spot_img
spot_img

ವಿದ್ಯಾರ್ಥಿಗಳ ಜ್ಞಾನಾಸಕ್ತಿ ಬೆಳಸುವಲ್ಲಿ ಪಾಲಕರ ಪಾತ್ರ ಮಹತ್ವದಾಗಿದೆ : ಸತೀಶ ಬಿ. ಎಸ್.

Must Read

spot_img
- Advertisement -

ಮೂಡಲಗಿ : ವಿದ್ಯಾರ್ಥಿಗಳ ಜ್ಞಾನಾಸಕ್ತಿ ಬೆಳಸುವಲ್ಲಿ ಪಾಲಕರ ಪಾತ್ರ ಮಹತ್ವದಾಗಿದ್ದು. ಎಸ್.ಎಸ್.ಎಲ್.ಸಿ. ಹಾಗೂ ಪಿ.ಯು.ಸಿ. ಓದುವ ವಿದ್ಯಾರ್ಥಿಗಳಿಗೆ ಅವರ ಭವಿಷ್ಯ ರೂಪಿಸುವಲ್ಲಿ ಅತ್ಯಂತ ಮಹತ್ವದ ಹೆಜ್ಜೆಯಾಗಿದ್ದು ಪರೀಕ್ಷೆ ನಿಯಮಗಳು ಮತ್ತು ವಿಧಾನಗಳು ಬದಲಾಗಿ ಹೊಸ ನವೀನ ತಾಂತ್ರಿಕ ರೂಪಗಳನ್ನು ಪಡೆದುಕೊಳ್ಳುತ್ತಿವೆ ವಿದ್ಯಾರ್ಥಿಗಳು ಹೊಸವಿಧಾನದ ಪರೀಕ್ಷೆಗಳಿಗೆ ಹೊಂದುಕೊಳ್ಳುವುದು ಅಗತ್ಯವಾಗಿದೆ ಮತ್ತು ಪಾಲಕರು ಮಾನಸಿಕವಾಗಿ ನವೀನ ಪರೀಕ್ಷಾ ಪದ್ದತಿಗಳಿಗೆ ಹೊಂದಿಕೊಳ್ಳುವಂತೆ ತಮ್ಮ ಮಕ್ಕಳನ್ನು ಪೇರೇಪಿಸಲು ಪ್ರಯತ್ನಿಸಬೇಕು ಎಂದು ಮೂಡಲಗಿಯ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯದ ವಿಷಯ ಪರಿವೀಕ್ಷಕರಾದ ಸತೀಶ ಬಿ.ಎಸ್. ಹೇಳಿದರು.

ಪಟ್ಟಣದ ಆರ್.ಡಿ.ಎಸ್. ಪಿ.ಯು. ಕಾಲೇಜಿನಲ್ಲಿ ಹಮ್ಮಿಕೊಂಡಿರುವ ಪಿಯು ಕಾಲೇಜಿನ ಪಾಲಕರ ಸಭೆಯನ್ನು ಉದ್ದೇಶಿಸಿ ಮಾತನಾಡುತ್ತಾ ವಿದ್ಯಾರ್ಥಿಗಳಲ್ಲಿ ಜ್ಞಾನದ ಆಸಕ್ತಿ ಕಡಿಮೆಯಾಗಿದ್ದು ಮೊಬೈಲ್ ವ್ಯಾಮೋಹ ಹೆಚ್ಚಾಗಿದ್ದು ಪರೀಕ್ಷಾ ತಯಾರಿ ಇಲ್ಲದೇ ಇರುವುದು ಫಲಿತಾಂಶದ ಮೇಲೆ ಪರಿಣಾಮ ಬೀರುತ್ತದೆ ಉತ್ತಮ ಫಲಿತಾಂಶವನ್ನು ವಿದ್ಯಾರ್ಥಿಗಳು ಪಡೆಯಲು ಪಾಲಕರು ಮನೋಸ್ಥೈರ್ಯ ತುಂಬಿ ವಿದ್ಯಾರ್ಥಿಗಳ ಅಧ್ಯಯನಕ್ಕೆ ಆದ್ಯತೆ ನೀಡಬೇಕೆಂದರು.

