spot_img
spot_img

ಮಕ್ಕಳಿಗೆ ಪಾಲಕರು ಉತ್ತಮ ಸಂಸ್ಕಾರ ನೀಡಿ ಬೆಳೆಸಬೇಕು – ಜಿ.ಬಿ.ಗೌಡಪ್ಪಗೋಳ

Must Read

spot_img
- Advertisement -

ವಿದ್ಯಾರ್ಥಿಗಳ ದತ್ತು ಸ್ವೀಕಾರ ಹಾಗೂ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ

ವಿಜಯಪುರ-ಇಂದು ಮೌಲ್ಯಯುತ ಹಾಗೂ ಸಂಸ್ಕಾರಯುತ ಸಮಾಜ ನಿರ್ಮಾಣದ ಅವಶ್ಯಕತೆಯಿದ್ದು, ಪಾಲಕರು ಮಕ್ಕಳಿಗೆ ಉತ್ತಮ ಸಂಸ್ಕಾರ ನೀಡಿ ಬೆಳೆಸಬೇಕಿದೆ ಎಂದು ವಾಣಿಜ್ಯ ತೆರಿಗೆ ಇಲಾಖೆಯ ನಿವೃತ್ತ ಉಪ ಆಯುಕ್ತ ಜಿ.ಬಿ.ಗೌಡಪ್ಪಗೋಳ ಹೇಳಿದರು.

ಬಾಗಲಕೋಟೆ ಜಿಲ್ಲೆಯ ಬೆನಕಟ್ಟಿಯ ಹೇಮ ವೇಮನ ಸದ್ಬೋಧನ ಪೀಠ ಹಾಗೂ ನಗರದ ಹಿರಿಯ ವಕೀಲ ಎಚ್.ಬಿ.ಶಿರೋಳ ಕುಟುಂಬದ ಆಶ್ರಯದಲ್ಲಿ ಭಾನುವಾರ ಪ್ಲೆಜಂಟ್ ಸ್ಟೇ ಹೋಟೆಲ್ ಸಭಾಭವನದಲ್ಲಿ ಜರುಗಿದ ಹೇಮ-ವೇಮನ ಸದ್ಬೋಧನ ಪೀಠದ ವಾರ್ಷಿಕೋತ್ಸವ, ಪ್ರತಿಭಾವಂತ ಬಡ ವಿದ್ಯಾರ್ಥಿಗಳ ದತ್ತು ಸ್ವೀಕಾರ, ವಿದ್ಯಾರ್ಥಿಗಳ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಅವರು ಮಾತನಾಡಿದರು.

- Advertisement -

ಮಹಾ ಸಾಧ್ಚಿ ಹೇಮರಡ್ಡಿ ಮಲ್ಲಮ್ಮಳ ಆದರ್ಶ ಬದುಕು ಹಾಗೂ ಮಹಾಯೋಗಿ ವೇಮನರ ತತ್ವ ಚಿಂತನೆಗಳನ್ನು ಮನೆ ಮನಗಳಿಗೆ ತಲುಪಿಸಿ ಸಮಾಜದಲ್ಲಿ ಪರಿವರ್ತನೆ ತರುವ ಉದ್ದೇಶ ಮತ್ತು ಪ್ರತಿಭಾವಂತ ಬಡ ವಿದ್ಯಾರ್ಥಿಗಳನ್ನು ಶೈಕ್ಷಣಿಕವಾಗಿ ದತ್ತು ಪಡೆದು ಅವರ ಕಲಿಕೆಗೆ ನೆರವಾಗುವ ಪುಣ್ಯದ ಕಾರ್ಯ ಮಾಡುವ ಮೂಲಕ ಹೇಮ-ವೇಮನ ಸದ್ಬೋಧನ ಪೀಠ ಸಮಾಜಕ್ಕೆ ಮಾದರಿಯಾಗಿದೆ ಎಂದ ಗೌಡಪ್ಪಗೋಳ, ಪೀಠದ ಕಾರ್ಯಕ್ಕೆ ರಡ್ಡಿ ಸಮಾಜ ಬೆನ್ನೆಲುಬಾಗಿ ನಿಲ್ಲಬೇಕು ಎಂದು ಹೇಳಿದರು.

