spot_img
spot_img

ಕ್ರೀಡೆಯಲ್ಲಿ ಭಾಗವಹಿಕೆ ಮುಖ್ಯ; ಸೋಲು ಗೆಲುವಲ್ಲ – ಪಿಎಸ್ಐ ಬಾಲದಂಡಿ

Must Read

ಮೂಡಲಗಿ: ಕ್ರೀಡೆಯಲ್ಲಿ ಸೋಲು-ಗೆಲುವು ಮುಖ್ಯವಲ್ಲ ಭಾಗವಹಿಸುವಿಕೆ ಮುಖ್ಯ, ಮನುಷ್ಯ ದೈಹಿಕವಾಗಿ ಮಾನಸಿಕವಾಗಿ ಸದೃಢವಾಗಿ ಇರಬೇಕಾದರೆ ಕ್ರೀಡೆ ಅತಿ ಅವಶ್ಯಕವಾಗಿದೆ ಎಂದು ಮೂಡಲಗಿ ಪಿಎಸ್‍ಐ ಹಾಲಪ್ಪ ಬಾಲದಂಡಿ ಹೇಳಿದರು.

ಗುರುವಾರದಂದು ಮೂಡಲಗಿ ಶಿಕ್ಷಣ ಸಂಸ್ಥೆಯ ಮೈದಾನದಲ್ಲಿ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಬೆಳಗಾವಿ ತಾಲೂಕ ಪಂಚಾಯಿತಿ, ಪುರಸಭೆ, ಶಿಕ್ಷಣ ಇಲಾಖೆ ಮೂಡಲಗಿ ಶಿಕ್ಷಣ ಸಂಸ್ಥೆ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ಮೂಡಲಗಿ ತಾಲೂಕ ಮಟ್ಟದ ದಸರಾ ಕ್ರೀಡಾಕೂಟದ ಮುಖ್ಯ ಅತಿಥಿಗಳಾಗಿ ಮಾತನಾಡಿದ ಅವರು,  ಪ್ರತಿಯೊಬ್ಬರೂ ಕ್ರೀಡಾ ಮನೋಭಾವ ಬೆಳೆಸಿಕೊಳ್ಳಬೇಕೆಂದು ಹೇಳಿದರು.

ಸ್ವಾಮಿ ವಿವೇಕಾನಂದ ರಾಜ್ಯ ಯುವ ಪ್ರಶಸ್ತಿ ವಿಜೇತರಾದ ಸಿದ್ದಣ್ಣ ದುರದುಂಡಿ ಮಾತನಾಡಿ, ದಸರಾ ಕ್ರೀಡಾಕೂಟ ಗ್ರಾಮೀಣ ಭಾಗದ ಕ್ರೀಡಾಪಟುಗಳಿಗೆ ರಾಜ್ಯ ಮಟ್ಟದವರೆಗೆ ಹೋಗಲು ಅವಕಾಶವಿದೆ ಇದರ ಸದುಪಯೋಗವನ್ನು ಎಲ್ಲಾ ಕ್ರೀಡಾಪಟುಗಳು ನಮ್ಮ ನಾಡಿನ ಕೀರ್ತಿಯನ್ನು ತರಬೇಕೆಂದು ಹೇಳಿದರು.

ಹೆಣ್ಣಿರಲಿ ಗಂಡಿರಲಿ ಮನೆಗೊಂದು ಕ್ರೀಡಾಪಟು ಇರಲಿ. ಕಬಡ್ಡಿ ಕೋಕೋ ವಾಲಿಬಾಲ್ ತ್ರೋಬಾಲ್ ರನ್ನಿಂಗ್ ಹೀಗೆ ಹಲವಾರು ವೈಯಕ್ತಿಕ ಆಟಗಳು ನಡೆಸುವ ಕ್ರೀಡಾ ಇಲಾಖೆ ಕಾರ್ಯ ಶ್ಲಾಘನಿಯವಾಗಿದೆ ಎಂದು ಹೇಳಿದರು.

ಮೂಡಲಗಿ ಶಿಕ್ಷಣ ಸಂಸ್ಥೆಯ ಸಂಸ್ಥೆಯ ಅಧ್ಯಕ್ಷ ವಿಜಯಕುಮಾರ ಸೋನವಾಲಕರ ಮತ್ತು  ಪುರಸಭೆ ಅಧ್ಯಕ್ಷ ಹಣಮಂತ ಗುಡ್ಲಮನಿ ಕ್ರೀಡಾಜ್ಯೋತಿ ಸ್ವೀಕರಿಸಿ ಸಸಿಗೆ ನೀರುಣಿಸುವ ಮೂಲಕ ಕಾರ್ಯಕ್ರಮವನ್ನು  ಉದ್ಘಾಟಿಸಿದರು.