ಪದವಿ ಕಾಲೇಜಿನ ಪ್ರಾಚಾರ್ಯ ಸತೀಶ್ ಗೋಟೂರೆ ಮಾತನಾಡಿ, ಪಾಲಕರು ಮಕ್ಕಳ ಕಾಳಜಿ ಜೊತೆಗೆ ಬದಲಾಗುತ್ತಿರುವ ಜೀವನ ಕ್ರಮಗಳನ್ನು ಹೇಳಿಕೊಡಬೇಕು ಅಲ್ಲದೇ ಪರೀಕ್ಷಾ ಫಲಿತಾಂಶ ಸುದಾರಣೆಯಲ್ಲಿ ಪಾಲಕರು ಮಕ್ಕಳ ಬಗ್ಗೆ ಕಾಳಜಿ ವಹಿಸಿ ಸಮೀಪಿಸುತ್ತಿರುವ ಪರೀಕ್ಷೆಗಳಿಗೆ ತಯಾರಿ ಮಾಡಲು ಕಾಲೇಜು ಉಪನ್ಯಾಸಕರ ಜೊತೆಗೆ ಪ್ರಯತ್ನಿಸಬೇಕೆಂದರು.

- Advertisement -

ಪಿಯು ಕಾಲೇಜಿನ ಪ್ರಾಚಾರ್ಯ ಶಿವಾನಂದ ಸತ್ತಿಗೇರಿ ಮಾತನಾಡಿ ಪಾಲಕರು ಮಕ್ಕಳ ದಿನನಿತ್ಯದ ಚಟುವಟಿಕೆಗಳನ್ನು ಗಮನಿಸುತ್ತಾ ಅವರ ಅಧ್ಯಯನಕ್ಕೆ ಪ್ರೋತ್ಸಾಹಿಸಿ ಪರೀಕ್ಷಾ ಭಯವನ್ನು ಹೋಗಲಾಡಿಸಿ ಪರೀಕ್ಷಾ ಸಿದ್ದತೆಗೆ ತಯಾರಾಗುವಂತೆ ತಂದೆ ತಾಯಿಗಳ ಪ್ರಯತ್ನಿಸಬೇಕು ಕಾಲೇಜು ಉಪನ್ಯಾಸಕರ ಪ್ರಯತ್ನಕ್ಕೆ ಪಾಲಕರ ಸಹಕಾರ ಅಗತ್ಯವಾಗಿದೆ ಎಂದರು.

ಅಧ್ಯಕ್ಷತೆಯನ್ನು ಸಂಸ್ಥೆಯ ಅಧ್ಯಕ್ಷರಾದ ಸಂತೋಷ ಪಾರ್ಶಿಯವರು ವಹಿಸಿಕೊಂಡಿದ್ದರು ಮುನ್ಯಾಳದ ಮಾಜಿ ಗ್ರಾಮಪಂಚಾಯತ ಸದಸ್ಯರಾದ ರಮೇಶ ಪಾಟೀಲ ಉಪನ್ಯಾಸಕರಾದ ಸಂಗಮೇಶ ಕುಂಬಾರ, ಗಂಗಾಧರ ಮನ್ನಾಪೂರ, ಸಂತೋಷ ಲಟ್ಟಿ. ಹಣಮಂತ ಚಿಕ್ಕೋಡಿ, ಸಿದ್ದಾರೂಢ ಬೆಳವಿ, ರವಿ ಕಟಗೇರಿ, ಮಾಯವ್ವಾ ಪೂಜೇರಿ, ವಾಣಿಶ್ರೀ ಕಾಪಶೆ,ಅಲ್ಲಾವುದ್ದೀನ ಹುಣಶ್ಯಾಳ, ಅಶ್ವೀನಿ ಬಡಿಗೇರ ಮಾಳಪ್ಪಾ ಕೇದಾರಿ ಹಾಜರಿದ್ದರು.
ಉಪನ್ಯಾಸಕ ಸಂಜೀವ ವಾಲಿ ಸ್ವಾಗತಿಸಿದರು ಉಪನ್ಯಾಸಕ ಎಂ.ಬಿ. ಸಿದ್ನಾಳ ನಿರೂಪಿಸಿ ವಂದಿಸಿದರು.

- Advertisement -
- Advertisement -

Latest News

ನಾಗೂರಲ್ಲಿ ಕ್ಲಸ್ಟರ್ ಮಟ್ಟದ ಕಲಿಕಾ ಹಬ್ಬ

ಹುನಗುಂದ: ತಾಲೂಕಿನ ನಾಗೂರ ಗ್ರಾಮದ ಸರಕಾರಿ ಮಾದರಿ ಪ್ರಾಥಮಿಕ ಶಾಲೆಯಲ್ಲಿ ಕ್ಲಸ್ಟರ್ ಮಟ್ಟದ ಎಫ್ಎಲ್ಎನ್ ಮಕ್ಕಳ ಕಲಿಕಾ ಹಬ್ಬ ನಡೆಯಿತು. ಕ್ಲಸ್ಟರಿನ ಹನ್ನೆರಡು ಶಾಲೆಗಳಿಂದ ಆಗಮಿಸಿದ 100ಕ್ಕೂ...
- Advertisement -

More Articles Like This

- Advertisement -
close
error: Content is protected !!
Join WhatsApp Group