ಉಪನ್ಯಾಸ ನೀಡಿದ ಹಿರಿಯ ಸಾಹಿತಿ ಬಿ.ಆರ್.ಪೋಲಿಸ್ ಪಾಟೀಲ, ಯಾರು ಸಮಾಜದ ಹಿತಕ್ಕಾಗಿ ಬದುಕಿ ಬಾಳಿರುತ್ತಾರೋ ಅವರು ಅಳಿದ ನಂತರವೂ ಜನಮಾನಸದ ಸ್ಮರಣೆಯಲ್ಲಿರುತ್ತಾರೆ. ಎಲ್ಲರಂತೆ ಸಾಮಾನ್ಯ ವ್ಯಕ್ತಿಗಳಾಗಿ ಆದರ್ಶದ ಬದುಕು ಬಾಳಿ ಜಗತ್ತಿಗೆ ಬೆಳಕಿನ ದಾರಿ ತೋರಿದ ಹೇಮರಡ್ಡಿ ಮಲ್ಲಮ್ಮ ಹಾಗೂ ಮಹಾಯೋಗಿ ವೇಮನರು ಇಂದು ಪೂಜ್ಯನೀಯ ಸ್ಥಾನದಲ್ಲಿ ನಿಂತಿದ್ದಾರೆ.ಅವರ ಆದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದರು.

ಅಧ್ಯಕ್ಷತೆ ವಹಿಸಿದ್ದ ವಿಜಯಪುರ ಹೇಮರಡ್ಡಿ ಮಲ್ಲಮ್ಮ ಸಂಸ್ಥೆಯ ಅಧ್ಯಕ್ಷ ಸುರೇಶ ದೇಸಾಯಿ(ಕಲಕೇರಿ) ಮಾತನಾಡಿ, ಹೇಮ ವೇಮನ ಸದ್ಬೋಧನ ಪೀಠದ ವಿದ್ಯಾರ್ಥಿಗಳ ದತ್ತು ಸ್ವೀಕಾರ ಕಾರ್ಯಕ್ರಮ ಪ್ರಶಂಸನೀಯ. ಬಡ ಮಕ್ಕಳ ಶಿಕ್ಷಣಕ್ಕಾಗಿ ನೆರವಾಗುವ ಈ ಕಾರ್ಯ ದೊಡ್ಡ ಪುಣ್ಯದ ಕೆಲಸ. ಇದರ ಪ್ರೇರಣೆಯಿಂದ ನಮ್ಮ ಸಂಸ್ಥೆಯೂ ವಿದ್ಯಾರ್ಥಿಗಳನ್ನು ದತ್ತು ಪಡೆಯುತ್ತಿದೆ ಎಂದು ಹೇಳಿದರು.

- Advertisement -

ಜೇವರ್ಗಿಯ ಸಿದ್ಧಬಸವ ಕಬೀರಾನಂದ ಸ್ವಾಮಿಗಳು ಮತ್ತು ಆಧ್ಯಾತ್ಮಿಕ ಚಿಂತಕ ಪ್ರದೀಪ ಗುರೂಜಿ ಮಾತನಾಡಿ, ಬಡ ಪ್ರತಿಭಾವಂತ ಮಕ್ಕಳನ್ನು ದತ್ತು ಪಡೆದು ಅವರ ಓದಿಗೆ ಸಹಾಯ ಮಾಡುವ ಪುಣ್ಯದ ಕಾರ್ಯ ಕೈಗೊಂಡಿರುವ ಸದ್ಬೋಧನ ಪೀಠಕ್ಕೆ ಇಡೀ ಸಮಾಜದ ಸಹಕಾರವಿರಲಿ ಎಂದರು.

ಕಾರ್ಯಕ್ರಮದಲ್ಲಿ ಇಬ್ಬರು ಪಿಯುಸಿ ಹಾಗೂ ಇಬ್ಬರು ಬಿಇ ಪ್ರವೇಶ ಪಡೆದ ಬಡ ವಿದ್ಯಾರ್ಥಿಗಳನ್ನು ದತ್ತು ಸ್ವೀಕರಿಸಲಾಯಿತಲ್ಲದೇ, ಕಳೆದ ವರ್ಷ ದತ್ತು ಪಡೆದಿರುವ ವಿದ್ಯಾರ್ಥಿಗಳಿಗೆ ಸಹಾಯಧನ ನೀಡಲಾಯಿತು. ರಡ್ಡಿ ಸಮಾಜದ ಪ್ರತಿಭಾವಂತ ಮಕ್ಕಳಿಗೆ ಪುರಸ್ಕಾರ ನೀಡಲಾಯಿತು.