ಸಮಾರಂಭದಲ್ಲಿ ಇದೇ ಆ.20 ರಿಂದ 24 ರವರಿಗೆ ನಡೆಯುವ 7ನೇ ಏಶಿಯನ್ ಪ್ಯಾರಾ ಟೆಕ್ವಾಂಡೋ ಒಪನ್ ಚಾಂಪಿಯನ್‍ಶಿಪ್‍ಗೆ ಆಯ್ಕೆಯಾದ ಪಟ್ಟಣದ  ಲಕ್ಷ್ಮೀ ಮಲ್ಲಪ್ಪ ರಡರಟ್ಟಿ ಕ್ರೀಡಾಪಟ್ಟುವನ್ನು  ದಸರಾ ಪಂದ್ಯಾವಳಿಯಲ್ಲಿ ಸನ್ಮಾನಿಸಿ ಗೌರವಿಸಲಾಯಿತು.

ಕಾರ್ಯಕ್ರಮದಲ್ಲಿ ಮೂಡಲಗಿ ಪುರಸಭೆ ಉಪಾಧ್ಯಕ್ಷೆ ರೇಣುಕಾ ಹಾದಿಮನಿ ದೈಹಿಕ ಶಿಕ್ಷಣ ಪರಿವೀಕ್ಷಕ  ಜೂನೆದಿ ಪಟೇಲ್, ಮೂಡಲಗಿ ಶಿಕ್ಷಣ ಸಂಸ್ಥೆಯ ಸಂಸ್ಥೆಯ  ನಿರ್ದೇಶಕ ರವೀಂದ್ರ ಸೋನವಾಲಕರ,  ಕಾಲೇಜಿನ ಪ್ರಾಚಾರ್ಯ ಎ.ಪಿ.ರೆಡ್ಡಿ, ಮಂಜುನಾಥ ಸಂಸ್ಥೆಯ ಅಧ್ಯಕ್ಷ ಲಕ್ಷ್ಮಣ ಅಡಿಹುಡಿ, ರಾಷ್ಟ್ರೀಯ ಪ್ರಶಸ್ತಿ ವಿಜೇತರಾದ ಶಿವನಪ್ಪ ಗುದಗಣವರ, ಯುವ ಸಬಲೀಕರಣ ಕ್ರೀಡಾ ಇಲಾಖೆ ಬಸವರಾಜ ಜಕ್ಕಣ್ಣವರ ಅನ್ವರ ನದಾಫ್, ಬಸು ಜಂಡೆಕುರುಬರ,  ಡಾ ದೀಪಾ ಮಾಚಪ್ಪನವರ, ಅಕ್ಕಮಹಾದೇವಿ ಮಾದರ, ರಾಘವೇಂದ್ರ ದೊಡವಾಡ, ಯಲ್ಲಪ್ಪ ಭರಮಣ್ಣವರ, ಲಕ್ಷ್ಮಿಭಾಯಿ  ಜೋಕಾನಟ್ಟಿ, ಗೂಳಪ್ಪ ವಿಜಯನಗರ, ಐಶ್ವರ್ಯ ತಳವಾರ ಯಮನವ್ವ ಮಾದರ ಸಂಘಟಿಕರು ಪದಾಧಿಕಾರಿಗಳು ಮುಂತಾದವರು ಉಪಸ್ಥಿತರಿದ್ದರು.

ಉಪನ್ಯಾಸಕರಾದ  ಭೀಮಶಿ ಬಡಗಣ್ಣವರ ನಿರೂಪಿಸಿ ವಂದಿಸಿದರು. ಜಿಲ್ಲಾ ಯುವ ಪ್ರಶಸ್ತಿ ವಿಜೇತ ಹನುಮಂತ ಮದನವರ ವಂದಿಸಿದರು.

- Advertisement -
- Advertisement -

Latest News

ಗಾಣಿಗ ಅಭಿವೃದ್ಧಿ ನಿಗಮ ಸ್ಥಾಪನೆಗೆ ಕಲ್ಲಿನಾಥ ಶ್ರೀ ಆಗ್ರಹ

ಮೂಡಲಗಿ: ಜಗತ್ತಿಗೆ ಬೆಳಕನ್ನು ಕೊಟ್ಟ  ಗಾಣಿಗ ಸಮುದಾಯ ಇಂದು ಗಾಣಗಳು ಬತ್ತಿ ಹೋಗಿ ಯಂತ್ರೋಪಕರಣ ಬಂದಾಗಿನಿಂದ ಮೂಲ ಕಸಬು ಕಳೆದುಕೊಂಡು ಶೋಷನೆಗೆ ಒಳಗಾಗಿರುವದರಿಂದ ಗಾಣಿಗ ಸಮಾಜಕ್ಕೆ...
- Advertisement -

More Articles Like This

- Advertisement -
close
error: Content is protected !!