spot_img
spot_img

ಕಚೇರಿ ಸಿಬ್ಬಂದಿ, ಸಂಬಂಧಿಗಳಿಂದ ಕಾರ್ಯಕ್ರಮ ಉದ್ಘಾಟನೆ ಮಾಡಿಸುವ ನಾಯಕರಿಂದ ಪಕ್ಷಕ್ಕೆ ಹಾನಿ – ಈರಣ್ಣ ಕಡಾಡಿ

Must Read

spot_img
- Advertisement -

ಸಂಸದರನ್ನು ಕರೆಯದೆ ಕಾರ್ಯಕ್ರಮ ನಡೆಸಿದ್ದಕ್ಕೆ ಆಕ್ರೋಶ.

ಬೆಳಗಾವಿ: ಜಿಲ್ಲೆಯ ಅರಭಾವಿ ಹಾಗೂ ಗೋಕಾಕ ಕ್ಷೇತ್ರಗಳ ಶಾಸಕರು ಹಮ್ಮಿಕೊಂಡ ಸರ್ಕಾರಿ ಕಾರ್ಯಕ್ರಮಗಳಲ್ಲಿ ಜಿಲ್ಲೆಯ ಸಂಸದರು, ರಾಜ್ಯ ಸಭಾ ಸದಸ್ಯರನ್ನು ಕಡೆಗಣಿಸಿ ಪ್ರೊಟೊಕಾಲ್ ಉಲ್ಲಂಘನೆ ಮಾಡಿರುವ ಬಗ್ಗೆ ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ ತಮ್ಮ ತೀವ್ರ ಅಸಮಾಧಾನ ತೋಡಿಕೊಂಡಿದ್ದಾರೆ.

ಸರಣಿ ಟ್ವೀಟ್ ಮಾಡಿರುವ ಅವರು ವಿರೋಧ ಪಕ್ಷಗಳವರು ಕ್ಷೇತ್ರದ ಶಾಸಕರನ್ನು ಸಮಾರಂಭಗಳಿಗೆ ಕರೆಯದೆ ಶಿಷ್ಟಾಚಾರ ಉಲ್ಲಂಘಿಸಿದ್ದಾರೆ ಎನ್ನುವವರು ಮೊದಲು ತಾವು ತಮ್ಮದೇ ಪಕ್ಷದ ಸಂಸದರಿಗೆ ಎಷ್ಟು ಬೆಲೆ ಕೊಟ್ಟಿದ್ದಾರೆ ಎಂಬುದನ್ನು ನೋಡಿಕೊಳ್ಳಬೇಕು ಎಂಬರ್ಥದಲ್ಲಿ ಕುಟುಕಿದ್ದಾರೆ.

- Advertisement -

“ವಿರೋಧ ಪಕ್ಷದ ಶಾಸಕರೊಬ್ಬರು ಸರ್ಕಾರಿ ಕಾರ್ಯಕ್ರಮಗಳಲ್ಲಿ ಶಿಷ್ಟಾಚಾರ ಉಲ್ಲಂಘಿಸುತ್ತಿದ್ದಾರೆ ಎಂದು ಮಾತನಾಡುವ ನಮಗೆ ನಮ್ಮದೆ ಪಕ್ಷದ ಸ್ಥಳೀಯ ಸಂಸದರನ್ನು ಅದೇ ಸರ್ಕಾರಿ ಕಾರ್ಯಕ್ರಮಗಳಲ್ಲಿ ಜೊತೆಗೂಡಿಸಿಕೊಂಡು ಹೋಗದಿರುವ ನಮ್ಮ ಹೃದಯ ವೈಶಾಲ್ಯತೆಗೆ ಜನ ಏನೆಂದಾರು ? ಎಂಬ ಕನಿಷ್ಠ ಜ್ಞಾನವಿರಬೇಕು ” ಎಂದು ಒಂದು ಟ್ವೀಟ್ ನಲ್ಲಿ ತಮ್ಮ ಆಕ್ರೋಶ ಹೊರಹಾಕಿದ್ದಾರೆ.

ದಿ. ೧ ರಂದು ಗೋಕಾಕ ಮತಕ್ಷೇತ್ರದಲ್ಲಿ ೯೬೯ ಜೋಟಿ. ರೂ. ವೆಚ್ಚದಲ್ಲಿ ನಿರ್ಮಿಸಲಾಗುತ್ತಿರುವ ಮಾರ್ಕಂಡೇಯ ನದಿಗೆ ಅಡ್ಡಲಾಗಿ ನಿರ್ಮಿಸುತ್ತಿರುವ ಘಟ್ಟಿ ಬಸವಣ್ಣ ಕುಡಿಯುವ ನೀರು ಸರಬರಾಜು ಯೋಜನೆಯ ಯೋಜನೆಯ ಕಾರ್ಯಕ್ರಮಕ್ಕೆ ಬೆಳಗಾವಿಯ ಸಂಸದೆ ಶ್ರೀಮತಿ ಮಂಗಳಾ ಅಂಗಡಿ ಹಾಗೂ ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿಯವರನ್ನು ಕರೆಯಲೇ ಇಲ್ಲ ! 

- Advertisement -

ಅರಭಾವಿ ಮತ್ತು ಗೋಕಾಕ ಮತಕ್ಷೇತ್ರಗಳಲ್ಲಿ ಕೆಲವು ಕಾರ್ಯಕ್ರಮಗಳಿಗೆ ತಮ್ಮ ಕಚೇರಿಯ ಸಿಬ್ಬಂದಿ ಹಾಗೂ ತಮ್ಮ ಸಹೋದರ ಸಂಬಂಧಿಗಳ ಕಡೆಯಿಂದ ಚಾಲನೆ ಕೊಡಿಸುವವರು ಬೇರೆಯವರ ಶಿಷ್ಟಾಚಾರ ಪಾಲನೆಯ ಬಗ್ಗೆ ಮಾತನಾಡಬಾರದು. ಜನ ಏನೆಂದಾರು ಎಂಬ ಕನಿಷ್ಠ ಜ್ಞಾನವಿರಬೇಕು ಎಂದು ಹೇಳಿದ್ದಾರೆ.

