spot_img
spot_img

ಶಾಲೆಯತ್ತ ಪರಿಷತ್ತಿನ ನಡೆ ಕಾರ್ಯಕ್ರಮ

Must Read

spot_img
- Advertisement -

ಸವದತ್ತಿ –  ಸವದತ್ತಿಯ ಕುಮಾರೇಶ್ವರ ಪದವಿ ಪೂರ್ವ ಮಹಾವಿದ್ಯಾಲಯದಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ಸವದತ್ತಿ‌ ವತಿಯಿಂದ ಶಾಲೆಯತ್ತ ಪರಿಷತ್ತಿನ ನಡೆ ಎಂಬ ವಿನೂತನ ಕಾರ್ಯಕ್ರಮದ ಎರಡನೆ ಸಮಾರಂಭ ಏರ್ಪಡಿಸಲಾಗಿತ್ತು.

ಸಮಾರಂಭದ ಅಂಗವಾಗಿ ರಾಷ್ಟ್ರಕವಿ ಕುವೆಂಪು ಅವರ ಜನ್ಮದಿನ ಆಚರಿಸಲಾಯಿತು. ಅದರೊಂದಿಗೆ ಕ.ಸಾಪ ತಾಲೂಕ ಘಟಕದ ಕಾರ್ಯದರ್ಶಿಗಳಾದ ಬಿ. ಎನ್ .ಹೊಸೂರ ಅವರ ಸೇವಾ ನಿವೃತ್ತಿ ಕಾರಣ ಅವರನ್ನು ಸನ್ಮಾನಿಸಲಾಯಿತು.

ಸಮಾರಂಭದ ಉಪನ್ಯಾಸಕರಾಗಿದ್ದ ಕಸಾಪ ಅಧ್ಯಕ್ಷರಾದ ಡಾ .ವೈ.ಎಂ‌ ಯಾಕೊಳ್ಳಿ ಯವರು ಕುವೆಂಪು ಅವರ ಬದುಕು ಕುರಿತು ಉಪನ್ಯಾಸ ನೀಡಿದರು.‌

- Advertisement -

ಕುವೆಂಪು ಕನ್ನಡದ ಮೇರು‌ಕವಿ‌, ಮಹಾಕವಿ ರಾಷ್ಟ್ರಕವಿ, ಮಹಾಕಾವ್ಯ ರಚಿಸಿದ ಮೊದಲ ಮಹಾಕವಿ ಎಂದು ವಿವರಿಸಿದರು. ಅವರ ಹತ್ತು ಸಾವಿರ ಪುಟಗಳ ಮಹಾಕಾವ್ಯ ಸೃಷ್ಟಿ ಪರ್ವತ ಸಮ ಕನ್ನಡಿಗರ ಮಹಾಭಾಗ್ಯ ಎಂದು ವಿವರಿಸಿದರು.‌ ಕುವೆಂಪು ಎಂಬ ಮೂರಕ್ಷರದ ಹೆಸರು ಕನ್ನಡಿಗರಿಗೆ ತ್ರ್ಯಕ್ಷರಿ ಮಂತ್ರ ಇದ್ದಂತೆ ಎಂದರು.

ಕಾರ್ಯಕ್ರಮದ ಉದ್ಘಾಟನೆಯನ್ನು ಬಸವರಾಜ ಹೂಲಿಕಟ್ಟಿ ಯವರು ನೆರವೇರಿಸಿದರು. ವೇದಿಕೆಯ ಮೇಲೆ ಮುಖ್ಯ ಅತಿಥಿಗಳಾಗಿ ಬಿ.ವಿ.ಬಿ ನರಗುಂದ ಸರ್, ನಿವೃತ್ತ ಉಪನಿರ್ದೇಶಕರಾದ ಜಿ .ಎ.ತಿಗಡಿ ಸರ್, ಸಂಸ್ಥೆಯ ನಿರ್ದೇಸಕರಾದ ಅಕ್ಕಿಯವರು , ಬಿ ಎನ್ ಹೊಸೂರವರು, ಸಂಸ್ಥೆಯ ಪ್ರಾಚಾರ್ಯರಾದ ಕೋರಿಯವರು ,ಹಿರಿಯ ವಕಿಲರಾದ ಶ್ರೀ ದೊಡಗೌಡರ ಅವರು , ನಿಡೊಣಿಯವರು ಉಪಸ್ಥಿತರಿದ್ದರು.ಕಾರ್ಯಕ್ರಮ ನಿರೂಪಣೆಯನ್ನು ಉಪನ್ಯಾಸಕರಾದ ಟಪಾಲರವರು ನೆರವೇರಿಸಿದರು.

ಡಾ. ಪ್ರೇಮಾ ಯಾಕೊಳ್ಳಿಯವರು ಪರಿಚಯ ನಡೆಸಿಕೊಟ್ಟರು ಇನ್ನೊರ್ವ ಉಪನ್ಯಾಸಕರಾದ ಹೊಸೂರವರು ಅತಿಥಿ ಪರಿಚಯ ನಡೆಸಿಕೊಟ್ಟರು. ಉಪನ್ಯಾಸಕರಾದ ಬೀಳಗಿಯವರು ವಂದನಾರ್ಪಣೆ ನಿರ್ವಹಿಸಿದರು.

- Advertisement -

LEAVE A REPLY

Please enter your comment!
Please enter your name here

- Advertisement -

Latest News

ಸಾಲದ ಸುಳಿಗೆ ಸಿಲುಕಿ ರೈತ ಆತ್ಮಹತ್ಯೆ

ಸಿಂದಗಿ: ಸಾಲದ ಸುಳಿಗೆ ಸಿಲುಕಿದ ರೈತನೊಬ್ಬ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ತಾಲೂಕಿನ ಮನ್ನಾಪುರ ಗ್ರಾಮದಲ್ಲಿ ನಡೆದಿದೆ. ಗ್ರಾಮದ ದುಂಡಪ್ಪ ಸಿದ್ರಾಮಪ್ಪ ಮನಗೂಳಿ(೩೫) ಮೃತ ದುರ್ದೈವಿ ರೈತನಾಗಿದ್ದಾನೆ....
- Advertisement -

More Articles Like This

- Advertisement -
close
error: Content is protected !!
Join WhatsApp Group