ಬೀದರ – ವಿಜಯೇಂದ್ರ ಪಕ್ಷದ ಅಧ್ಯಕ್ಷ ರಾದ ಮೇಲೆ ಪಕ್ಷ ಗಟ್ಟಿಯಾಗಿದೆ. ಮನೆಜಗಳ ಇದೆ ಅದನ್ನು ಒಪ್ಪುತ್ತೇನೆ ಆದರೆ ನಮ್ಮ ಕೆಲವು ನಾಯಕರ ವರ್ತನೆ ಸರಿಯಲ್ಲ ಎಂದು ಶಾಸಕ ಪ್ರಭು ಚವ್ಹಾಣ ಹೇಳಿದರು
ಗ್ರಾಮ ಸಂಚಾರ ಮುಕ್ತಾಯವಾದ ಹಿನ್ನೆಲೆಯಲ್ಲಿ ಜಿಲ್ಲೆಯ ವಡಗಾಂವ್ ಗ್ರಾಮದಲ್ಲಿ ಹಮ್ಮಿಕೊಂಡಿದ್ದ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು.
ಭಿನ್ನಮತೀಯ ರು ಈ ರೀತಿ ಮಾಡಬಾರದು. ವಿಜಯೇಂದ್ರ ಬಿಜೆಪಿ ರಾಜ್ಯಾಧ್ಯಕ್ಷರಾದನಂತರ ರಾಜ್ಯದಲ್ಲಿ ಪಕ್ಷಕ್ಕೆ ಚೈತನ್ಯ ಬಂದಿದೆ. ಅವರು ಉತ್ತಮ ವ್ಯಕ್ತಿ. ಸುಧಾಕರ ಅವರು ಪಕ್ಷಕ್ಕೆ ಈಗ ಬಂದು ಮಾತನಾಡುವುದು ಸರಿಯಲ್ಲ ಎಂದರು.
ವಿಜಯೇಂದ್ರ ಅವರಿಂದಲೇ ಸುಧಾಕರ ಎಂಪಿ ಆಗಿದ್ದಾರೆ. ಯಡಿಯೂರಪ್ಪ, ಅನಂತಕುಮಾರ, ಪ್ರಹ್ಲಾದ ಜೋಶಿಯವರು ಕಟ್ಟಿದ ಪಕ್ಷಕ್ಕೆ ನಮ್ಮ ಉಳಿದ ನಾಯಕರು ಹೀಗೆ ಮಾತನಾಡಬಾರದು. ಭಿನ್ನಮತ ಬಿಡಬೇಕು ಎಂದು ಪ್ರಭು ಚವ್ಹಾಣ ಹೇಳಿದರು.