ಭಾರತೀಯ ಜನತಾ ಪಕ್ಷ ಪರಿವಾರವಾದವನ್ನು ವಿರೋಧಿಸುತ್ತದೆ. ಮೌಲ್ಯಾಧಾರಿತ ತತ್ವಗಳ ಪಕ್ಷದಲ್ಲಿ ವ್ಯಕ್ತಿಯೊಬ್ಬರ ತೆವಲುಗಳಿಗೆ ಪಕ್ಷ ಮಣೆ ಹಾಕಬಾರದು. ಇಲ್ಲದಿದ್ದರೆ ನಾಯಕರು ಭಾರೀ ಬೆಲೆ ತೆರಬೇಕಾಗುತ್ತದೆ ಎಂದು ಈರಣ್ಣ ಕಡಾಡಿ ಎಚ್ಚರಿಸಿದ್ದಾರೆ.

ಅರಭಾವಿಯಲ್ಲಿ ಬಾಲಚಂದ್ರ ಜಾರಕಿಹೊಳಿ ತಮ್ಮ ಕಚೇರಿಯ ಸಿಬ್ಬಂದಿಯ ಕಡೆಯಿಂದ ಹಾಗೂ ಪಕ್ಷದ ಯಾವುದೇ ಹುದ್ದೆಯಲ್ಲಿ ಇರದ ಸರ್ವೋತ್ತಮ ಜಾರಕಿಹೊಳಿಯಿಂದ ಸಮಾರಂಭ ಮಾಡಿಸುತ್ತಾರೆ. ಅಲ್ಲಿ ಕಾಂಗ್ರೆಸ್ ನ ಲಕ್ಷ್ಮಿ ಹೆಬ್ಬಾಳಕರ ಆಗಲಿ ಯಾರೇ ಆಗಲಿ ತಮ್ಮನ್ನು ಕರೆಯದಿದ್ದರೆ ಶಿಷ್ಟಾಚಾರ ಉಲ್ಲಂಘನೆ ಎಂದು ರಮೇಶ ಜಾರಕಿಹೊಳಿ ಹೇಳುತ್ತಾರೆ ಆದರೆ ತಾವೇ ಅದನ್ನು ಪಾಲಿಸುವುದಿಲ್ಲ. ಈ ಬಗ್ಗೆ ಗಮನ ಕೊಡದಿದ್ದರೆ ಪಕ್ಷದ ಉನ್ನತ ನಾಯಕರು ಭಾರೀ ಬೆಲೆ ತೆರಬೇಕಾಗುತ್ತದೆ ಎಂದು ಈರಣ್ಣ ಕಡಾಡಿ ಸೂಚ್ಯವಾಗಿ ಎಚ್ಚರಿಕೆ ನೀಡಿದ್ದಾರೆ.

ಮುಂಬರುವ ವಿಧಾನ ಸಭಾ ಚುನಾವಣೆಯ ಹಿನ್ನೆಲೆಯಲ್ಲಿ ಯಾವುದೇ ಪಕ್ಷದ ನಾಯಕರು ತಮ್ಮಲ್ಲಿನ ಭಿನ್ನಾಭಿಪ್ರಾಯ ಬಹಿರಂಗ ಮಾಡಿಕೊಳ್ಳುವುದು ಪಕ್ಷಕ್ಕೆ ಹಿತವಲ್ಲ. ಕ್ಷೇತ್ರದಲ್ಲಿ ಬರೀ ತಾವೇ ಮಿಂಚಬೇಕು ಎಂಬ ಕೆಲವು ನಾಯಕರ ಧೋರಣೆ ಕೊನೆಗೆ ಪಕ್ಷಕ್ಕೆ ಹೊಡೆತ ನೀಡುತ್ತದೆ ಹೊರತು ಇದರಿಂದ ಯಾವ ಮಹಾನ್ ಉದ್ದೇಶವೂ ನೆರವೇರಲಾರದು ಎಂದು ಸಂಸದರು ಸರಣಿ ಟ್ವೀಟ್ ದಲ್ಲಿ ಎಚ್ಚರಿಸಿದ್ದಾರೆ

- Advertisement -
- Advertisement -

Latest News

ವಿಶ್ವ ಶಾಂತಿಗೆ ಕುವೆಂಪು ಚಿಂತನೆಗಳೇ ದಾರಿದೀಪ : ಡಾ. ಭೇರ್ಯ ರಾಮಕುಮಾರ್

ಇಂದು ವಿಶ್ವವನ್ನು ಕಾಡುತ್ತಿರುವ ಹಿಂಸೆ, ಭಯೋತ್ಪಾದನೆ, ಯುದ್ಧಗಳ ನಿವಾರಣೆಗೆ ರಾಷ್ಟ್ರಕವಿ ಕುವೆಂಪು ಅವರ ವಿಶ್ವಮಾನವ ತತ್ವವೊಂದೇ ಪರಿಹಾರ ಎಂದು ಕನ್ನಡ ಸಾಹಿತ್ಯ ಪರಿಷತ್ ದತ್ತಿ ಪ್ರಶಸ್ತಿ...
- Advertisement -

More Articles Like This

- Advertisement -
close
error: Content is protected !!
Join WhatsApp Group