ಎರೆಹೊಸಳ್ಳಿಯ ವೇಮನ ಸಂಸ್ಥಾನಮಠದ ರಡ್ಡಿ ಗುರುಪೀಠದ ಶ್ರೀ ವೇಮನಾನಂದ ಮಹಾಸ್ವಾಮೀಜಿ ಸಾನಿಧ್ಯ ವಹಿಸಿ ಆಶೀರ್ವಚನ ನೀಡಿದರು. ಎಚ್.ಬಿ.ಶಿರೋಳ, ಶಾರದಾ ಶಿರೋಳ, ಎಸ್.ಟಿ.ಪಾಟೀಲ, ಬಸವರಾಜ ಯಾಳಗಿ, ಹನಮಂತಗೌಡ ಪಾಟೀಲ(ಪಡಗಾನೂರ), ಅನಂದ ಶಿರೋಳ, ಶೈಲಾ ಶಿರೋಳ, ಸಂಗಪ್ಪ ಹುಣಸೀಕಟ್ಟಿ, ಕಾಶೀನಾಥ ಸಾಹುಕಾರ, ಡಿ.ಪಿ.ಅಮಲಝರಿ, ಮಹಾದೇವ ಪಾಟೀಲ, ಸದ್ಬೋಧನ ಪೀಠದ ನಿರ್ದೇಶಕ ರಂಗಣ್ಣ ಕಟಗೇರಿ, ರಮೇಶ ಅಣ್ಣಿಗೇರಿ, ಎಚ್.ಜಿ.ಹುದ್ದಾರ, ಡಿ.ಎಂ.ಬೆಣ್ಣೂರ, ವಿನಾಯಕ ಪಾಟೀಲ, ಈಶ್ವರ ಕೋನಪ್ಪನವರ, ಕೃಷ್ಣಾ ಯಡಹಳ್ಳಿ, ಸಿದ್ದಣ್ಣ ಮೆಳ್ಳಿಗೇರಿ, ಸಿ.ಎನ್.ಬಾಳಕ್ಕನವರ, ಮಾಲತೇಶ ಅಮಾತೆಪ್ಪನವರ, ಪೀಠದ ಕಾರ್ಯದರ್ಶಿ ಟಿ.ಎಚ್.ಸನ್ನಪ್ಪನವರ ಇದ್ದರು.
ಬೆನಕಟ್ಟಿಯ ಹೇಮರಡ್ಡಿ ಮಲ್ಲಮ್ಮ ಭಜನಾ ತಂಡದವರು ವೇಮನರ ವಚನ ಪ್ರಸ್ತುತಪಡಿಸಿದರು. ಇಂದಿರಾ ಬಿದರಿ ಸ್ವಾಗತಿಸಿದರು. ಅಜಿತಗೌಡ ಪಾಟೀಲ ನಿರೂಪಿಸಿದರು. ಶ್ರೀನಿವಾಸ ಬೆನಕಟ್ಟಿ ವಂದಿಸಿದರು.

- Advertisement -
- Advertisement -

Latest News

ಮಹಿಳೆಯರು ಒಳ್ಳೆಯ ಗೃಹಿಣಿಯಾಗುವುದರ ಜೊತೆಗೆ ಸಾಹಿತಿಗಳಾಗಿಯೂ ಹೊರಹೊಮ್ಮುತ್ತಿದ್ದಾರೆ – ಶಾಸಕ ವಿಶ್ವಾಸ ವೈದ್ಯ

ಸವದತ್ತಿ : ಈಗಿನ ಮಹಿಳೆಯರು ಮನಸ್ಸು ಮಾಡಿದರೆ ಏನೆಲ್ಲವನ್ನು ಸಾಧಿಸಬಹುದು ಈಗಿನ ಮಹಿಳೆಯರು ಎಲ್ಲ ರಂಗಗಳಲ್ಲಿಯೂ ಮುಂದೆ ಇದ್ದಾರೆ ಅದರಂತೆ ಸಾಹಿತ್ಯದಲ್ಲಿಯೂ ಕೂಡ ಅವರು ಮುಂದೆ...
- Advertisement -

More Articles Like This

- Advertisement -
close
error: Content is protected !!
Join WhatsApp Group