News

ನಾಗೂರಲ್ಲಿ ಕ್ಲಸ್ಟರ್ ಮಟ್ಟದ ಕಲಿಕಾ ಹಬ್ಬ

ಹುನಗುಂದ: ತಾಲೂಕಿನ ನಾಗೂರ ಗ್ರಾಮದ ಸರಕಾರಿ ಮಾದರಿ ಪ್ರಾಥಮಿಕ ಶಾಲೆಯಲ್ಲಿ ಕ್ಲಸ್ಟರ್ ಮಟ್ಟದ ಎಫ್ಎಲ್ಎನ್ ಮಕ್ಕಳ ಕಲಿಕಾ ಹಬ್ಬ ನಡೆಯಿತು. ಕ್ಲಸ್ಟರಿನ ಹನ್ನೆರಡು ಶಾಲೆಗಳಿಂದ ಆಗಮಿಸಿದ 100ಕ್ಕೂ...
- Advertisement -

More Articles Like This

- Advertisement -
close
error: Content is protected !!
Join WhatsApp Group